ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತಿಪ್ಪಾರೆಡ್ಡಿ ಬೇಸರ

blank

ಚಿತ್ರದುರ್ಗ: ಆರು ಬಾರಿ ಶಾಸಕರಾದರೂ ಮಂತ್ರಿ ಸ್ಥಾನ ಸಿಗದ ಕಾರಣ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತೀವ್ರ ಬೇಸರಗೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಅವಕಾಶ ನೀಡದ ಕಾರಣ ನಿರಾಸೆಯಾಗಿದೆ ಎಂದು ಹೇಳಿಕೊಂಡರು.

ಜಿಲ್ಲೆಯ ಐವರು ಬಿಜೆಪಿ ಶಾಸಕರ ಪೈಕಿ ಬಿ.ಶ್ರೀರಾಮುಲು ಮಂತ್ರಿ ಆಗಿದ್ದಾರೆ. ಇವರೊಂದಿಗೆ ಮತ್ತೊಬ್ಬರಿಗೆ ಅವಕಾಶ ಸಿಗುವ ನಿರೀಕ್ಷೆ ಇತ್ತು. ಬೆಳಗಾವಿ, ಬೆಂಗಳೂರಿಗೆ ಸಂಪುಟದಲ್ಲಿ ಅರ್ಧದಷ್ಟು ಸ್ಥಾನ ದೊರಕಿವೆ. ಚಿತ್ರದುರ್ಗ ಸೇರಿ ಅನೇಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದರು.

ಇನ್ನೆರಡು ತಿಂಗಳು ಸುಧಾರಿಸಿಕೊಳ್ಳಿ. ಅವಕಾಶ ನೀಡುತ್ತೇನೆಂದು ಸಿಎಂ ಹೇಳಿದ್ದರು ಎಂದು ನೆನೆಪಿಸಿಕೊಂಡ ಶಾಸಕರು ಪದೇ ಪದೆ ಕೇಳುವುದು ನನ್ನ ಜಾಯಮಾನವಲ್ಲ ಎಂದು ತಿಳಿಸಿದರು.

ಹೊಸಬರಿಗೆ ಪಟ್ಟಕಟ್ಟಬೇಕಿತ್ತು: ತ್ಯಾಗಿಗಳಿಗೆ ಮಂತ್ರಿ ಸ್ಥಾನ ನೀಡಿದ್ದು ಸ್ವಾಗತಾರ್ಹ. ಮೂರ‌್ನಾಲ್ಕು ಬಾರಿ ಮಂತ್ರಿ ಆದವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಿ ಹೊಸಬರಿಗೆ ಅವಕಾಶ ಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮೂಲ ಬಿಜೆಪಿಯವರಿಗೆ ಸಚಿವ ಸ್ಥಾನ ನೀಡದೇ ಮುಂದೂಡಿದ್ದು ಒಳ್ಳೆಯದಾಯಿತು. ಪಕ್ಷಾತೀತ, ಜಾತ್ಯತೀತವಾಗಿ ನಾನು ಮಂತ್ರಿ ಆಗಬೇಕೆಂದು ಜನ ಬಯಸಿದ್ದರು. ನಾನು ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆಯೇ ಹೊರತು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…