More

    ಆ ಪಾತ್ರ ನಾನೇ ಮಾಡಬೇಕೆಂದಿದ್ದರಂತೆ ಚಿರು!

    ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಖ್ಯಾತಿಯ ಚೈತನ್ಯ ನಾಲ್ಕು ಸಿನಿಮಾಗಳನ್ನು ಜತೆಯಾಗಿ ಮಾಡಿದ್ದರು. ಆಟಗಾರದಲ್ಲಿ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಅವರನ್ನು ನಿರ್ದೇಶನ ಮಾಡಿದ್ದರು ಕೆ.ಎಂ. ಚೈತನ್ಯ. ನಂತರದ ದಿನಗಳಲ್ಲಿ ಆಕೆ, ಅಮ್ಮಾ ಐ ಲವ್​ ಯೂ ಮತ್ತು ಆದ್ಯ ಚಿತ್ರಗಳು ಅವರ ಜತೆಯಾಟದಲ್ಲಿ ಮೂಡಿಬಂದಿದ್ದವು.

    ಇದನ್ನೂ ಓದಿ: ದಾಂಪತ್ಯಕ್ಕೆ ಕಾಲಿಟ್ಟ ನಟಿ ಮಯೂರಿ: ನಡೆಯಿತು ಸರಳ ವಿವಾಹ

    ಈ ನಾಲ್ಕು ಚಿತ್ರಗಳಲ್ಲದೆ, ಇವರಿಬ್ಬರ ಜತೆಯಾಟದಲ್ಲಿ ಬೇರೆ ಯಾವುದಾದರೂ ಚಿತ್ರ ಬರಬೇಕಿತ್ತಾ? ಇಂಥ ಪ್ರಶ್ನೆ ಸಹಜ. ನಾಲ್ಕು ಚಿತ್ರಗಳನ್ನು ಒಟ್ಟಿಗೆ ಮಾಡಿದವರು, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವ ಸಾಧ್ಯತೆ ಸಹಜವಾಗಿಯೇ ಇದೆ. ಹಾಗಾಗಿ ಬೇರೆ ಯಾವುದಾದರೂ ಚಿತ್ರದ ಪ್ಲಾನ್​ ಇತ್ತಾ ಎಂದರೆ, ಇಲ್ಲ ಎನ್ನುತ್ತಾರೆ ಚೈತನ್ಯ. ಚಿತ್ರದ ಬದಲು ಒಂದು ವೆಬ್​ಸೀರೀಸ್​ ಮಾಡುವ ಯೋಚನೆ ಇತ್ತು ಎಂಬ ಉತ್ತರ ಅವರಿಂದ ಬರುತ್ತದೆ.

    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಚೈತನ್ಯ. ಚಿತ್ರ ಮಾಡುವ ಯೋಚನೆ ಇರಲಿಲ್ಲ. ಒಂದು ವೆಬ್​ ಸೀರೀಸ್​ ಮಾಡುವ ಯೋಚನೆ ನನಗಿತ್ತು. ಅದರಲ್ಲೂ ಸ್ಟಾಂಪ್​ ಪೇಪರ್​ ಹಗರಣದ ಅಬ್ದುಲ್​ ಕರೀಂ ತೆಲಗಿ ಬಗ್ಗೆ ಒಂದು ವೆಬ್​ ಸೀರೀಸ್​ ಮಾಡುವ ಯೋಚನೆ ಇತ್ತು ಮತ್ತು ಅದಕ್ಕೆ ಸಾಕಷ್ಟು ರೀಸರ್ಚ್​ ಸಹ ಮಾಡಿದ್ದೆ. ಈ ವೆಬ್​ಸೀರೀಸ್​ನಲ್ಲಿ ಚಿರಂಜೀವಿಗೆ ತೆಲಗಿ ಪಾತ್ರ ಮಾಡುವ ಆಸೆ ಇತ್ತು ಎನ್ನುತ್ತಾರೆ ಚೈತನ್ಯ.

    ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

    ಇದು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಒಂದು ವೆಬ್​ ಸೀರೀಸ್​ ಮಾಡುವ ಯೋಚನೆ ಇತ್ತು. ಚಿರು ಸಹ ನನ್ನ ಜತೆಗೆ ಇದ್ದುದರಿಂದ, ನಾನು ಮಾಡುತ್ತಿರುವ ರೀಸರ್ಚ್​ ಗಮನಿಸುತ್ತಿದ್ದ. ಅವನಿಗೆ ಹಾಗಾಯ್ತಂತೆ, ಹೀಗಾಯ್ತಂತೆ ಅಂತ ಹೇಳುವಾಗ, ಈ ಪಾತ್ರ ಬೇರೆ ಯಾರಿಗಾದರೂ ಕೊಟ್ಟರೆ ಚೆನ್ನಾಗಿರಲ್ಲ, ನಾನೇ ಮಾಡಬೇಕು ಅಂತ ಹೇಳುತ್ತಿದ್ದ. ಅವನಿಗೆ ಕೆಟ್ಟ ವಿಲನ್​ ಪಾತ್ರ ಮಾಡಬೇಕು ಎಂಬ ಆಸೆ ಬಹಳ ಇತ್ತು. ಹೀರೋ ಪಾತ್ರಗಳಿಗೆ ಹೆಚ್ಚು ರೇಂಜ್​ ಇರುವುದಿಲ್ಲ. ಅವರು ತುಂಬಾ ಒಳ್ಳೆಯವರಾಗಿರುತ್ತಾರೆ. ವಿಲನ್​ ಪಾತ್ರಗಳಿಗೆ ಸ್ಕೋಪ್​ ಜಾಸ್ತಿ ಇರುವುದರಿಂದ, ವಿಲನ್​ ಪಾತ್ರ ಮಾಡಬೇಕು ಎಂಬುದು ಅವನ ಆಸೆಯಾಗಿತ್ತು ಎನ್ನುತ್ತಾರೆ ಚೈತನ್ಯ.

    ಚಿರಂಜೀವಿಗೆ ವಿಲನ್​ ಪಾತ್ರ ಮಾಡಬೇಕು ಎಂಬ ಆಸೆ ಇತ್ತಾದರೂ, ಅದು ಕೊನೆಗೂ ಇಡೇರಲೇ ಇಲ್ಲ. ಚಿರು ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲೂ ಹೀರೋ ಆಗಿಯೇ ಮಿಂಚಿದರು.

    ಮಲೈಕಾ ಅರೋರ ವಾಸವಿದ್ದ ಕಟ್ಟಡವೇ ಸೀಲ್​ಡೌನ್​!; ಕಂಟೇನ್ಮೆಂಟ್​ ಝೋನ್​ ಆಯ್ತು ಇಡೀ ಏರಿಯಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts