More

    ವೃಕ್ಷ ಸಂತಾನದಿಂದ ಮಾನವ ಉಳಿವು

    ಚಿತ್ರದುರ್ಗ: ಚಂದ್ರ ಗ್ರಹಣ ಕುರಿತು ಅನಗತ್ಯ ಭಯ ಬೇಡವೆಂದು ನೂತನ ದಂಪತಿಗಳಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಯ ನೀಡಿದರು.

    ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಗ್ರಹಣಗಳು ನಿಸರ್ಗ ನಿಯಮ, ಮಾನವನನ್ನು ಕಾಡಿದಂತೆ ಗಿಡ-ಮರಗಳನ್ನೂ ರೋಗಾದಿಗಳು ಕಾಡುತ್ತವೆ. ನಿಸರ್ಗ ಹಾಗೂ ಮಾನವ ನಿರ್ಮಿತ ರೋಗಗಳ ನಡುವೆ ನಾವಿಂದು ಜೀವನ ಸಾಗುವಂತಾಗಿದೆ ಎಂದರು.

    ಕರೊನಾ ಜಗತ್ತಿನ ಜನರಲ್ಲಿ ಅಸಹಾಯಕತೆ, ಪರಸ್ಪರ ಅಂತರ ಸೃಷ್ಟಿಸಿದೆ. ಈ ಸೋಂಕಿನಿಂದ ಬೇರೆ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದ್ದರೂ, ರೋಗ ನಿರೋಧಕ ಶಕ್ತಿಯನ್ನು ಅಧಿಕವಾಗಿ ಹೊಂದಿರುವ ಭಾರತೀಯರಲ್ಲಿ ಹೆಚ್ಚಿನ ಜೀವಾಪಾಯ ಉಂಟಾಗುತ್ತಿಲ್ಲ. ಆದರೂ ನಾವಿಂದು ಜೀವ ಉಳಿಸಿಕೊಂಡು ಜೀವನ ನಡೆಸುವ ಸವಾಲನ್ನು ಎದುರಿಸುತ್ತಿದ್ದು, ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

    ಮಾನವ ಸಂತತಿ ವೃದ್ಧಿಯಂತೆ ವೃಕ್ಷ ಸಂತಾನವೂ ಬೆಳೆಯಬೇಕು. ಮಕ್ಕಳನ್ನು ಪೋಷಿಸಿದಂತೆ ವೃಕ್ಷವನ್ನು ಪೋಷಿಸಬೇಕು. ಪರಿಸರ ದಿನವೆಂದು ಒಂದು ದಿನ ಸಸಿ ನೆಡದೆ ಎಲ್ಲ ದಿನಗಳಲ್ಲೂ ಸಸಿ ನೆಡುವ, ಮರಗಳನ್ನು ಕಾಪಾಡುವ ಕೆಲಸ ಆಗಬೇಕು. ಗಿಡ-ಮರಗಳು ಹೆಚ್ಚಿ ರುವೆಡೆ ಸಮೃದ್ಧಿ ಇರುತ್ತದೆ ಎಂದರು.

    ನಿಟುವಳ್ಳಿ ವಿ.ಮೋಹನ್ ಹಾಗೂ ಎಂ.ಮೇಘನಾ ಅಂತರ್ಜಾತಿ ವಿವಾಹ ಸಹಿತ 10 ಜೋಡಿ ನವ ಜೀವನಕ್ಕೆ ಪದಾರ್ಪಣೆ ಮಾಡಿದರು.

    ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ್, ವಲಯ ಅರಣ್ಯಾಧಿಕಾರಿ ಸಂದೀಪ್, ಸಾಮಾಜಿಕ ಅರಣ್ಯ ಇಲಾಖೆ ಡಿಎಫ್‌ಒ ಎನ್.ಕೆ.ಚೋಳರಾಜಪ್ಪ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

    ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಸಿ.ಎಂ.ಚಂದ್ರಪ್ಪ ಸ್ವಾಗತಿಸಿದರು. ಬಸವರಾಜಶಾಸ್ತ್ರಿ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.

    ಪರಿಸರದ ಅಸಮತೋಲನದಿಂದಾಗಿ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಹಿಂದಿನಿಂದಲೂ ಪರಿಸರ ಸಂರಕ್ಷಣೆ, ಜೀವ ಸಂಕುಲದ ಮಹತ್ವವನ್ನು ಸಾರಿಕೊಂಡು ಬರಲಾಗಿದೆ. ಜನರ ಸಹಕಾರ ಅಗತ್ಯ.
    ರಾಘವೇಂದ್ರರಾವ್
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts