More

    ಪೊಲೀಸ್ ಟ್ರೈನಿಂಗ್ ಶಾಲೆಗೆ ಫೈರಿಂಗ್ ರೇಂಜ್ ಕೊರತೆ

    ಚಿತ್ರದುರ್ಗ: ಶೀಘ್ರ ಸಾವಿರ ಪ್ರಶಿಕ್ಷಣಾರ್ಥಿ ತರಬೇತಿ ಸಾಮರ್ಥ್ಯ ಹೊಂದಲಿರುವ ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಫೈರಿಂಗ್ ರೇಂಜ್ ಕೊರತೆ ಕಾಡುತ್ತಿದೆ.

    ಇದನ್ನು ನೀಗಿಸಲು ನಡೆದಿರುವ ಪ್ರಯತ್ನ ಸದ್ಯಕ್ಕಂತೂ ವಿಫಲವಾಗಿದ್ದು, ಪ್ರಶಿಕ್ಷಣಾರ್ಥಿಗಳು ಶಸ್ತಾಸ್ತ್ರ ತರಬೇತಿಗೆ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿರುವ ಪೊಲೀಸ್ ಫೈರಿಂಗ್ ರೇಂಜ್‌ಗೆ ಬರಬೇಕಿದೆ. ಇಲ್ಲಿ ಜಿಲ್ಲಾ ಪೊಲೀಸರು ಶಸ್ತಾಸ್ತ್ರ ಅಭ್ಯಾಸ ನಡೆಸುತ್ತಾರೆ. ಈಗ ಚಿತ್ರದುರ್ಗ ನಗರವೂ ಬೆಳೆಯುತ್ತಿದ್ದು, ಈ ಸ್ಥಳದಲ್ಲಿ ಪೊಲೀಸರಿಗೂ ಫೈರಿಂಗ್ ಅಭ್ಯಾಸಕ್ಕೆ ತೊಡಕಾಗುತ್ತಿದೆ.

    ರಾ.ಹೆ.48 ಕ್ಕೆ ಹೊಂದಿಕೊಂಡಂತೆ ಐಮಂಗಲದ ಐತಿಹಾಸಿಕ ಸ್ಥಳದಲ್ಲಿ ಪೊಲೀಸ್ ತರಬೇತಿ ಶಾಲೆ 71.11 ಎಕರೆ ವಿಸ್ತೀರ್ಣದಲ್ಲಿದೆ. ಈ ಹಿಂದೆ ಶಾಲೆಗೆ ಹೆಚ್ಚುವರಿಯಾಗಿ ಮಂಜೂರಾಗಬೇಕಿದ್ದ 9.30 ಎಕರೆ ಜಾಗ ನನೆಗುದಿಯಲ್ಲಿದೆ. ಪ್ರಸ್ತುತ ಶಾಲೆಗೆ ಹೆಚ್ಚುವರಿಯಾಗಿ 30 ಎಕರೆ ಭೂಮಿ ಬೇಡಿಕೆ ಇದೆ. ಇಲ್ಲಿರುವ ಕವಾಯತು ಮೈದಾನದಲ್ಲಿ 300 ಸಿಬ್ಬಂದಿಗೆ ಅವಕಾಶವಿದ್ದು, ಹೆಚ್ಚಿನ ಜಾಗ ಸಿಕ್ಕರೆ ಮೈದಾನ ವಿಸ್ತೀ ರ್ಣ ಹೆಚ್ಚಿಸಲು ಹಾಗೂ ಶಸ್ತಾಸ್ತ್ರ ತರಬೇತಿಗೆ ಚಿತ್ರದುರ್ಗಕ್ಕೆ ಅಲೆದಾಡುವುದು ತಪ್ಪುತ್ತದೆ.

    ಇಲ್ಲಿ ಸದ್ಯಕ್ಕೆ 500 ಪ್ರಶಿಕ್ಷಣಾರ್ಥಿಗಳ ತರಬೇತಿಗೆ ಸೌಕರ್ಯಗಳಿವೆ. ಮಾ.6 ರಂದು ನಡೆಯಲಿರುವ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಲಿರುವ ಸಶಸ್ತ್ರ ಮೀಸಲು ಪಡೆಯ 268 ಹಾಗೂ ಕೆಎಸ್‌ಐಎಸ್‌ಎಫ್ 95 ಪ್ರಶಿಕ್ಷಣಾರ್ಥಿಗಳ ಸಹಿತ ಈವರೆಗೆ 1680 ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ.

    ಒಂದು ವೇಳೆ ತರಬೇತಿ ಸಾಮರ್ಥ್ಯ ಒಂದು ಸಾವಿರಕ್ಕೇರಿದರೆ ರಾಜ್ಯದ ಪೊಲೀಸ್ ತರಬೇತಿ ಶಾಲೆಗಳಲ್ಲೇ ಅತ್ಯಂತ ಮಹತ್ವದ ಸ್ಥಾನ ಸಿಗಲಿದೆ. ಹೊಸದಾಗಿ ನೇಮಕವಾಗುವ ಸಿಬ್ಬಂದಿಯೊಂದಿಗೆ ಬಡ್ತಿ ಪಡೆಯುವ ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿ, ಸಿಬ್ಬಂದಿಗೆ ಕಾಲ ಕಾಲಕ್ಕೆ ಇಲ್ಲಿ ಪುನಶ್ಚೇತನ ತರಬೇತಿಗಳನ್ನು ಕೊಡಲಾಗುತ್ತಿದೆ.

    ಶಾಲೆಯಿಂದ ತರಬೇತಿ ಪಡೆದು ಸೇವೆಗೆ ಸೇರುತ್ತಿರುವ 363 ಮಂದಿ ಪ್ರಶಿಕ್ಷಾರ್ಥಿಗಳಲ್ಲಿ 42 ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಎಂಸಿ ಮತ್ತು ಎಂಎಸ್ ಡಬ್ಲೂೃಹಾಗೂ ಬಿಎಸ್ ಡಬ್ಲೂೃ ಪದವಿ ಪಡೆದಿದ್ದಾರೆ. ಬಿಎಸ್ಸಿ, ಬಿಕಾಂ, ಬಿಬಿಎ 205, ಬಿಬಿಎಂ, ಬಿಸಿಎ, ಬಿಬಿಎ 8, ಬಿಇಡಿ, ಡಿಇಡಿ, ಬಿಪಿಇಡಿ 30, ಐಟಿಐ, ಡಿಪ್ಲೊಮಾ 18, ಪಿಯುಸಿ 51 ಹಾಗೂ 8 ಪ್ರಶಿಕ್ಷಣಾರ್ಥಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಇವರಲ್ಲಿ ಎಂಟು ಮಾಜಿ ಸೈನಿಕರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts