More

    ಚೀನಾ ಮೂಲದ ವ್ಯಕ್ತಿಯಿಂದ ಭಾರತದಲ್ಲಿ 1 ಸಾವಿರ ಕೋಟಿ ರೂಪಾಯಿ ಹವಾಲಾ ದಂಧೆ

    ನವದೆಹಲಿ: ಚೀನಾ ಮೂಲದ ಲ್ಯು ಸ್ಯಾಂಗ್​ (42) ಎಂಬಾತ ಭಾರತದಲ್ಲಿ 5 ಕಂಪನಿಗಳನ್ನು ಸ್ಥಾಪಿಸಿ, ಅವುಗಳ ನಿರ್ದೇಶಕನಾಗಿ 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹವಾಲಾ ದಂಧೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಣಿಪುರದಲ್ಲಿ ನೆಲೆಸಿದ್ದ ಈ ವ್ಯಕ್ತಿ ಭಾರತದ ಆಧಾರ್​ಕಾರ್ಡ್​ ಮತ್ತು ಪ್ಯಾನ್​ಕಾರ್ಡ್​ಗಳನ್ನು ಕೂಡ ಹೊಂದಿದ್ದ ಎಂದು ಹೇಳಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ಇದೀಗ ಈತನ ವಿರುದ್ಧ ತನ್ನ ಚೀನಾ ಮೂಲವನ್ನು ಮುಚ್ಚಿಟ್ಟು ಭಾರತದಲ್ಲಿ ಹಲವು ಕಂಪನಿಗಳನ್ನು ಸ್ಥಾಪಿಸಿ ವ್ಯವಹಾರ ನಡೆಸಿದ ಕುರಿತು ತನಿಖೆ ನಡೆಸುತ್ತಿವೆ.

    ಮಣಿಪುರದ ಬುವಾಲಿಯಾಂಗ್​ ಎಂಬ ಗ್ರಾಮದ ಖಾಯಂ ವಿಳಾಸ ನೀಡಿದ್ದ ಲ್ಯು ಸ್ಯಾಂಗ್​, ಚಾರ್ಲಿ ಪೆಂಗ್​ ಎಂಬ ಭಾರತೀಯ ಹೆಸರನ್ನು ಇಟ್ಟುಕೊಂಡು ಆಧಾರ್​ಕಾರ್ಡ್​ ಮತ್ತು ಪ್ಯಾನ್​ಕಾರ್ಡ್​ ಪಡೆದುಕೊಂಡಿದ್ದ. ಈ ಪ್ರಕ್ರಿಯೆಯಲ್ಲಿ ಆತ ತನ್ನ ಚೀನಾ ಮೂಲದ ಬಗೆಗಿನ ಮಾಹಿತಿಯನ್ನು ಬಚ್ಚಿಟ್ಟಿದ್ದ.
    2018ರ ಮಾರ್ಚ್​ನಲ್ಲಿ ಫಿನ್​ ಬ್ಲಾಕ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ಎಂಬ ಹೂಡಿಕೆ ಸಂಸ್ಥೆಯನ್ನು ಈತ ಆರಂಭಿಸಿದ್ದ. ಇದರ ಪ್ರೊಮೋಟರ್ ತಾನೆಂದು ಹೇಳಿಕೊಂಡಿದ್ದ. ​ ಆಗಿದ್ದ.

    ಒಂದು ವರ್ಷದ ಬಳಿಕ ಇನ್​ವಿನ್​ ಲಾಜಿಸ್ಟಿಕ್ಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​, ಒಟಿಎ ನ್ಯೂಡೆಲ್ಲಿ ಪ್ರೈವೇಟ್​ ಲಿಮಿಟೆಡ್​ ಮತ್ತು ಕ್ಲೀನ್​ ಹಾರ್ಬರ್ಸ್​ ಪ್ರೈವೇಟ್​ ಲಿಮಿಟೆಡ್​ ಎಂಬ ಮೂರು ಕಂಪನಿಗಳನ್ನು ಕೂಡ ಆರಂಭಿಸಿದ್ದು, ಈ ಮೂರು ಕಂಪನಿಯ ಹೆಚ್ಚಿನ ಪಾಲಿನ ಷೇರುಗಳನ್ನು ಹೊಂದುವ ಮೂಲಕ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದ. 2020ರ ಜನವರಿಯಲ್ಲಿ ಆತ ಒಟಿಎ ಲಾಜಿಸ್ಟಿಕ್​ ಪ್ರೈವೇಟ್​ ಲಿಮಿಟೆಡ್​ ಎಂಬ ಮತ್ತೊಂದು ಕಂಪನಿ ಆರಂಭಿಸಿ, ಅದರ ನಿರ್ದೇಶಕ ಕೂಡ ಆಗಿದ್ದ. ಅಧಿಕೃತ ದಾಖಲೆಗಳ ಪ್ರಕಾರ ಈ ಸಂಸ್ಥೆ ಸಾರಿಗೆ ಮತ್ತು ಪ್ರವಾಸೋದ್ಯಮ ವ್ಯವಹಾರಗಳಲ್ಲಿ ತೊಡಗಿಕೊಂಡಿತ್ತು.

    ಚೀನಾ ಮೂಲದ ವ್ಯಕ್ತಿಯಿಂದ ಭಾರತದಲ್ಲಿ 1 ಸಾವಿರ ಕೋಟಿ ರೂಪಾಯಿ ಹವಾಲಾ ದಂಧೆ

    ಅಚ್ಚರಿಯ ಸಂಗತಿ ಎಂದರೆ, ಸಾರಿಗೆ ಮತ್ತು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿದ್ದ ತನ್ನ ಇನ್​ವಿನ್​ ಲಾಜಿಸ್ಟಿಕ್ಸ್​ ಎಂಬ ಕಂಪನಿಯನ್ನು ಮುಚ್ಚಲು ಅನುಮತಿ ಕೋರಿ ಸಂಬಂಧಪಟ್ಟ ಸಂಸ್ಥೆಗೆ ಈತ ಅರ್ಜಿ ಸಲ್ಲಿಸಿದ್ದ.

    ಪೆಂಗ್​, ತಾನು ಸ್ಥಾಪಿಸಿದ್ದ ಎಲ್ಲ 5 ಕಂಪನಿಗಳ ಹೆಚ್ಚಿನ ಪಾಲಿನ ಷೇರುಗಳನ್ನು ಹೊಂದಿದ್ದು, ಒಟಿಎ ಲಾಜಿಸ್ಟಿಕ್ಸ್​, ಫಿನ್​ ಬ್ಲ್ಯಾಕ್​ರಾಕ್​ ಇಂಡಿಯಾ ಮತ್ತು ಕ್ಲೀನ್​ ಹಾರ್ಬರ್ಸ್​ ಸಂಸ್ಥೆಗಳಲ್ಲಿ ಆಲಿಗಢ ಮೂಲದ ರಾಹುಲ್​ ಕುಮಾರ್​ ಎಂಬಾತನೊಂದಿಗೆ ನಿರ್ದೇಶಕನ ಸ್ಥಾನವನ್ನು ಹಂಚಿಕೊಂಡಿದ್ದಾನೆ.

    ಚೀನಾ ಹಿನ್ನೆಲೆ ಬಚ್ಚಿಟ್ಟಿಲ್ಲ: ಒಂದು ಮೂಲದ ಪ್ರಕಾರ ಭಾರತದಲ್ಲಿ ಭಾರತೀಯ ಹೆಸರಿನಲ್ಲೇ ವ್ಯವಹರಿಸುತ್ತಿದ್ದ ಪೆಂಗ್​, ತನ್ನ ಚೀನಾದ ಹಿನ್ನೆಲೆಯನ್ನು ಬಚ್ಚಿಟ್ಟಿರಲಿಲ್ಲ ಎನ್ನಲಾಗಿದೆ. ಆತನ ಸಾಮಾಜಿಕ ಜಾಲತಾಣದ ಖಾತೆಗಳನ್ನು ಗಮನಿಸಿದಾಗ ಹಲವು ಹೆಸರುಗಳಲ್ಲಿ ಖಾತೆಗಳನ್ನು ಹೊಂದಿದ್ದು, ತಾನು ಚೀನಾ ಗ್ಯಾಲಾಕ್ಷಿ ಸೆಕ್ಯೂರಿಟೀಸ್​ ಎಂಬ ದಲ್ಲಾಳಿ ಮತ್ತು ಹೂಡಿಕೆ ಬ್ಯಾಂಕ್​ನಲ್ಲಿ ಕೆಲಸ ಮಾಡಿದ್ದು, 2008ರಲ್ಲಿ ಉದ್ಯೋಗ ತೊರೆದಿದ್ದಾಗಿ ಹೇಳಿಕೊಂಡಿದ್ದಾನೆ.

    ಚೀನಾ ಮೂಲದ ವ್ಯಕ್ತಿಯಿಂದ ಭಾರತದಲ್ಲಿ 1 ಸಾವಿರ ಕೋಟಿ ರೂಪಾಯಿ ಹವಾಲಾ ದಂಧೆ

    ಚೀನಾದ ಗುಲೌ ಜಿಲ್ಲೆಯ ಜಿನ್​ಲಿಂಗ್​ ಹೈಸ್ಕೂಲ್​ನಲ್ಲಿ ತಾನು ವಿದ್ಯಾಭ್ಯಾಸ ಮಾಡಿರುವುದಾಗಿಯೂ ತಿಳಿಸಿದ್ದಾನೆ. ಆದರೆ, ಈತ ಯಾವ ರೀತಿಯ ವ್ಯವಹಾರ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಆತನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹೇಳಿಕೊಂಡಿದ್ದಾರೆ.

    ದಿನಸಿ ಹಂಚಿದ್ದ: ಹವಾಲಾ ದಂಧೆಯಲ್ಲಿ ತೊಡಗಿಕೊಂಡಿದ್ದರೂ ಪೆಂಗ್​ ಭಾರತದಲ್ಲಿ ಸಮಾಜಸೇವೆಯನ್ನೂ ಮಾಡುತ್ತಿದ್ದ. ಇತ್ತೀಚೆಗಿನ ಕೋವಿಡ್​-19 ಲಾಕ್​ಡೌನ್​ ವೇಳೆ ದೆಹಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ 200ಕ್ಕೂ ಹೆಚ್ಚು ಮಣಿಪುರ ಮೂಲದ ಕುಟುಂಬಗಳಿಗೆ ಆತ ದಿನಸಿ ಕಿಟ್​ಗಳನ್ನು ವಿತರಿಸಿದ್ದ. ಆದರೆ, ಇದರ ಶ್ರೇಯವನ್ನು ಗಳಿಸಿಕೊಳ್ಳಲು ನಿರಾಕರಿಸಿ, ನೇಪಥ್ಯದಲ್ಲೇ ನಿಂತು ಈ ಕೆಲಸ ಮಾಡಿದ್ದ ಎನ್ನಲಾಗಿದೆ.

    ಪತ್ತೆಯಾಗಿದ್ದ ಹೇಗೆ?: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ದೆಹಲಿ, ಘಾಜಿಯಾಬಾದ್​ ಮತ್ತು ಗುರುಗ್ರಾಮಗಳಲ್ಲಿ ಚೀನಾ ಸಂಪರ್ಕ ಇರುವ ಕಂಪನಿಗಳಿಂದ ಅಕ್ರಮ ನಗದು ವಹಿವಾಟು ನಡೆದಿರುವ ಬಗ್ಗೆ ತನಿಖೆ ನಡೆಸಲು 12ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದರು. ಈ ದಾಳಿಯ ಸಂದರ್ಭದಲ್ಲಿ ಸ್ಯಾಂಗ್​ ಎಂಬ ಹೆಸರು ಪತ್ತೆಯಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿದಾಗ, ಪೆಂಗ್​ನ ಸೋಗು ಬಹಿರಂಗವಾಯಿತು ಎನ್ನಲಾಗಿದೆ.

    ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts