More

    ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!

    ಬೆಂಗಳೂರು: ಧಾರ್ವಿುಕ ಭಾವನೆಗೆ ಧಕ್ಕೆಯುಂಟು ಮಾಡುವಂಥ ಫೇಸ್​ಬುಕ್ ಪೋಸ್ಟ್ ನೆಪವಾಗಿಸಿಕೊಂಡು ಬೆಂಗಳೂರಿನ ಕಾಡುಗೊಂಡನಹಳ್ಳಿ ಹಾಗೂ ದೇವರಜೀವನಹಳ್ಳಿಯಲ್ಲಿ ಒಂದು ಸಮುದಾಯದ ಕೆಲವರು ಮಂಗಳವಾರ ನಡೆಸಿದ ಗಲಭೆ ಪೂರ್ವಯೋಜಿತ ಕೃತ್ಯವೆಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಇದರ ಜತೆಯಲ್ಲೇ ರಾಜಕೀಯ ದ್ವೇಷಕ್ಕೆ ಹೊತ್ತಿರುವ ಕಿಡಿ ಇದೆಂಬ ಅನುಮಾನದ ವಾಸನೆಯೂ ಬಡಿದಿದೆ.

    ಮಂಗಳವಾರ ರಾತ್ರಿ ಉದ್ರಿಕ್ತರನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸಿಸಿ ಕ್ಯಾಮರಾ, ಟಿವಿ ಹಾಗೂ ಮೊಬೈಲ್ ವಿಡಿಯೋಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ 145ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಎಸಿಪಿ, ಇನ್​ಸ್ಪೆಕ್ಟರ್ ಸೇರಿ 13ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿದ ಬಳಿಕ ತನಿಖೆಗಿಳಿದಿರುವ ಪೊಲೀಸರಿಗೆ ಇದು ಹಠಾತ್ತನೆ ಸೃಷ್ಟಿಯಾದ ಪರಿಸ್ಥಿತಿಯಲ್ಲ ಬದಲಾಗಿ ಸಂಚು ರೂಪಿಸಿ ದಾಂಧಲೆ ನಡೆಸಲಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳು ಸಿಕ್ಕಿವೆ.ಹೊರಗಿನಿಂದ ಗಲಭೆಕೋರರನ್ನು ಕರೆಸಿ ದಾಂಧಲೆ ನಡೆಸಲಾಗಿದೆ.

    ಮೊದಲು ಪೊಲೀಸರ ಮೇಲೆ ದಾಳಿ ನಡೆಸಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗಿದೆ. ಬಳಿಕ ರಸ್ತೆಬದಿಗಳಲ್ಲಿ ಬೆಂಕಿ ಹಚ್ಚಿ ಹೆಚ್ಚಿನ ಪೊಲೀಸರು ತಕ್ಷಣಕ್ಕೆ ಬರಲು ಸಾಧ್ಯವಾಗದಂತೆ ಅಡೆತಡೆ ನಿರ್ವಿುಸಿದ ತರುವಾಯ ಸಾರ್ವಜನಿಕರ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸಲಾಗಿದೆ. ಇವೆಲ್ಲವೂ ಪೂರ್ವಯೋಜಿತ ಕೃತ್ಯ ಎಂಬುದಕ್ಕೆ ದೊರೆತಿರುವ ಸಾಕ್ಷ್ಯಗಳೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರು ದಾಂಧಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

    ಕಾಡುವ ಅನುಮಾನ
    # ವಾಟ್ಸ್​ಆಪ್ ಗ್ರೂಪ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೆ ಮಾಡಿದ್ದೇಕೆ?
    # ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುವಾಗ ನೂರಾರು ಮಂದಿ ಜಮಾಯಿಸಿದ್ದು ಏಕೆ?
    # ಆರೋಪಿಯನ್ನು ಬಂಧಿಸುವ ಭರವಸೆ ನೀಡಿದರೂ ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದೇಕೆ?
    # ಪೆಟ್ರೋಲ್ ಬಾಂಬ್​ಗಳು, ಸೀಮೆಎಣ್ಣೆ, ಲಾಂಗು, ಮಚ್ಚು, ಕಲ್ಲುಗಳು, ದೊಣ್ಣೆ ಎಲ್ಲಿಂದ ಬಂದವು?
    # ಏಕಕಾಲಕ್ಕೆ ಠಾಣೆ, ಶಾಸಕರ ಮನೆ, ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿದ್ದು ಹೇಗೆ?
    # ಶಾಸಕರ ಸಂಬಂಧಿ ತಪ್ಪು ಮಾಡಿದರೆ ಪೊಲೀಸ್ ಠಾಣೆಗೆ ಬೆಂಕಿಹಚ್ಚಿದ್ದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts