More

    ಮುರುಘಾ ಮಠದಲ್ಲಿ ಜೋಡೆತ್ತುಗಳ ಪ್ರದರ್ಶನ

    ಚಿತ್ರದುರ್ಗ: ಅದೃಷ್ಟ ಕೆಟ್ಟಿದ್ದರೆ ಈ ಹೊತ್ತಿಗೆ ಕೇರಳದ ಕಸಾಯಿಖಾನೆಯಲ್ಲಿ ಜೀವ ತೆತ್ತ್ತಿಬೇಕಿದ್ದ ಈ ಜೋಡಿತ್ತು, ದಾವಣಗೆರೆ ಹೆಬ್ಬಾಳ ಮಠದಲ್ಲಿ ಆಶ್ರಯ ಪಡೆದು ‘ರುದ್ರ’ಮನೋಹರವಾಗಿ ಬದುಕಿರುವುದು ಪವಾಡವೇ ಸರಿ.
    ಹೌದು 2 ತಿಂಗಳ ಹಿಂದೆ ಅಕ್ರಮ ಗೋ ಸಾಗಣೆಯನ್ನು ಪತ್ತೆ ಮಾಡಿದ್ದ ದಾವಣಗೆರೆ ಗ್ರಾಮಾಂತರ ಪೊಲೀಸರಿಂದಾಗಿ ರುದ್ರ ಹೆಸರಿನ ಕಿಲಾರಿ ತಳಿಯ ಈ ಎತ್ತುಗಳು ಹೆಬ್ಬಾಳ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರ ಕಣ್ಗಾವಲಿನಲ್ಲಿ ಈಗ ಇವೆ.
    ಈ ಎತ್ತುಗಳ ಜತೆ ಜಿಲ್ಲೆಯ ವಿವಿಧೆಡೆಯಿಂದ ಕರೆ ತಂದಿದ್ದ ಹಳ್ಳಿಕೇರಿ,ಸಿಂಧಿ,ನಾಟಿ,ಗೀರ್,ಎಮ್ಮೆ ಸಿಂಧಿ,ಸಿಂಧಿ ಹಸು ಇತ್ಯಾದಿ 65ಕ್ಕೂ ಹೆಚ್ಚಿನ ವೈವಿಧ್ಯ ತಳಿಗಳ ಪ್ರದರ್ಶನ ಗಮನ ಸೆಳೆಯಿತು.
    ಪ್ರದರ್ಶನದಲ್ಲಿ ಒಂಟೆ,ಆನೆ ಮತ್ತು ಕುದುರೆಗಳೂ ಇದ್ದವು. ಜೋಡೆತ್ತುಗಳ ಸ್ಪರ್ಧೆಯಲ್ಲಿ ಹಿರಿಯೂರಿನ ರಾಘವೇಂದ್ರ ನಾಯಕ(ಪ್ರ)ಅಡವಿಗೊಲ್ಲರಹಳ್ಳಿಯ ಸಿದ್ದಪ್ಪ (ದ್ವಿ) ಹಾಗೂ ಗುಂತ ಕೋಲಮ್ಮನಹಳ್ಳಿ ವೆಂಕಟ ರೆಡ್ಡಿ (ತೃ)ಅವರ ಎತ್ತುಗಳಿಗೆ ಕ್ರಮವಾಗಿ 10, 7 ಹಾಗೂ 5 ಸಾವಿರ ನಗದು ಬಹುಮಾನವನ್ನು ಹಾಗೂ ಘೋಷಿಸಲಾಯಿತು.
    ತೀರ್ಪುಗಾರರಾಗಿ ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್, ಡಾ.ಕುಮಾರ್, ಡಾ.ತಿಪ್ಪೇಸ್ವಾಮಿ ಹಾಗೂ ಡಾ. ಮುರುಗೇಶ್, ಕೆ.ಎನ್.ವಿಶ್ವನಾಥ್, ಟಿ.ರಮೇಶ್, ಕುಮಾರಸ್ವಾಮಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts