More

  ಶಿಕ್ಷಣಕ್ಕೆ ಸರ್ಕಾರದಿಂದ ಪ್ರೋತ್ಸಾಹ

  ಅರಕೇರಾ: ಮಕ್ಕಳ ಕಲಿಕೆಗೆ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ನೀಲಮ್ಮ ರಾಜಶೇಖರ ರಾಠೋಡ್ ಹೇಳಿದರು.

  ಕ್ಯಾದಿಗ್ಗೇರಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಿಕ್ಷಣ ಇಲಾಖೆ, ಡಾನ್ ಬಾಸ್ಕೋ ಸೇವಾ ಸಂಸ್ಥೆ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ಧಿಗಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಅವಶ್ಯಗಳನ್ನು ಪೂರೈಸುವುದು ನಾಗರಿಕರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಸರ್ಕಾರ ಹಲವು ಯೋಜನೆ ಜಾರಿ ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

  ಪಿಡಿಒ ಲಿಂಗಪ್ಪ ಮಾತನಾಡಿ, ಮಕ್ಕಳ ಶೈಕ್ಷಣಿಕ ಮಟ್ಟ ಉತ್ತೇಜನೆಗೆ ಗ್ರಾಪಂ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸ್ನೇಹಿಯಾಗಿ ಸೇವೆ ಮಾಡಲು ಗ್ರಾಪಂ ನಿಂದ ಬರುವ ಅನುದಾನ ಬಳಕೆ ಮಾಡಲಾಗುವುದು ಎಂದರು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ, ಸಾರಿಗೆ ವ್ಯವಸ್ಥೆ, ತರಗತಿ ಕೊಠಡಿ ಕೊರತೆ, ವಿದ್ಯುತ್, ಆಟದ ಮೈದಾನದ ಸೌಕರ್ಯ ಕಲ್ಪಿಸಲು ಕ್ರಮ ವಹಿಸುವಂತೆ ವಿದ್ಯಾರ್ಥಿಗಳು ಕೋರಿದರು.

  8 ರಿಂದ 10 ನೇ ತರಗತಿ ವ್ಯಾಸಂಗಕ್ಕೆ ಜಾಗೀರ ಜಾಡಲದಿನ್ನಿ ಇಲ್ಲವೇ ಅರಕೇರಾಕ್ಕೆ ಪ್ರೌಢಶಾಲೆಗೆ ಹೋಗಬೇಕಿದೆ. ಕ್ಯಾದಿಗ್ಗೇರಾದಲ್ಲೇ ಪ್ರೌಢಶಾಲೆ ಆರಂಭಿಸಿದರೆ ಅನುಕೂಲವಾಗುವುದು ಎಂದು ವಿದ್ಯಾರ್ಥಿಗಳಾದ ಬಸವರಾಜ, ಹನುಮೇಶ, ಶ್ರೀದೇವಿ, ಮಂಜುಳಾ, ಮಲ್ಲಿಕಾರ್ಜುನ, ಆಂಜನೇಯ ತಿಳಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಂತಾಬಾಯಿ ರಾಠೋಡ್, ಮುಖ್ಯ ಶಿಕ್ಷಕರಾದ ಸುಜಾತ, ಗುರುಲಿಂಗಪ್ಪ, ಸಿಬ್ಬಂದಿ ಈರಲತಾ, ಮಲ್ಲಯ್ಯ ಖಾನಾಪುರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts