More

    ಇಂಗ್ಲೆಂಡ್​ ಆಟಗಾರನ ತಂದೆಯ ಬೆನ್ನುಮೂಳೆ ಮುರಿದ ಅಭಿಮಾನಿಗಳ ದಂಡು!

    ಲಂಡನ್​ : ಭಾನುವಾರ (ಜುಲೈ 11) ಲಂಡನ್ನಿನ ವೆಂಬ್ಲೆ ಸ್ಟೇಡಿಯಂನಲ್ಲಿ ನಡೆದ ಯೂರೋ 2020 ಫೈನಲ್ ಫುಟ್​ಬಾಲ್ ಪಂದ್ಯ ನೋಡಲು ದಂಡುದಂಡಾಗಿ ಬಂದ ಅಭಿಮಾನಿಗಳು ಆಟದ ವಾತಾವರಣವನ್ನೇ ಬದಲಾಯಿಸಿದ್ದರು. ಇದೀಗ ತಿಳಿದುಬಂದಿರುವ ವಿಚಾರವೆಂದರೆ ಅಂದಿನ ದೊಂಬಿಯಲ್ಲಿ, ಇಂಗ್ಲೆಂಡಿನ ಡಿಫೆಂಡರ್​ ಹ್ಯಾರಿ ಮೆಗ್ವೈರ್​ರ ತಂದೆಯ ಬೆನ್ನು ಮೂಳೆಗೆ ಏಟು ಬಿದ್ದಿದೆ.

    ಇಂದು ಬ್ರಿಟಿಷ್​ ಟಾಬ್ಲಾಯ್ಡ್​ ದ ಸನ್​ಗೆ ಹ್ಯಾರಿ ಮೆಗ್ವೈರ್​ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಭಾನುವಾರ ಇಂಗ್ಲೆಂಡ್​ ಮತ್ತು ಇಟಲಿ ನಡುವೆ ನಡೆದ ಅಂತಿಮ ಪಂದ್ಯವನ್ನು ನೋಡಲು ಟಿಕೆಟ್ಟಿಲ್ಲದ ಅಭಿಮಾನಿಗಳು, ಅಕ್ರಮವಾಗಿ ಸ್ಟೇಡಿಯಂನೊಳಗೆ ನುಗ್ಗಿಬಂದ ಪರಿಣಾಮ ಭಾರೀ ಗೊಂದಲ ಮತ್ತು ಹಿಂಸಾಚಾರ ನಡೆದಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಕಾಂಗ್ರೆಸ್​ ಮಾರ್ಗದರ್ಶಕರಾಗುವರೇ… ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್?!

    ಆಟಗಾರ ಹ್ಯಾರಿಯ ತಂದೆ ಅಲನ್ ಮಗ್ವೈರ್​ (56) ಮತ್ತು ಆತನ ಏಜೆಂಟ್​ ಕೆನ್ನೆತ್​ ಶೆಫರ್ಡ್​ ಕೂಡ ಈ ಹುಚ್ಚೆದ್ದ ಅಭಿಮಾನಿಗಳ ಕಾಲ್ತುಳಿತಕ್ಕೆ ಒಳಗಾದರು. ಅಲನ್​ ಅವರ ಎರಡು ಬೆನ್ನು ಮೂಳೆ ಮುರಿದಿದ್ದು, ಉಸಿರಾಟಕ್ಕೆ ತೊಂದರೆ ಉಂಟಾಗಿತ್ತು ಎಂದು ಹ್ಯಾರಿ ತಿಳಿಸಿದ್ದಾರೆ. “ಅದು ಒಳ್ಳೆಯ ಅನುಭವವಾಗಿರಲಿಲ್ಲ, ಭಯಾನಕವಾಗಿತ್ತು. ಫುಟ್​ಬಾಲ್​ ಮ್ಯಾಚ್​ಗೆ ಬಂದಾಗ ಯಾರೂ ಈ ರೀತಿಯ ಅನುಭವವನ್ನು ಹೊಂದಬಾರದೆಂದು ನಾನು ಅಪೇಕ್ಷಿಸುತ್ತೇನೆ” ಎಂದು ಹ್ಯಾರಿ ಮಗ್ವೈರ್ ಹೇಳಿದ್ದಾರೆ.

    ವೀಕ್ಷಕರಿಂದ ಹಲವು ದುರ್ವರ್ತನೆಗಳನ್ನು ದಾಖಲಿಸಿದ ಅಂದಿನ ಪಂದ್ಯದ ವೇಳೆಯಲ್ಲಿ, ಲಂಡನ್ ಪೊಲೀಸರು 86 ಜನರನ್ನು ಬಂಧಿಸಿದ್ದಾರೆ. ಹಾಗೂ ಹಲವು ಪೊಲೀಸ್ ಸಿಬ್ಬಂದಿಗಳಿಗೂ ಪೆಟ್ಟು ಬಿದ್ದಿವೆ ಎನ್ನಲಾಗಿದೆ. ಈ ಬಗ್ಗೆ ಯೂರೋಪಿಯನ್ ಫುಟ್​ಬಾಲ್ ಆಡಳಿತ ಮಂಡಳಿ ಯುಇಎಫ್​ಎ, ಇಂಗ್ಲೆಂಡ್​ ಫುಟ್​ಬಾಲ್ ಅಸೋಸಿಯೇಷನ್​ಅನ್ನು ತರಾಟೆಗೆ ತೆಗೆದುಕೊಂಡಿದ್ದು, ವಿಚಾರಣೆಗೆ ಆದೇಶಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು

    ರಾಜ್ಯಕ್ಕೂ ಜನಸಂಖ್ಯಾ ನೀತಿ : ಸಾರ್ವಜನಿಕ ಚರ್ಚೆಗೆ ಸಿ.ಟಿ.ರವಿ ಇಂಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts