More

    ವರ್ಷಾರಂಭದಿಂದ ಚಿರಂಜೀವಿ ಸರ್ಜಾ ಹೆಸರು ಬದಲಾಗಿತ್ತು, ಗಮನಿಸಿದ್ದೀರಾ?

    ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ಇಲ್ಲವಾಗಿ, ನಾಲ್ಕು ದಿನಗಳಾದವು. ಇಂದಿಗೂ ಅವರಿಲ್ಲ ಎಂಬುದನ್ನು ನಾಡಿನ ಜನತೆಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಣ್ಮುಂದೆ ಚೆನ್ನಾಗಿಯೇ ಇದ್ದ ನಟ ಒಮ್ಮೆಲೆ ಇಲ್ಲ ಎಂದರೆ ನಿಜಕ್ಕೂ ಅದು ದೊಡ್ಡ ದುರಂತ. ಇದೀಗ ಅವರ ಸಾವಿನ ಸುತ್ತ ಜಾತಕ ದೋಷವೂ ಸುತ್ತುತ್ತಿದೆ. ಇನ್ನೊಂದೆಡೆ ಸೂಕ್ಷ್ಮವಾಗಿ ಗಮನಿಸಿದರೆ, ಹೆಸರಿನಲ್ಲೂ ಬದಲಾವಣೆ ಮಾಡಿಕೊಂಡಿದ್ದರು ಚಿರಂಜೀವಿ ಸರ್ಜಾ.

    ಇದನ್ನೂ ಓದಿ: ಕುಜ ದೋಷದ ಬಗ್ಗೆ ಗೊತ್ತಿದ್ದರೂ, ಬೇಕಂತಲೇ ನಿರ್ಲಕ್ಷ್ಯ ಮಾಡಿದ್ರಾ ಚಿರು!?

    ಅಷ್ಟಕ್ಕೂ ಏನದು ಹೆಸರು? 2009ರಿಂದ ಸಿನಿಮಾರಂಗಕ್ಕೆ ಆಗಮಿಸಿದ್ದ ಚಿರು, ಸಿನಿಮಾ ಪೋಸ್ಟರ್​ಗಳಲ್ಲಿ ‘Chiranjeevi sarja’ ಎಂಬ ಹೆಸರು ಶೀರ್ಷಿಕೆಯ ಮೇಲ್ಭಾಗದಲ್ಲಿ ಕಾಣುತ್ತಿತ್ತು. ಎಲ್ಲಿಯವರೆಗೆ ಅಂದರೆ 2019ರಲ್ಲಿ ತೆರೆಕಂಡ ‘ಸಿಂಗ’ ಸಿನಿಮಾದವರೆಗೆ. ಅದಾಗಿ 2020ಕ್ಕೆ ಕಾಲಿಡುತ್ತಿದ್ದಂತೆ, ಈ ವರ್ಷದ ಮೊದಲ ಸಿನಿಮಾ ಆಗಿ ‘ಖಾಕಿ’ ಬಿಡುಗಡೆ ಆಯಿತು. ಅದರಲ್ಲಿ ಚಿರು ಹೆಸರು ‘Chirranjeevi sarja’ ಎಂದು ಬದಲಾಗಿದೆ. ಬರೀ ಪೋಸ್ಟರ್​ಗಳಲ್ಲಷ್ಟೇ ಅಲ್ಲ, ಟ್ವಿಟರ್ ಖಾತೆಯಲ್ಲಿನ ಸ್ಪೆಲ್ಲಿಂಗ್​ ಬದಲಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಇದೆಲ್ಲವನ್ನು ಗಮನಿಸುತ್ತಿದ್ದರೆ, ಈ ಚಿರು ಸಾವಿಗೆ ಇದು ಮುಳುವಾಯ್ತಾ ಎಂಬ ಪ್ರಶ್ನೆ ಕಾಡದೆ ಇರದು!

    ಇದನ್ನೂ ಓದಿ: ಲಾಕ್​ಡೌನ್​ ಅವಧಿಯೇ ಚಿರು ಸಾವಿಗೆ ಮುಳುವಾಯ್ತಾ?; ಅದಕ್ಕೆ ಇಲ್ಲಿದೆ ಕಾರಣ …

    ಈಗಾಗಲೇ ಚಂದನವನದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಮೂಲ ಹೆಸರುಗಳನ್ನು ಬದಿಗಿಟ್ಟು ಬೇರೆ ಹೆಸರಿನ ಮೂಲಕವೇ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಮತ್ತೊಂದಿಷ್ಟು ಜನ ಹೆಸರಿನಲ್ಲಿನ ಇಂಗ್ಲಿಷ್​ ಅಕ್ಷರಗಳನ್ನು ಹೆಚ್ಚು ಕಡಿಮೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ಚಿರು ಸರ್ಜಾ ಸಹ 2020ಕ್ಕೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು.

    ಸ್ವಾರ್ಥಿ ರಾಜಮೌಳಿಗೆ ರಿಲೀಸ್​ ಹೊತ್ತಲ್ಲಿ ಕರ್ನಾಟಕ ಬೇಕು; ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತರಾಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts