More

    ನಾಗರಿಕರ ಪ್ರಯಾಣಕ್ಕೆ ಮುಕ್ತ ಅವಕಾಶ

    ಚಿತ್ರದುರ್ಗ: ಕರೊನಾ ಸೋಂಕು ಹತೋಟಿ ಸಲುವಾಗಿ ಮಾ.24ರಂದು ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಅಡ್ಡಿ ಆಗಿದ್ದ ಜನರ ಸಂಚಾರಕ್ಕೆ ಈಗ ಮುಕ್ತ ಅವಕಾಶ ದೊರೆತಿದೆ.

    ಅಂತರ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವಂಥವರಿಗೆ ಯಾವುದೇ ಪಾಸ್ ಅಗತ್ಯ ವಿರಲಿಲ್ಲ್ಲ. ಆದರೆ, ಖಾಸಗಿ ವಾಹನಗಳಲ್ಲಿ ಸಂಚರಿಸುವಂಥ ಪ್ರಯಾಣಿಕರಿಗೆ ಗೊಂದಲವಿತ್ತು.

    ಮಾ.19ರಿಂದಲೇ ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ವಿಜಯವಾಣಿಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿದ್ದ 8 ಅಂತರರಾಜ್ಯ ಸಹಿತ 34 ಚೆಕ್ ಪೋಸ್ಟ್‌ಗಳಲ್ಲಿ ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಾವಲಿತ್ತು.

    ಆದರೆ, ಈಗ ಎಲ್ಲ ಅಂತರ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳು ತೆರವು ಮಾಡಲಾಗಿದೆ. ರಾಜ್ಯದೊಳಗಿನ ಪ್ರಯಾಣಕ್ಕೆ ಯಾವುದೇ ಪಾಸ್‌ಗಳ ಅಗತ್ಯವಿಲ್ಲ. ನಾಗರಿಕರು ಮುಕ್ತವಾಗಿ ಪ್ರಯಾಣಿಸಬಹುದು. ರಾಜ್ಯ ಸರ್ಕಾರದ ನಿರ್ದೇಶನವನ್ನಾಧರಿಸಿ ಅಂತರ್ ರಾಜ್ಯ ಚೆಕ್‌ಪೋಸ್ಟ್‌ಗಳನ್ನು ನಂತರದ ದಿನಗಳಲ್ಲಿ ಹಂತ, ಹಂತವಾಗಿ ಹಿಂಪಡೆಯಲಾಗುವುದು.

    ಲಾಕ್‌ಡೌನ್-4ರ ಈ ಸಂದರ್ಭದಲ್ಲಿ ಇನ್ನುಳಿದಂತೆ ಸರ್ಕಾರ ವಿಧಿಸಿರುವ ಎಲ್ಲ ನಿರ್ಬಂಧಗಳು ಮೇ 31ರ ವರೆಗೆ ಮುಂದುವರಿಯಲಿವೆ. ಈ ನಿಯಮಗಳಲ್ಲಿ ಯಾವುದೇ ಸಡಿಲಕೆ ಇಲ್ಲವೆಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

    ಪ್ರಯಾಣಕ್ಕೆ ಅವಕಾಶವಿದೆ ಎಂದು ಜನ ಸುಖಾ ಸುಮ್ಮನೆ ಓಡಾಡಬಾರದು. ಸ್ವಯಂ ಶಿಸ್ತಿಗೆ ಒಳಪಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕೆಂದು ರಾಧಿಕಾ ಕೋರಿದ್ದಾರೆ.

    ಭಾನುವಾರದ ಜನತಾ ಕರ್ಫ್ಯೂ: ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ ವರೆಗೆ ವಹಿವಾಟು, ಓಡಾಟಕ್ಕೆ ನಿರ್ಬಂಧವಿರುವುದಿಲ್ಲ. ಆದರೆ, ಭಾನು ವಾರದಂದು ಜಿಲ್ಲಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಂದು ನಾಗರಿಕರು ಯಾರೂ ಮನೆಯಿಂದ ಹೊರಬರಬಾರದು. ಯಾ ವುದೇ ವಾಹನಗಳು ಬೀದಿಗೆ ಇಳಿಯಲು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲವೆಂದು ಎಸ್ಪಿ ರಾಧಿಕಾರ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts