ಇದು ಸತ್ಯವಾ ಅಥವಾ ಸುಳ್ಳಾ ಎಂಬುದೇ ಗೊಂದಲ…
ಇತ್ತೀಚೆಗಷ್ಟೇ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜತೆಗೆ ವಿದೇಶಿ ಪ್ಯಾರಾನಾರ್ಮಲ್ ತಜ್ಞ ಸ್ಟೇವ್ ಹಫ್ ಮಾತನಾಡಿ, ಭಾರತೀಯರನ್ನು ಕುತೂಹಲಕ್ಕೆ ತಳ್ಳಿದ್ದ. ಆ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ವಿಲಿಯನ್ಗಟ್ಟಲೇ ವೀಕ್ಷಣೆ ಪಡೆದು, ಹಲವು ಬಗೆಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದೀಗ ಜೂನ್ 7ರಂದು ಕಾರ್ಡಿಯಾಕ್ ಅರೆಸ್ಟ್ನಿಂದಾಗಿ ಸಾವನ್ನಪ್ಪಿದ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಆತ್ಮದ ಜತೆ ಮಾತನಾಡಿದ ವಿಡಿಯೋವೊಂದು ಸದ್ಯ ಸಂಚಲನ ಸೃಷ್ಟಿಸಿದೆ! ಆದರೆ, ಇದೆಷ್ಟರ ಮಟ್ಟಿಗೆ ನಿಜ ಎಂಬುದೂ ಗೊಂದಲ ಸೃಷ್ಟಿಸಿದೆ.
ಇದನ್ನೂ ಓದಿ: ಸುಶಾಂತ್ನನ್ನು ಕೊಲೆ ಮಾಡಿದ್ದು ದೀಪೇಶ್!?; ಪ್ಯಾರಾನಾರ್ಮಲ್ ತಜ್ಞನ ಮಾತುಕತೆಯಲ್ಲಿಯೇ ಇತ್ತು ಉತ್ತರ!
ಚಾರ್ಲಿ ಚಿಟ್ಟೆನಡೆನ್ ಪ್ಯಾರಾನಾರ್ಮಲ್ ಯೂಟ್ಯೂಬ್ ಚಾನೆಲ್ನಲ್ಲಿ ಕಳೆದ ಒಂದು ವಾರದ ಹಿಂದೆ ಚಿರಂಜೀವಿ ಸರ್ಜಾ ಅವರ ಸಂಭಾಷಣೆಯ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ‘ಚಿರಂಜೀವಿ ಸರ್ಜಾ ಸೆಲೆಬ್ರಿಟಿ ಘೋಸ್ಟ್ ಬಾಕ್ಸ್ ಇಂಟರ್ವ್ಯೂವ್ ಇವಿಪಿ’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ.
ವಿಡಿಯೋದಲ್ಲಿ ಪ್ಯಾರಾನಾರ್ಮಲ್ ತಜ್ಞ ಚಿರಂಜೀವಿಯನ್ನು ಮಾತನಾಡಲು ಯತ್ನಿಸಿದ್ದಾರೆ. ಆರಂಭದಲ್ಲಿ ಚಿರು ಅವರ ಹುಟ್ಟಿದ ದಿನ ಮತ್ತು ವರ್ಷವನ್ನು ಹೇಳಿ ಬಳಿಕ ಅವರ ಸಾವಿನ ದಿನಾಂಕವನ್ನು ಹೇಳಿ ಮಾತು ಆರಂಭಿಸಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, 3 ನಿಮಿಷ 54 ಸೆಕೆಂಡ್ನ ವಿಡಿಯೋದಲ್ಲಿ ಎಲ್ಲಿಯೂ ಚಿರು ಅವರ ಧ್ವನಿಯಾಗಲಿ, ಸನ್ನಿಯಾಗಲಿ ಯಾವುದೂ ಕೇಳಿಲ್ಲ. ಅಲ್ಲಲ್ಲಿ ಬೀಪ್ ರೀತಿಯ ಶಬ್ದಗಳನ್ನು ಬಳಸಲಾಗಿದೆ. ಆದರೆ, ಪ್ಯಾರಾನಾರ್ಮಲ್ ತಜ್ಞನ ಪ್ರಕಾರ ಆ ಬಿಪ್ ಮತ್ತು ಅಲ್ಲಲ್ಲಿ ಆಡಿಯೋ ಡಿಸ್ಟರ್ಬ್ ಆಗುವುದೇ ಅವರ ಸನ್ನೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಸುಶಾಂತ್ಗಿತ್ತು ವಿಚಿತ್ರ ಕಾಯಿಲೆ; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಸೈಕಿಯಾಟ್ರಿಸ್ಟ್ !
ತಜ್ಞ ಚಾರ್ಲಿ ಈಗಾಗಲೇ ಸಾಕಷ್ಟು ಆತ್ಮಗಳ ಜತೆ ಮಾತನಾಡಿರುವ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸ್ವಾತಂತ್ರ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಸೌತ್ ಇಂಡಿಯನ್ ನಟಿ ಸಿಲ್ಕ್ ಸ್ಮಿತಾ ಅವರ ಆತ್ಮಗಳ ಜತೆ ಮಾತನಾಡಿದ ವಿಡಿಯೋಗಳನ್ನೂ ಚಾರ್ಲಿ ಶೇರ್ ಮಾಡಿಕೊಂಡಿದ್ದಾರೆ.
VIDEO: ಸುಶಾಂತ್ ಆತ್ಮದ ಜತೆ ಮಾತನಾಡಿ, ಸಾವಿನ ಹಿನ್ನೆಲೆ ತಿಳಿದುಕೊಂಡ ಪ್ಯಾರಾನಾರ್ಮಲ್ ತಜ್ಞ!!