More

    ಸರ್ವ ಧರ್ಮಗಳ ಗುರಿ ಸೌಹಾರ್ದತೆ

    ಚಿತ್ರದುರ್ಗ: ಸಾಮಾಜಿಕ ಶಾಂತಿ ನೆಲೆಸಲು ವೈಯಕ್ತಿಕ ಶಾಂತಿ, ಸಹನೆ ಅಗತ್ಯವಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಮುರುಘ ಮಠದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಶರಣ ಸಂಗಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವೈಯಕ್ತಿಕ ಶಾಂತಿ ಸಾವಿರಾರು ಜನರಲ್ಲಿ ಸೌಹಾರ್ದತೆ ತರುತ್ತದೆ. ಬಹಿರಂಗ ಪೂಜೆ, ಪ್ರಾರ್ಥನೆಯೊಂದಿಗೆ ವಿಶ್ವಶಾಂತಿಗೆ ಒತ್ತು ಕೊಡಲಾಗುತ್ತಿದೆ. ಸಮಾಜದಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಅಸಹನೆಗೆ ಗುರಿಯಾಗುತ್ತಾರೆ ಎಂದರು.

    ಎಲ್ಲ ಧರ್ಮಗಳ ನೇತಾರರ ಮೂಲ ಉದ್ದೇಶ ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣ. ಈ ಕಾರಣಕ್ಕೆ ಸಮಾಜದಲ್ಲಿ ಧರ್ಮ ದಾಂಧಲೆ, ಜಾತಿ ಸಂಘರ್ಷಗಳು ಕಡಿಮೆಯಾಗಿವೆ. ಮಾನವನಲ್ಲಿ ಶಾಂತಿ, ಪ್ರೀತಿ ಜತೆ ನೀತಿ ಇರಬೇಕು ಎಂದು ತಿಳಿಸಿದರು.

    ನಮ್ಮ ಬದುಕಿನಲ್ಲಿ ಅಶಾಂತಿ ನಿಲ್ಲಬೇಕೆಂದರೆ ಶಾಂತಿ ಮತ್ತು ಶಿವಾನುಭವದ ತುಡಿತ ಬೇಕಿದೆ. ಶರಣ ಸಂಗಮವೂ ಒಂದು ರೀತಿ ಶಿಕ್ಷಣ. ಇದು ಬದುಕಿನ ಶಿಕ್ಷಣ. ಇದರಿಂದ ಉನ್ನತ ಶಿಕ್ಷಣ ದೊರೆಯುತ್ತದೆ ಎಂದರು.

    ಡಾ.ಅಂತೋನಿ ಪೀಟರ್ ಮಾತನಾಡಿ, ಧರ್ಮ ಜಾತಿ ಮುಖ್ಯವಲ್ಲ. ಶಾಂತಿಗೂ ದೇವರಿಗೂ ಅವಿನಾಭಾವ ಸಂಬಂಧವಿದೆ. ಮನುಷ್ಯ ತನ್ನ ಹುಟ್ಟು, ಬೆಳವಣಿಗೆ, ತೋರುವ ಪ್ರೀತಿ, ಸಂಸ್ಕಾರಗಳ ಮೇಲೆ, ಒಳಿತು ಕೆಡುಕಗಳ ಅನಾವರಣವಾಗುತ್ತದೆ. ಮನುಷ್ಯ-ಮನುಷ್ಯನ ನಡುವೆ ಬಾಂಧ ವ್ಯವಿದ್ದರೆ ನಮಗೆ ಶಾಂತಿ ದೊರೆಯುತ್ತದೆ ಎಂದರು.

    ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಂ.ರಂಗನಾಥ್ ಅವರನ್ನು ಗೌರವಿಸಲಾಯಿತು. ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರಾಚಾರ್ಯ ಡಾ.ಕೆ.ಸಿ.ರಮೇಶ್ ಉಪ ಸ್ಥಿತರಿದ್ದರು.

    ಜಮುರಾ ಕಲಾವಿದರು ಪ್ರಾರ್ಥಿಸಿದರು. ಶ್ರೀನಿವಾಸ್ ಸ್ವಾಗತಿಸಿದರು. ಅನ್ನಪೂಣೇಶ್ವರಿ ನಿರೂಪಿಸಿದರು. ಸಬಿಯಾಬಾನು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts