More

    ಬಾಂಬ್​ ಇಟ್ಟವರಿಗೆ ಕೊನೆಗೂ ಜೀವಾವಧಿ ಶಿಕ್ಷೆಯೇ ಗಟ್ಟಿ; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರಣಿ ಬಾಂಬ್​ ಸ್ಫೋಟ ಪ್ರಕರಣ

    ಬೆಂಗಳೂರು: ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಕೊನೆಗೂ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಆರೋಪ ಎದುರಿಸುತ್ತಿದ್ದ ಸೈಯದ್ ಜಮಾಲಿ ಮತ್ತು ಫಾರೂಕ್​ ಜೀವಾವಧಿ ಶಿಕ್ಷೆಗೆ ಒಳಗಾದವರು.

    ಬಾಂಬ್​ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ವಿಶೇಷ ನ್ಯಾಯಾಲಯದಿಂದ ಈ ಇಬ್ಬರು ಆರೋಪಿಗಳಿಗೆ ಏಳು ವರ್ಷದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

    ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು ಸಚಿವ ಕಾರಜೋಳರ ಕಾರು; ಮುರಿತಕ್ಕೊಳಗಾಯಿತು ಸವಾರನ ಕಾಲು..

    ಮೇಲ್ಮನವಿಯಂತೆ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಮ್ಮೆ ವಿಚಾರಣೆ ನಡೆಸುವಂತೆ ಸಿಟಿ ಸಿವಿಲ್ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ಈ ಮೇರೆಗೆ ನಡೆದ ವಿಚಾರಣೆ ಬಳಿಕ ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಸಿಟಿ ಸಿವಿಲ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರ ಪರವಾಗಿ ವಕೀಲರಾದ ರವೀಂದ್ರ ಮತ್ತು ಸುಧನ್ವ ವಾದ ಮಂಡಿಸಿದ್ದರು.

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಲಗ್ನವಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿಯ ಮಧ್ಯಪ್ರವೇಶ: ಈ ಮದ್ವೆ ಬೇಡ ಎಂದು ಆಕೆಯ ಮನವೊಲಿಕೆ; ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts