More

    ದುರ್ಗದಲ್ಲಿ ಶುರುವಾಗಲಿದೆ ಕೇಂದ್ರೀಯ ವಿದ್ಯಾಲಯ

    ಚಿತ್ರದುರ್ಗ; ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಹೇಳಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಂಭಿಕ ಮೂರು ವರ್ಷ ನಗರದ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಬಳಿಕ ಕುಂಚಿಗನಾಳ್ ಸಮೀಪ 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗಲಿದೆ ಎಂದರು.

    ಖಾಸಗಿ-ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಯತ್ನಿಸಲಾಗಿದೆ. ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ವ್ಯಾಪ್ತಿಯ ಉದ್ದೇಶಿತ ಹೆಚ್ಚುವರಿ ಡೇರಿಯನ್ನು ಚಳ್ಳಕೆರೆಯಲ್ಲಿ ಸ್ಥಾಪಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

    ಕೋಟೆ ಬಳಿ ಮದಕರಿ ನಾಯಕರ ಹೆಸರಿನ ಥೀಮ್‌ಪಾರ್ಕ್,ತಿಮ್ಮಣ್ಣ ನಾಯಕ ಕೆರೆ ಬಳಿ ಪಕ್ಷಿಧಾಮ ಸ್ಥಾಪಿಸಲು ಕೇಂದ್ರ-ರಾಜ್ಯಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿರಿಯೂರನ್ನು ವಿಶೇಷ ಕೈಗಾರಿಕೆ ಪ್ರದೇಶ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಹೊಸದುರ್ಗದಲ್ಲಿ ಗಾರ್ಮೆಂಟ್ ಫ್ಯಾಕ್ಟರ್ ಆರಂಭಕ್ಕೆ ಖಾಸಗಿ ಕಂಪನಿ ಮುಂದೆ ಬಂದಿದೆ ಎಂದು ತಿಳಿಸಿದರು.

    ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ, ಪಕ್ಷದ ಸಂಘಟನೆಗೆ ಒತ್ತು ಕೊಡುವುದಾಗಿ ಹೇಳಿದರು.

    ಮುಖಂಡರಾದ ಸಂಪತ್, ನಾಗರಾಜ್ ಬೇದ್ರೆ, ಶಿವಪ್ರಕಾಶ್ ದಗ್ಗೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts