More

    ಕರೊನಾ ಹುಟ್ಟಿದ ದೇಶದಲ್ಲೇ ತಯಾರಾಗಿದೆ ಔಷಧಿ; ಯಾವ ಲಸಿಕೆನೂ ಬೇಡ ಅಂತಿದ್ದಾರೆ ಚೀನಾ ವಿಜ್ಞಾನಿಗಳು

    ಬೀಜಿಂಗ್​: ಕರೊನಾ ವೈರಸ್​ಗೆ ಇದುವರೆಗೆ ಯಾವುದೇ ಔಷಧಿಯಾಗಲಿ, ಲಸಿಕೆಯಾಗಲಿ ಅಧಿಕೃತವಾಗಿ ತಯಾರಾಗಿಲ್ಲ. ಸದ್ಯ ಮಲೇರಿಯಾ ನಿಯಂತ್ರಣಕ್ಕೆ ನೀಡುವ ಔಷಧಿಯನ್ನೇ ನೀಡಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧ ದೇಶಗಳ ಹಲವು ವಿಜ್ಞಾನಿಗಳು, ಔಷಧ ತಯಾರಿಕಾ ಸಂಸ್ಥೆಗಳು ಕೊವಿಡ್-19ಕ್ಕೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿವೆ.

    ಇದೀಗ ಚೀನಾದ ವಿಜ್ಞಾನಿಗಳು ತಾವು ಕೊವಿಡ್​-19ನ್ನು ಗುಣಪಡಿಸುವ ಔಷಧಿಯನ್ನು ಕಂಡು ಹಿಡಿದಿದ್ದು, ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಈ ಔಷಧಿ ಕರೊನಾ ವಿರುದ್ಧ ಹೋರಾಡುತ್ತದೆ. ಖಂಡಿತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುತ್ತದೆ. ಬಹುಶಃ ಯಾವುದೇ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮುಂಬೈ ರಕ್ಷಣೆಗೀಗ ಕೇಂದ್ರೀಯ ಪಡೆಗಳೇ ದಿಕ್ಕು…! ಏನಾಗಿದೆ ಪೊಲೀಸರಿಗೆ?

    ಚೀನಾದ ಪ್ರತಿಷ್ಠಿತ ಪೀಕಿಂಗ್​ ವಿಶ್ವವಿದ್ಯಾನಿಲಯದಲ್ಲಿ ಈ ಔಷಧಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಇಲ್ಲಿನ ಸಂಶೋಧಕರು ಅದರ ಬಗ್ಗೆ ತುಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಕೊವಿಡ್​-19 ಸೋಂಕಿಗೆ ಒಳಗಾದವರ ಚೇತರಿಕೆಯ ಅವಧಿಯನ್ನು ಈ ಹೊಸ ಔಷಧಿ ಕಡಿಮೆ ಮಾಡುತ್ತಿದೆ. ದೇಹಕ್ಕೆ ಪ್ರವೇಶ ಮಾಡಿದ ಕೆಲವೇ ಸಮಯದಲ್ಲಿ ಸೋಂಕು ನಿವಾರಣೆ ಮಾಡುತ್ತದೆ ಎಂಬುದು ಪ್ರಯೋಗದಲ್ಲಿ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

    ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಕರೊನಾ ಸೋಂಕಿತ ಇಲಿಗೆ ನಾವು ಅಭಿವೃದ್ಧಿ ಪಡಿಸಿದ ಸೋಂಕು ನಿವಾರಕ ಆ್ಯಂಟಿಬಾಡಿ ಔಷಧಿಯನ್ನು ಇಂಜೆಕ್ಟ್​ ಮಾಡಿದ್ದೆವು. ಐದು ದಿನಗಳಲ್ಲಿ ಇಲಿಯ ದೇಹದಲ್ಲಿ ಸೋಂಕಿನ ಪ್ರಮಾಣ ತುಂಬ ಕಡಿಮೆಯಾಗಿತ್ತು ಎಂದು ವಿಶ್ವವಿದ್ಯಾನಿಲಯದ ಬೀಜಿಂಗ್ ಅಡ್ವಾನ್ಸ್ಡ್​​ ಇನ್ನೋವೇಶನ್ ಸೆಂಟರ್ ಫಾರ್ ಜೀನೋಮಿಕ್ಸ್​ನ ನಿರ್ದೇಶಕ ಸನ್ನಿ ಕ್ಸಿ ತಿಳಿಸಿದ್ದಾರೆ. ಈ ಔಷಧಿಯಿಂದ ಕೊವಿಡ್​-19ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂಬುದು ಪ್ರಯೋಗದಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಯುಎಸ್​ ಔಷಧ ತಯಾರಿಕಾ ಸಂಸ್ಥೆಯಿಂದ ಗುಡ್​ನ್ಯೂಸ್​: ಕೊವಿಡ್​ ಲಸಿಕೆ ಮೊದಲ ಪ್ರಯೋಗದಲ್ಲಿ ಪಾಸ್​ !

    ಔಷಧಿ ಕ್ಲಿನಿಕಲ್​ ಟೆಸ್ಟ್​ಗೆ ಯೋಜನೆ ರೂಪಿಸಲಾಗುತ್ತಿದೆ. ಚೀನಾದಲ್ಲಿ ಕರೊನಾ ಪ್ರಕರಣಗಳು ಕಡಿಮೆಯಾಗಿದ್ದರಿಂದ ಆಸ್ಟ್ರೇಲಿಯಾ ಸೇರಿ ಬೇರೆ ಕೆಲವು ದೇಶಗಳಲ್ಲಿ ಕ್ಲಿನಿಕಲ್​ ಟೆಸ್ಟ್ ಮಾಡಲಾಗುತ್ತದೆ. ಗಿನಿಯಿಲಿ (guinea pigs)ಗಳ ಮೇಲೆ ಪ್ರಯೋಗ ಮಾಡಲಾಗುವುದು ಎಂದು ವಿವರಿಸಿದ್ದಾರೆ. ಹಾಗೇ ಎಲ್ಲ ಪ್ರಯೋಗಗಳೂ ಮುಗಿದು ಔಷಧಿ ಬಳಕೆಗೆ ಸಿಗುವುದು ಈ ವರ್ಷದ ಕೊನೆಯಲ್ಲಿ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸುದ್ದಿವಾಹಿನಿಯೊಂದರ 25ಕ್ಕೂ ಹೆಚ್ಚು ಮಂದಿಗೆ ಕರೊನಾ ಪಾಸಿಟಿವ್​; ಕಚೇರಿ ಸೀಲ್​ ಡೌನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts