More

    ಪರೋಪಕಾರದಿಂದ ಜೀವನ ಸಾರ್ಥಕತೆ

    ಚಿತ್ರದುರ್ಗ: ಶಿಕ್ಷಣ, ಪದವಿ, ಹಣ ಗಳಿಕೆಯನ್ನು ವ್ಯವಹಾರಿಕ ಜಗತ್ತಿನ ಸಾಫಲ್ಯ ಎಂದುಕೊಂಡರೆ, ಪರೋಪಕಾರವನ್ನು ಅಧ್ಯಾತ್ಮದ ಸಾಫಲ್ಯ ಎಂದು ಗುರುತಿಸಬಹುದು ಎಂದು ರಾಮದುರ್ಗ ತೊಂಡೆಕಟ್ಟೆ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಮಹಾರಾಜ ಹೇಳಿದರು.

    ನಗರದ ಕಬೀರಾನಂದಾಶ್ರಮದಲ್ಲಿ 90ನೇ ಶಿವರಾತ್ರಿ ಮಹೋತ್ಸವದ ಮಂಗಳವಾರದ ಕಾರ‌್ಯಕ್ರಮದಲ್ಲಿ ಮಾತನಾಡಿದರು. ಜ್ಞಾನ, ಆರೋಗ್ಯ, ಸಂಪತ್ತನ್ನು ಗಳಿಸುವುದು ಲೌಕಿಕ ಸಾಧನೆಯಾದರೆ, ಇನ್ನೊಬ್ಬರಿಗೆ ನೋವಾಗದಂತೆ, ಪರರಿಗೆ ಕೈಲಾದ ಸೇವೆಯ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳುವುದು ಪಾರಮಾರ್ಥಿಕ ಸಾಧನೆ. ಇತಿಹಾಸ ಪುಟದಲ್ಲಿ ಸಾಮಾನ್ಯರಾದರೂ ಅಸಾಮಾನ್ಯ ಸಾಧನೆ ಮಾಡಿದ ಸಾಧಕರ ಹೆಸರಿದೆಯೆ ಹೊರತು, ಶ್ರೀಮಂತರದ್ದಲ್ಲ ಎಂದು ಅಭಿಪ್ರಾಯಪಟ್ಟರು.

    ಹೊಸದುರ್ಗದ ಎಲ್‌ಐಸಿ ಅಧಿಕಾರಿ ಎಚ್.ಎಸ್. ನವೀನ್‌ಕುಮಾರ್ ಉಪನ್ಯಾಸ ನೀಡಿದರು. ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠಗಳ ಶ್ರೀಗಳಾದ ಮಂಗಳೂರಿನ ಧರ್ಮಪಾಲನಾಥ ಶ್ರೀ, ಹಾಸನದ ಶಂಭುನಾಥ ಶ್ರೀ, ಕಬಳಿಯ ಶಿವಪುತ್ರನಾಥ ಶ್ರೀ, ಮೈಸೂರಿನ ಶಿವಾನಂದ ಶ್ರೀ, ದಸರಿಘಟ್ಟದ ಚಂದ್ರಶೇಖರ ಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts