More

    ಇಷ್ಟಪಟ್ಟ ಸ್ಥಳದಲ್ಲೇ ಮಣ್ಣಾಗಲಿದ್ದಾರೆ ಚಿರು ಸರ್ಜಾ; ಅಂತ್ಯಸಂಸ್ಕಾರಕ್ಕೆ ನಡೆದಿದೆ ಸಿದ್ಧತೆ

     

    ಬೆಂಗಳೂರು: ಹೃದಯಾಘಾತದಿಂದ ನಿಧನಹೊಂದಿದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಅಂತಿಮ  ಸಂಸ್ಕಾರಕ್ಕೆ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್​ ಹೌಸ್​ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಫಾರ್ಮ್​ ಹೌಸ್​ನ ಹೃದಯಭಾಗದಲ್ಲಿ ಜಾಗ ಗುರುತಿಸಲಾಗಿದ್ದು, ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗುತ್ತಿದೆ. 

    ಧ್ರುವ ಸರ್ಜಾ ಕೆಲ ವರ್ಷಗಳಿಂದಷ್ಟೇ ಬೃಂದಾವನ ಫಾರ್ಮ್​ ಹೌಸ್​ ಖರೀದಿಸಿದ್ದರು. ತಮ್ಮನ ಈ ಕೆಲಸಕ್ಕೆ ಚಿರು ಸಹ ಮೆಚ್ಚುಗೆ ವ್ಯಕ್ತಪಡಿಸಿ, ಆ ಫಾರ್ಮ್​ಹೌಸ್​ನಲ್ಲೇ ಒಂದಷ್ಟು ದಿನಗಳನ್ನು ಕಳೆದಿದ್ದರು. ಸಿನಿಮಾ ಶೂಟಿಂಗ್​ ಬಿಡುವಿನ ವೇಳೆಯಲ್ಲಿ ಕುಟುಂಬದೊಟ್ಟಿಗೆ ತೋಟದಲ್ಲಿಯೇ ಕಾಲಕಳೆಯುತ್ತಿದ್ದರು. ಇದೀಗ ಅದೇ ಇಷ್ಟದ ಫಾರ್ಮ್​ ಹೌಸ್​ನಲ್ಲೇ ಶಾಶ್ವತವಾಗಿ ಮಣ್ಣಾಗಲಿದ್ದಾರೆ. 

    ಇದನ್ನೂ ಓದಿ: “ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ.!

    ಈ ಹಿಂದೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತವೆ ಎನ್ನಲಾಗಿತ್ತು. ತಾತ ಶಕ್ತಿ ಪ್ರಸಾದ್​, ಮಾವ ಕಿಶೋರ್​ ಸರ್ಜಾ ಅಂತ್ಯಕ್ರಿಯೆ ನೆರವೇರಿದ  ಸ್ಥಳದಲ್ಲಿಯೇ ಚಿರು ಕಾರ್ಯ ನೆರವೇರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಕೊನೆಗೆ ಅದು ಸಹೋದರನ ಫಾರ್ಮ್​ ಹೌಸ್​ಗೆ ಶಿಫ್ಟ್​ ಆಯಿತು. 

    ಸದ್ಯ ಬಸವನಗುಡಿಯ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಪ್ರಮಾಣದ ಅಭಿಮಾನಿಗಳು, ಸಿನಿಮಾ ಸಹೋದ್ಯೋಗಿಗಳು ಆಗಮಿಸಿ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಕರೊನಾ ಭೀತಿಯ ನಡುವೆ, ಚಿರು ಮನೆ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದ್ದು, ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ ಸ್ಥಳದಲ್ಲಿದ್ದಾರೆ.

    ಇದನ್ನೂ ಓದಿ: ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

    ಇನ್ನು ಮಧ್ಯಾಹ್ನ ಒಂದು ಗಂಟೆ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದ್ದು, ಅದಾದ ಬಳಿಕ ಮೆರವಣಿಗೆ ಮೂಲಕ ಫಾರ್ಮ್​ ಹೌಸ್​ಗೆ ಪಾರ್ಥಿವ ಶರೀರ ಸಾಗಲಿದೆ. ಸಂಜೆ ನಾಲ್ಕು ಗಂಟೆ ವೇಳೆಗೆ ಅಂತ್ಯಸಂಸ್ಕಾರ ಪ್ರಕ್ರಿಯೆ ನೆರವೇರಲಿದೆ ಎಂದು ಸರ್ಜಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಬೃಂದಾವನ ಫಾರ್ಮ್​ ಹೌಸ್​ ಬಳಿಯಲ್ಲಿಯೂ ಪೊಲೀಸ್​ ತುಕಡಿ ನಿಯೋಜಿಸಲಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಖಾಕಿ ಪಡೆ ಬ್ಯಾರಿಕೇಡ್ ಹಾಕಿ ಮುಖ್ಯದ್ವಾರ ಹೊರತುಪಡಿಸಿ ಇನ್ನುಳಿದ ದ್ವಾರಗಳನ್ನು ಮುಚ್ಚಲಾಗಿದೆ.

    PHOTO GALLERY| ಬಳುಕೋ ಬಳ್ಳಿ ಶಿಲ್ಪಾ ಶೆಟ್ಟಿಗೆ ಹ್ಯಾಪಿ ಬರ್ತಡೇ ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts