More

    ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

    ಬೀಜಿಂಗ್​: ಇಡೀ ಜಗತ್ತಿಗೆ ಮಾರಕ ಕರೊನಾ ವೈರಸ್​ ಹಬ್ಬಿಸಿ, ತನ್ನ ದೇಶದೊಳಗೆ ಎಲ್ಲವನ್ನೂ ಸರಿಪಡಿಸಿಕೊಂಡು ಬೀಗುತ್ತಿರುವ ಚೀನಾ ವಿರುದ್ಧ ತನ್ನ ಪ್ರಜೆಗಳೇ ಇದೀಗ ತಿರುಗಿಬಿದ್ದಿದ್ದಾರೆ. ಸ್ಮಾರ್ಟ್​ಫೋನ್​​ ಆ್ಯಪ್​ ಮೂಲಕ ತನ್ನ ಪ್ರಜೆಗಳ ಮೇಲೆ ನಿಗಾ ಇಡಲು ಮುಂದಾಗಿರುವ ಚೀನಾ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಕೇಳಿಬಂದಿದೆ.

    ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ಪೂರ್ವ ಚೀನಾದ ಪ್ರಮುಖ ನಗರ ಹ್ಯಾಂಗ್​ಝೌನ ಆಡಳಿತವು ತನ್ನ ರಾಜ್ಯದ ಪ್ರಜೆಗಳ ಹವ್ಯಾಸ ಸೇರಿದಂತೆ ಜೀವನಶೈಲಿಯ ಮೇಲೆ ಕಣ್ಣಿಡಲು ಶಾಶ್ವತ ಮೊಬೈಲ್​ ಪ್ರೋಗ್ರಾಮ್ ಅನ್ನು ಬಳಸಲು ಪ್ರಸ್ತಾವನೆಯನ್ನು ಸಲ್ಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.​

    ಸ್ಥಳೀಯ ಆಡಳಿತ ಹೇಳುವಾಗೆ, ಹೊಸ ಹೆಲ್ತ್​ ಆ್ಯಪ್​ ಮೂಲಕ ಪ್ರಜೆಗಳು ವೈದ್ಯಕೀಯ ದಾಖಲೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಶೇರ್​ ಮಾಡಲಾಗುತ್ತದೆ. ಇದರಿಂದ ಆರೋಗ್ಯ ಸ್ಥಿತಿಯ ಬಗ್ಗೆ ಎಚ್ಚರಿಕೆ ವಹಿಸಲು ಸಹಾಯವಾಗಲಿದೆ ಎಂದು ಸ್ಪಷ್ಟನೆ ನೀಡಿದೆ. ಅಂದಹಾಗೆ ಹ್ಯಾಂಗ್​ಝೌ ನಗರದಲ್ಲಿ 10 ಮಿಲಿಯನ್ (ಒಂದು ಕೋಟಿ) ಜನರು ವಾಸವಿದ್ದಾರೆ.

    ಇದನ್ನೂ ಓದಿ: ಗುಜರಾತ್‌ನಿಂದ ಬಿಹಾರಕ್ಕೆ ಹೊರಟಿದ್ದ ರೈಲು ತಲುಪಿದ್ದು ಕರ್ನಾಟಕಕ್ಕೆ!

    ಈ ಹೊಸ ಯೋಜನೆ ಸುದ್ದಿಯಾಗುತ್ತಿದ್ದಂತೆ ಚೀನಾದಲ್ಲಿ ಕಿಡಿಹೊತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳ ಸುರಿಮಳೆ ಹರಿದುಬರುತ್ತಿದೆ. ಕೆಲವರು ತಮ್ಮ ವೈಯಕ್ತಿಯ ಡಾಟಾ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಕರೊನಾ ಹೆಸರಿನಲ್ಲಿ ಖಾಸಗಿತನದ ಉಲ್ಲಂಘನೆ ಮಾಡಲು ಹೊರಟಿದೆ ಎಂದು ಆಪಾದಿಸಿದ್ದಾರೆ.

    ಈಗಾಗಲೇ ಕೋವಿಡ್​-19 ತಡೆಯುವ ಉದ್ದೇಶದಿಂದ ಕಲರ್​ ಕೋಡೆಡ್​ ಆ್ಯಪ್​ ಅನ್ನು ಹ್ಯಾಂಗ್​ಝೌ ನಗರ ಫೆಬ್ರವರಿಯಲ್ಲಿ ಪರಿಚಯಿಸಿದ್ದು, ಎಲ್ಲರೂ ಬಳಸುವಂತೆ ಕಡ್ಡಾಯ ಪಡಿಸಿದೆ. ಸಾರ್ವಜನಿಕ ಸ್ಥಳ ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಳಸುವ ಮುನ್ನ ತಮಗೆ ಕರೊನಾ ವೈರಸ್​ ಇಲ್ಲ ಎಂಬುದನ್ನು ಆ್ಯಪ್​ ಮೂಲಕ ಸಾಬೀತುಪಡಿಸ ಬೇಕಾಗಿದೆ.

    ಇದನ್ನೂ ಓದಿ: ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

    ಸದ್ಯ ಬಳಕೆಯಲ್ಲಿರುವ ಆ್ಯಪ್​ ತಾತ್ಕಾಲಿಕವಷ್ಟೇ. ಇದೀಗ ಶಾಶ್ವತ ಆ್ಯಪ್​ಗೆ ಸ್ಥಳೀಯ ಆಡಳಿತ ಚಿಂತನೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ವಿಶ್ವ ಆರೋಗ್ಯ ಸಂಸ್ಥೆ ಬೇಡ ಎಂದರೂ ಭಾರತದಲ್ಲಿ ಎಚ್‌ಸಿಕ್ಯೂ ಬಳಕೆ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts