More

    ದೇವದುರ್ಗದಲ್ಲಿ ಶಾಂತಿಯುತ ಮತದಾನ

    ದೇವದುರ್ಗ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿಧಾನಸಭೆ ಚುನಾವಣೆ ಮತದಾನ ಬುಧವಾರ ಬೆಳಗ್ಗೆ ಬಿರುಸಿನಿಂದ ನಡೆಯಿತು. ಕೆಲಕಡೆ ತಾಂತ್ರಿಕ ಸಮಸ್ಯೆಯಿಂದ ಮತದಾನ ಪಕ್ರಿಯೆ ವಿಳಂಬವಾಗಿದ್ದು, ಬಹುತೇಕ ಕಡೆ ಶಾಂತಿಯುತವಾಗಿ ವೋಟಿಂಗ್ ಆಯಿತು.


    ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ, ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಮತದಾನ ಮಾಡಿದರು. ಮಾನ್ವಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ನಾಯಕ ಅರಕೇರಾದ ಮತಗಟ್ಟೆ ಸಂಖ್ಯೆ 187ರಲ್ಲಿ ಹಕ್ಕು ಚಲಾಯಿಸಿದರು.

    ಬಿಸಿಲಿಗೆ ಬಳಲಿದ ಅಧಿಕಾರಿಗಳು

    ತಾಲೂಕಿನ 265 ಮತಗಟ್ಟೆಯಲ್ಲಿ ಬೆಳಗ್ಗೆ 6ರಿಂದ ಮತದಾನ ಆರಂಭವಾಯಿತು. ಜನರು ಉತ್ಸಾಹದಿಂದಲೆ ತಮ್ಮ ಮತದಾನ ಮಾಡಲು ಮುಂದಾದರು. ಮಂಗಳವಾರ ರಾತ್ರಿ ಮಳೆಸುರಿದ ಕಾರಣ ಬೆಳಗ್ಗೆಯಿಂದ ಬಿಸಿಲು ಹೆಚ್ಚಾಗಿದ್ದು, ಗಾಳಿಕಡಿತವಾಗಿತ್ತು. ಕೇಂದ್ರದಲ್ಲಿ ಅಧಿಕಾರಿಗಳು ಹಾಗೂ ಮತದಾರರು ಉಷ್ಣತೆಗೆ ಬಳಲಿ ಹೋದರು.

    ಇದನ್ನೂ ಓದಿ: ಕ್ರಮ ಸಂಖ್ಯೆ ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗ; ಸಿಟ್ಟಾದ ಕೆಜಿಎಫ್ ಬಾಬು ಬೆಂಬಲಿಗರು

    ಪಟ್ಟಣದ ಪಶು ಆಸ್ಪತ್ರೆಯಲ್ಲಿ ತೆರೆದ 43ರ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಮುಖ್ಯರಸ್ತೆ ಉದ್ದಕ್ಕೂ ಸಾಲುಗಟ್ಟಿನಿಂತು ಮತದಾನ ಮಾಡಿದರು. ಮಹಿಳೆಯರು ಸರಿತಿ ಸಾಲಿನಲ್ಲಿ ಕುಳಿತು ಮತದಾನ ಮಾಡಿರವುದು ಕಂಡು ಬಂತು. ವಿವಿಧ ಮತದಾನ ಕೇಂದ್ರಗಳಿಗೆ ಬಿಜೆಪಿ ಅಭ್ಯರ್ಥಿಗಳಾದ ಕೆ.ಶಿವನಗೌಡ ನಾಯಕ, ಕರೆಮ್ಮ ಜಿ.ನಾಯಕ, ಶ್ರೀದೇವಿ ಭೇಟಿ ನೀಡಿ ವೀಕ್ಷಿಸಿದರು.

    ಅಲ್ಲಲ್ಲಿ ಗೊಂದಲ

    ತಾಲೂಕಿನ ಜಾಲಹಳ್ಳಿಯ 105ನೇ ಮತಗಟ್ಟೆ, ಖಾನಾಪುರದ 148ನೇ ಮತದಾನ ಕೇಂದ್ರ, ರಾಮನಾಯ್ಕ ತಾಂಡಾದ 44ನೇಮತಗಟ್ಟೆಯಲ್ಲಿ ಬೆಳಗ್ಗೆ ಯಂತ್ರಗಳಲ್ಲಿ ತಾಂತ್ರಿಕ ದೋಷದಿಂದ ಮತದಾನ ವಿಳಂಬವಾಯಿತು. ಎರಡು ಕಡೆ ಅಧಿಕಾರಿಗಳು ಸರಿಪಡಿಸಿ ಮತದಾನಕ್ಕೆ ಅವಕಾಶ ನೀಡಿದರು. ಇನ್ನು ತಾಲೂಕು ಕೇಂದ್ರದಿಂದ ದೂರವಿರುವ ಖಾನಾಪುರದಲ್ಲಿ ಹೊಸ ಯಂತ್ರವನ್ನು ಕೊಂಡೊಯ್ಯಲು ಸಮಯವಾಗಿದ್ದರಿಂದ ಅರ್ಧಗಂಟೆಕಾಲ ಮತದಾನ ಪ್ರಕ್ರಿಯೆ ತಡವಾಯಿತು. ಮಲ್ಲಾಪುರದಲ್ಲಿ ಇಬ್ಬರು ಹೊಸ ಮತದಾರರಿಗೆ ಗುರುತಿನ ಚೀಟಿದ್ದರೂ ವೋಟರ್ಸ್‌ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts