More

    ಕರೊನಾ ಸ್ಪೋಟದ ಬಗ್ಗೆ ಚೀನಾ ಸರ್ಕಾರದ ರಹಸ್ಯ ಬಯಲು ಮಾಡಿದ ಪ್ರಖ್ಯಾತ ವೈರಾಲಜಿಸ್ಟ್​!

    ಬೀಜಿಂಗ್​: ಚೀನಾ ಸರ್ಕಾರವು ಮಹಾಮಾರಿ ಕರೊನಾ ವೈರಸ್​ ಸ್ಪೋಟದ ವಿಚಾರವನ್ನು ಸಂಪೂರ್ಣ ಮುಚ್ಚಿಹಾಕಿದೆ ಎಂದು ಚೀನಾದ ಪ್ರಖ್ಯಾತ ವೈರಾಲಜಿಸ್ಟ್​ (ಸೂಕ್ಷ್ಮರೋಗಾಣು ಶಾಸ್ತ್ರಜ್ಞ) ತಿಳಿಸಿದ್ದು, ಕರೊನಾ ವಿರುದ್ಧ ಎಚ್ಚರಿಕೆ ನೀಡಿದವರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿತ್ತು ಎಂಬುದು ತಿಳಿದಿದ್ದರಿಂದ ಬಲವಂತವಾಗಿ ಹಾಂಗ್​ಕಾಂಗ್​ಗೆ ಫಲಾಯನ ಮಾಡಬೇಕಾಯಿತು ಎಂದಿದ್ದಾರೆ.

    ಹಾಂಗ್​ಕಾಂಗ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನಲ್ಲಿ ವೈರಾಲಜಿಸ್ಟ್​ ಹಾಗೂ ಇಮ್ಯುನಾಲಜಿ (ರೋಗನಿರೋಧಕ ಶಾಸ್ತ್ರ) ತಜ್ಞರಾಗಿರುವ ಡಾ. ಲಿಮೆಂಗ್​ ಯಾನ್​, ಕರೊನಾ ಹರಡುವುದಕ್ಕೂ ಮೊದಲೇ ಚೀನಾ ಸರ್ಕಾರಕ್ಕೆ ಎಲ್ಲವೂ ತಿಳಿದಿತ್ತು ಎಂದು ಸ್ಪೋಟಕ ಮಾಹಿತಿ ಹೊರಗೆಡವಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!

    ಫಾಕ್ಸ್​ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕರೊನಾ ಕುರಿತಾದ ತಮ್ಮ ಸಂಶೋಧನೆ ಬಗ್ಗೆ ತಿಳಿಸಿದ್ದಾರೆ. ತಮ್ಮ ಸಂಶೋಧನೆ ಕರೊನಾ ವೈರಸ್​ನಿಂದ ಹಲವರ ಜೀವವನ್ನು ಉಳಿಸುತ್ತದೆ ಎಂದು ನಂಬಿರುವ ಯಾನ್​, ತಮ್ಮ ಜೀವಕ್ಕೆ ತೊಂದರೆ ಬಂದರು ಪರವಾಗಿಲ್ಲ ಎಂದು ಕರೊನಾ ಕುರಿತಾದ ಕೆಲ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಳ್ಳಲು ಅಮೆರಿಕಕ್ಕೆ ಹಾರಿದ್ದಾರೆ. ಅಂದಹಾಗೆ ಯಾನ್​ ಮರಳಿ ಹಾಂಗ್​ಕಾಂಗ್​ ಬರುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.

    ಕರೊನಾ ಕುರಿತಾಗಿ ಅಧ್ಯಯನ ನಡೆಸಿದ ಮೊದಲ ವಿಜ್ಞಾನಿ ನಾನೇ ಎಂದು ಹೇಳಿಕೊಂಡಿರುವ ಯಾನ್​, ಚೀನಾದ ಮುಖ್ಯ ಭೂಭಾಗದಲ್ಲಿ ಸಾರ್ಸ್​ ರೀತಿಯ ವೈರಾಣು ಪ್ರಕರಣಗಳು ಡಿಸೆಂಬರ್​ನಲ್ಲೇ ಕಂಡುಬಂದಿದ್ದವು. ಇದನ್ನು ಪರಿಶೀಲಿಸಲು ಹಾಂಗ್​ಕಾಂಗ್​ ಯೂನಿವರ್ಸಿಟಿ ಮೇಲ್ವಿಚಾರಕರಾದ ಡಾ ಲೀ ಪೂನ್ ಎಂಬುವರನ್ನು 2019ರ ಡಿಸೆಂಬರ್​ನಲ್ಲಿ ಕೇಳಲಾಯಿತು. ಆದರೆ, ಹಾಂಗ್​ಕಾಂಗ್​ ಸೇರಿದಂತೆ ವಿದೇಶಿ ಸಂಶೋಧಕರು ಚೀನಾದಲ್ಲಿ ವೈರಾಣು ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಸರ್ಕಾರ ಅನುಮತಿ ನಿರಾಕರಿಸಿತು. ಬಳಿಕ ನಮ್ಮ ಸ್ನೇಹಿತರ ಮೂಲಕ ಹೆಚ್ಚಿನ ಮಾಹಿತಿ ಕಲೆಹಾಕಲು ಆರಂಭಿಸಿದೆ ಎಂದು ಯಾನ್​ ಹೇಳಿದ್ದಾರೆ. ಚೀನಾ ಸರ್ಕಾರಕ್ಕೆ ಎಲ್ಲೂ ಮೊದಲೇ ತಿಳಿದಿತ್ತು. ಹೀಗಾಗಿಯೇ ಎಚ್ಚರಿಕೆ ನೀಡಿದ ಕೆಲವರು ನಿಗೂಢವಾಗಿ ಸಾವಿಗೀಡಾದರು ಎಂದು ಹೇಳಿದ್ದಾರೆ.

    ಇನ್ನು ಚೀನಾ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ನಡೆ ನನಗೇನು ಆಶ್ಚರ್ಯ ತರಲಿಲ್ಲ. ಅಂತಾರಾಷ್ಟ್ರೀಯ ಸಂಘಟನೆಯಂತಹ ಡಬ್ಲ್ಯುಎಚ್​ಒ ಹಾಗೂ ಚೀನಾ ಸರ್ಕಾರ ಹಾಗೂ ಚೀನಾ ಕಮ್ಯುನಿಸ್ಟ್​ ಪಕ್ಷದ ನಡುವಿನ ಭ್ರಷ್ಟಾಚಾರ ನನಗೆ ಮೊದಲೇ ತಿಳಿದಿತ್ತು. ಚೀನಾ ಕರೊನಾ ಸ್ಟೋಟವನ್ನು ಮುಚ್ಚಿಹಾಕಿದೆ ಎಂಬುದನ್ನು ಡಬ್ಲ್ಯುಎಚ್​ಒ ಹಾಗೂ ಚೀನಾ ಸರ್ಕಾರ ಬಲವಾಗಿ ನಿರಾಕರಿಸಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ನಿರೀಕ್ಷೆ ಮಟ್ಟ ಕಾಣದ ಆನ್​ಲೈನ್ ಕ್ಲಾಸ್: ತಂತ್ರಜ್ಞಾನದ ಅರಿವು ಇಲ್ಲದ ಶಿಕ್ಷಕರಿಗೆ ಕಷ್ಟ

    ಯಾನ್​ ಸದ್ಯ ಅಮೆರಿಕದಲ್ಲಿದ್ದು, ತನ್ನ ಜೀವಕ್ಕೆ ಅಪಾಯ ಎದುರಾಗಬಹುದು ಎಂಬ ಅಪಾಯದಲ್ಲಿದ್ದಾರೆ. ಚೀನಾ ಸರ್ಕಾರವು ತನ್ನ ಖ್ಯಾತಿಯನ್ನು ಹಾಳುಮಾಡಲು, ತನ್ನ ಕುಟುಂಬವನ್ನು ಬೆದರಿಸಲು ಮತ್ತು ತನ್ನ ವಿರುದ್ಧ ಸೈಬರ್ ದಾಳಿ ನಡೆಸಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಂಗ್​ಕಾಂಗ್ ವಿಶ್ವವಿದ್ಯಾಲಯವು ಸಹ ತಮ್ಮ ವೆಬ್‌ಸೈಟ್‌ನಲ್ಲಿ ಯಾನ್​ ಅವರ ಪುಟವನ್ನು ತೆಗೆದುಹಾಕಿದೆ. ಅಲ್ಲದೆ, ಡಾ. ಲಿ ಮೆಂಗ್ ಯಾನ್ ಇನ್ನು ಮುಂದೆ ವಿಶ್ವವಿದ್ಯಾಲಯದ ಸಿಬ್ಬಂದಿ ಸದಸ್ಯರಾಗಿಲ್ಲ ಎಂದು ಹೇಳಿರುವುದಾಗಿ ಫಾಕ್ಸ್​ ನ್ಯೂಸ್​ಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts