More

    ಸಂವಿಧಾನ ಶಿಲ್ಪಿಗೆ ಕೋಟೆನಾಡಿನ ನಮನ

    ಚಿತ್ರದುರ್ಗ: ಸಾಮಾಜಿಕ ಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಹೋರಾಡಿದ ಅಂಬೇಡ್ಕರ್ ಮಹಾನ್ ನಾಯಕ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಶ್ರೀ ಮುರುಘರಾಜೇಂದ್ರಮಠದ ಆವರಣದಲ್ಲಿ ಅಂಬೇಡ್ಕರ್ ಅವರ 129 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ಅಂಬೇಡ್ಕರ್ ಜೀವನ, ವಿದ್ಯಾಭ್ಯಾಸ ಅತ್ಯಂತ ಕಷ್ಟದಲ್ಲಿ ನಡೆದಿತ್ತು. ಸಮಾಜದಲ್ಲಿರುವ ಅಸಮಾನತೆ ಬಗ್ಗೆ ಅವರು ಸಾಕಷ್ಟು ನೊಂದಿದ್ದರು. ಬಸವಣ್ಣನವರ ಸಮಾನತೆ ಪರಿಕಲ್ಪನೆ ಅವರಲ್ಲಿತ್ತು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಮಾಜ ನಿರ್ಮಾಣವಾಗಬೇಕೆಂಬ ಆಶಯ ಹೊಂದಿದ್ದರು ಎಂದರು.

    ಈ ವೇಳೆ ಶರಣರು ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು.

    ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಮತ್ತಿತರರು ಇದ್ದರು.

    ನಗರದ ಶ್ರೀ ಮಡಿವಾಳ ಮಾಚೀದೇವ ಗುರುಪೀಠ ಹಾಗೂ ಶ್ರೀ ಭೋವಿ ಗುರುಪೀಠದಲ್ಲೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

    ಜಿಲ್ಲಾಡಳಿತ: ಚಿತ್ರದುರ್ಗ ಜಿಲ್ಲಾಡಳಿತದಿಂದ ಪತ್ರಕರ್ತರ ಭವನದಲ್ಲಿ ಸಂವಿಧಾನ ಶಿಲ್ಪಿಯ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಡಿಸಿ ಆರ್.ವಿನೋತ್‌ಪ್ರಿಯಾ, ಜಿಪಂ ಸಿಇಒ ಎಸ್.ಹೊನ್ನಾಂಬ, ಎಸ್ಪಿ ಜಿ.ರಾಧಿಕಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ ಮತ್ತಿತರರು ಇದ್ದರು.

    ಅಂಚೆ ಕಚೇರಿ: ಚಿತ್ರದುರ್ಗ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸಲಾಯಿತು. ಮುಖ್ಯ ಅಂಚೆ ಪಾಲಕ ಟಿ.ಎನ್.ಗೋಪಿ, ಉಪ ಅಂಚೆಪಾಲಕ ಎನ್.ಮಂಜುನಾಥ್, ಚಂದ್ರಹಾಸ, ಮಂಜಣ್ಣ, ಎಸ್.ಸುರೇಶ್, ಎನ್.ಕರಿಸಿದ್ದಪ್ಪ, ಶಿವರಾಜ,ನಟೇಶ್, ಡಿ.ಸತೀಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts