More

    ಮನಸ್ತಾಪ ಮರೆತು 13 ವರ್ಷಗಳ ನಂತರ ಮತ್ತೆ ಒಂದಾದ ಚಿತ್ರದುರ್ಗ ದಂಪತಿ!

    ಚಿತ್ರದುರ್ಗ: ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ಮಾತಿದೆ. ಆದರೆ, ಈ ಜಗಳ ಕೆಲವೊಮ್ಮೆ ಮಿತಿ ಮೀರಿ ಡಿವೋರ್ಸ್​ ಹಂತಕ್ಕೂ ಹೋಗುತ್ತದೆ ಮತ್ತು ಡಿವೋರ್ಸ್​ ಪಡೆದುಕೊಂಡವರು ಇದ್ದಾರೆ. ಇನ್ನು ಕೆಲವರು ವೈಮನಸ್ಸು ಮರೆತು ಮತ್ತೆ ಒಂದಾದವರು ಇದ್ದಾರೆ. ಇದೀಗ ಚಿತ್ರದುರ್ಗದಲ್ಲಿ ನಡೆದಿರುವ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಕೌಟುಂಬಿಕ ಕಲಹ ಹಿನ್ನೆಲೆ ದೂರವಾಗಿದ್ದ ದಂಪತಿ ಬರೋಬ್ಬರಿ 13 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ! 13 ವರ್ಷಗಳ ಸುದೀರ್ಘ ಅಂತರದ ನಡುವೆ ಮತ್ತೆ ಒಂದಾಗುವುದೆಂದರೆ ಅದು ಹುಬ್ಬೇರಿಸುವ ಸಂಗತಿಯಲ್ಲದೆ, ಮತ್ತೇನು?

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ಶನಿವಾರ (ಜು.8) ನಡೆದ ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಇಬ್ಬರು ಒಂದಾದರು. ನಾಗರಾಜ್ ಹಾಗೂ ಲಕ್ಷ್ಮೀ ದಂಪತಿ ವಿವಾಹ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು. ಇದೀಗ 13 ವರ್ಷಗಳ ವಿರಸ ಮರೆತು ಸಾಂಸಾರಿಕ ಸಾಮರಸ್ಯದೆಡೆಗೆ ಹೆಜ್ಜೆ ಹಾಕಿದ್ದಾರೆ.

    ಇದನ್ನೂ ಓದಿ: ಎಸ್​ಐಟಿಗೆ ಇಸ್ರೇಲ್ ಸಹಾಯ?: ಬಿಟ್ ಕಾಯಿನ್ ಹಗರಣದ ವ್ಯೂಹ ಭೇದಿಸಲು ವಿದೇಶಿ ಸಂಸ್ಥೆ ನೆರವು?

    ಹೊಸದುರ್ಗ ಪಟ್ಟಣದ ಲಕ್ಷ್ಮಿ ಹಾಗೂ ಹೊನ್ನಾಳಿ ತಾಲೂಕಿನ ನಾಗರಾಜ್, ಹಿರಿಯರ ಸಮ್ಮುಖದಲ್ಲಿ 2008ರಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಕುಟುಂಬದಲ್ಲಿ ಮನಸ್ತಾಪ ಶುರುವಾಯಿತು. ಬಳಿಕ ಪತ್ನಿ ಲಕ್ಷ್ಮೀ ಜತೆ ಸಂಸಾರ ನಡೆಸುವುದಿಲ್ಲ ಎಂದು ಹೇಳಿ 2010ರಲ್ಲಿ ವಿವಾಹ ವಿಚ್ಛೇದನ ಕೋರಿ ಹರಿಹರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಈ ಪ್ರಕರಣವನ್ನು 2011ರಲ್ಲಿ ಹೈಕೋರ್ಟ್ ಮೂಲಕ ಹೊಸದುರ್ಗ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿಕೊಂಡಿದ್ದರು. ಹೊಸದುರ್ಗ ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಸಮ್ಮುಖದಲ್ಲಿ ಇದೀಗ ದಂಪತಿ ಮತ್ತೆ ಒಂದಾಗಿದ್ದಾರೆ.

    ಸಂಸಾರವೆಂದರೆ ಅಲ್ಲಿ ಒಂದು ಬರುತ್ತೆ ಮತ್ತು ಒಂದು ಮಾತು ಹೋಗುತ್ತೆ. ಅಷ್ಟಕ್ಕೆ ಪವಿತ್ರ ಸಂಬಂಧವನ್ನು ಕಡಿದುಕೊಳ್ಳುವುದು ಒಳಿತಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಹಿರಿಯ ಮಾತನ್ನು ನೆನಪಿನಲ್ಲಿಟ್ಟುಕೊಂಡು ಸಂಸಾರವೆಂಬ ಬಂಡಿಯನ್ನು ಜೊತೆಯಾಗಿ ಎಳೆದರೆ ವೈವಾಹಿಕ ಜೀವನದ ಪಯಣ ಸುಖಕರವಾಗಿರುತ್ತದೆ. (ದಿಗ್ವಿಜಯ ನ್ಯೂಸ್​)

    ಎಸ್​ಐಟಿಗೆ ಇಸ್ರೇಲ್ ಸಹಾಯ?: ಬಿಟ್ ಕಾಯಿನ್ ಹಗರಣದ ವ್ಯೂಹ ಭೇದಿಸಲು ವಿದೇಶಿ ಸಂಸ್ಥೆ ನೆರವು?

    ಪತ್ನಿ ಮಿದುಳನ್ನೇ ಭಕ್ಷಿಸಿದ ಮೆಕ್ಸಿಕೋ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts