More

    ಕೋಟ್ಯಂತರ ರೂ. ಹಣ ಗುಳುಂ

    ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೇಂದ್ರ ಹಾಗೂ ಜಿಲ್ಲಾ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ನಗರದ ನಿಗಮದ ಕಚೇರಿ ಬಳಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು.

    ನಿಗಮದಲ್ಲಿ ಕೋಟ್ಯಂತ ರೂ. ದುರುಪಯೋಗ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಲ್ಕೆರೆ ಬ್ಯಾಂಕ್ ಶಾಖೆಯೊಂದರಲ್ಲಿ ಅಂದಾಜು 6.30 ಕೋಟಿ ರೂ. ಗಳನ್ನು ಫಲಾನುಭವಿಗಳಿಗೆ ನೀಡದೆ ಗುಳುಂ ಮಾಡಲಾಗಿದ್ದು, ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

    ಐಎಫ್‌ಎಸ್ ಅಧಿಕಾರಿಯೊಬ್ಬರು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ನಡೆದಿರುವ ಕೋಟ್ಯಂತರ ರೂ. ಹಗರಣ ಮುಚ್ಚಿ ಹಾಕಲಾಗಿದೆ. ಹೊರಗುತ್ತಿಗೆ ನೌಕರರು, ದಲ್ಲಾಳಿಗಳಿಂದಾಗಿ ನಿಗಮ ದಲ್ಲಾಳಿಗಳ ಭ್ರಷ್ಟಾಚಾರ ಹೆಚ್ಚುತ್ತಿದ್ದು, ನಿಗಮಕ್ಕೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ಶಾಸಕರಿಂದ ಫಲಾನುಭವಿಗಳ ಆಯ್ಕೆ ಅಧಿಕಾರ ಹಿಂಪಡೆದು, ಜಿಲ್ಲಾ ವ್ಯವಸ್ಥಾಪಕರಿಗೆ ವಹಿಸುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

    ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್, ಮುಖಂಡರಾದ ಚನ್ನಿಗರಾಮಯ್ಯ, ರಮೇಶ್‌ಬಾಬು, ಭೀಮಪ್ಪ, ಶಾಂತಕುಮಾರ್, ಎಂ.ಕೆ.ಹಟ್ಟಿ ಪುರುಷೋತ್ತಮ್, ಮಲ್ಲಿಕಾರ್ಜುನ್, ಮಹಂತೇಶ್, ಹೊನ್ನೂರಪ್ಪ, ಹೇಮಂತ್‌ರಾಜ್, ದಾದಾಪೀರ್ ಮತ್ತಿತರ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts