More

    ನೇರ ರೈಲು ಮಾರ್ಗದ ಸಭೆಗೆ ಮೀನ-ಮೇಷ

    ಚಿತ್ರದುರ್ಗ: ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಅನುಷ್ಠಾನ ಸೇರಿ ಜಿಲ್ಲೆಯ ಹಲವು ಬೇಡಿಕೆಗಳ ಸಂಬಂಧ ಸಂಸದರು, ಶಾಸಕರನ್ನೊಳಗೊಂಡಂತೆ ಸಭೆ ನಡೆಸಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನೀಡಿದ ಸೂಚನೆ ಪಾಲಿಸಲು ರೈಲ್ವೆ ಇಲಾಖೆ ಮೀನ-ಮೇಷ ಎಣಿಸುತ್ತಿದೆ.

    ಕಳೆದ ಅ.17ರಂದು ನಗರಕ್ಕೆ ಭೇಟಿ ಕೊಟ್ಟಿದ್ದ ಸಚಿವ ಅಂಗಡಿ, ಸಂಸದರು, ಶಾಸಕರು,ಸಂಘಟನೆಗಳ ಪ್ರಮುಖರ ಜತೆ ಸಮಾಲೋಚಿಸಿ ಅ. 22 ರಂದು ಚಿತ್ರದುರ್ಗದಲ್ಲೇ ಸಭೆ ನಡೆಸಲು ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು.

    ಮೂರ‌್ನಾಲ್ಕು ತಿಂಗಳಾದರೂ ಸಭೆ ನಡೆಸಲು ರೈಲ್ವೆ ಇಲಾಖೆ ಮನಸ್ಸು ಮಾಡಿಲ್ಲ. ಈ ನಿಟ್ಟಿನಲ್ಲಿ ಸಂಸದರು, ಜನಪ್ರತಿನಿಧಿಗಳು ಕೂಡ ಉದಾಸೀನತೆ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಈಗಾಗಲೇ ಮಂಜೂರಾದ ಚಿತ್ರದುರ್ಗ-ದಾವಣಗೆರೆ ರಸ್ತೆ ಆರ್‌ಒಬಿ ಸೇರಿ ವಿವಿಧೆಡೆ ಆರ್‌ಒಬಿ, ಆರ್‌ಯುಬಿ ಗಳ ನಿರ್ಮಾಣ, ರೈಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ. ರೈಲು ಮಾರ್ಗಗಳ ವಿಸ್ತರಣೆ ಮಾಡಬೇಕಿದೆ.

    ಬೆಂಗಳೂರು ಇಂಟರ್ ಸಿಟಿ ಸಂಪರ್ಕಕ್ಕೆ ಚಿತ್ರದುರ್ಗದಿಂದ ಚಿಕ್ಕಜಾಜೂರುವರೆಗೆ ಪುಶ್‌ಫುಲ್‌ಟ್ರೈನ್. ರೈಲು ನಿಲ್ದಾಣದಲ್ಲಿ ಹೊಸ ಪ್ಲಾಟ್ ಫಾರಂ ಇತರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಬೇಕಿದೆ.

    ನೇರ ರೈಲು ಮಾರ್ಗ: 192 ಕಿ.ಮೀ.ಉದ್ದದ ಅಂದಾಜು 1801 ಕೋಟಿ ರೂ. ವೆಚ್ಚದ ನೇರ ರೈಲು ಮಾರ್ಗ ಅನುಷ್ಠಾನಕ್ಕೆ ತುಮಕೂರಿನ 38 ಗ್ರಾಮಗಳ 1005 ಎಕರೆ ಜಮೀನು ಪೈಕಿ 135 ಎಕರೆ ಜಮೀನು ಇಲಾಖೆಗೆ ಹಸ್ತಾಂತರವಾಗಿದೆ. ಚಿತ್ರದುರ್ಗದ 44 ಗ್ರಾಮಗಳ 1028, ದಾವಣಗೆರೆಯ 14 ಗ್ರಾಮಗಳ 236 ಎಕರೆ ಜಮೀನನ್ನು ರಾಜ್ಯಸರ್ಕಾರ ವಶಕ್ಕೆ ಪಡೆದು ಇಲಾಖೆಗೆ ಹಸ್ತಾಂತರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts