More

    ರೈತರ ಕಡೆಗಣನೆಗೆ ಆಕ್ರೋಶ

    ಚಿತ್ರದುರ್ಗ: ಬರ ಮತ್ತು ನೆರೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಕಡೆಗಣಿಸಿರುವ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನಡೆಗೆ ರೈತ ಮುಖಂಡ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ಎಪಿಎಂಸಿ ರೈತ ಭವನದಲ್ಲಿ ರೈತ ಸಂಘ, ಹಸಿರು ಸೇನೆ ಮಂಗಳವಾರ ಹಮ್ಮಿಕೊಂಡಿದ್ದ ಕೆ.ಎಸ್.ಪುಟ್ಟಣ್ಣಯ್ಯನವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪುಟ್ಟಣ್ಣಯ್ಯ ಇದ್ದಿದ್ದರೆ ವಿಧಾನಸೌಧದಲ್ಲಿ ರೈತರ ಪರ ದನಿ ಇರುತ್ತಿತ್ತು. ಅವರ ಮಾರ್ಗದರ್ಶನದಿಂದ ರೈತರು ಸ್ವಾಭಿಮಾನ ಹಾಗೂ ಸ್ವಾವಲಂಭನೆಯಿಂದ ನಿಲ್ಲಲು ಸಾಧ್ಯವಾಗುತ್ತಿದೆ. ಪುಟ್ಟಯ್ಯ ಆಶಯದಂತೆ ರೈತರ ಸಮಸ್ಯೆ ಬಗೆಹರಿಸಲು ಸಮರ್ಥವಾಗಿ ಹೋರಾಟ ಮುಂದುವರಿಸಬೇಕಿದೆ ಎಂದರು.

    ಹಾವೇರಿ ರೈತ ಸಂಘದ ಜಿಲ್ಲಾಧ್ಯಕ್ಷೆ ಕೆ.ಮಂಜುಳಾ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಯುವ ಪೀಳಿಗೆಗೆ ತಿಳಿಸಬೇಕಿದೆ. ಪ್ರಶಸ್ತಿಗೆ ಅರ್ಜಿ ಹಾಕಿ ಲಾಬಿ ಮಾಡುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದ್ದರೆಂದರು.

    ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರಲ್ಲಿ ಯಾವುದೇ ಬಣ,ಬೇಧ-ಭಾವ ಇರಲಿಲ್ಲ ಎಂದರು. ಕೋಶಾಧ್ಯಕ್ಷ ತಿಮ್ಮಣ್ಣ ಮಾತನಾಡಿ,ಚಿತ್ರದುರ್ಗಕ್ಕೂ ಕೆ.ಎಸ್. ಪುಟ್ಟಣ್ಣಯ್ಯರಿಗೂ ಇದ್ದ ಅವಿನಾಭಾವ ಸಂಬಂಧ ನೆನಪಿಸಿದರು.

    ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ,ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಡಾ.ಸಿ.ಶಿವಲಿಂಗಪ್ಪ, ಆರ್.ಬಿ. ನಿಜಲಿಂಗಪ್ಪ, ಜಿಲ್ಲಾ ಸಂಚಾಲಕಿ ಲಕ್ಷ್ಮೀ ಸಂಘಕ್ಕೆ ದೇಣಿಗೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಚಿಕ್ಕಪ್ಪನಹಳಿ ್ಳಷಣ್ಮುಖಪ್ಪ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts