More

    ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಚೀನಾ ಪ್ರಜೆ ಪತ್ತೆ!

    ಮಾಲ್ಡಾ : ಭಾರತ ಮತ್ತು ಬಾಂಗ್ಲಾದೇಶ ಗಡಿಯ ಸಮೀಪ 35 ವರ್ಷದ ಚೀನಾ ಪ್ರಜೆಯನ್ನು ಇಂದು ಗಡಿ ಭದ್ರತಾ ಪಡೆ(ಬಿಎಸ್​ಎಫ್​) ಬಂಧಿಸಿದೆ. ‘ಅನುಮಾನಾಸ್ಪದ ಚಟುವಟಿಕೆಗಳ’ ಕಾರಣಕ್ಕಾಗಿ ಹ್ಯಾನ್​ ಜುನ್ವೇ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

    ಈ ವ್ಯಕ್ತಿಯ ಬಳಿ ಬಾಂಗ್ಲಾದೇಶದ ವೀಸಾ ಹೊಂದಿರುವ ಚೀನಾದ ಪಾಸ್‌ಪೋರ್ಟ್ ಪತ್ತೆಯಾಗಿದ್ದು, ಲ್ಯಾಪ್‌ಟಾಪ್ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. “ಬೆಳಿಗ್ಗೆ 7 ಗಂಟೆಗೆ ಅವನನ್ನು ತಡೆಹಿಡಿದೆವು. ಕಾಲಿಯಚಕ್​ ಪೋಸ್ಟ್​ಗೆ ಕರೆತಂದು ಇತರ ಏಜೆನ್ಸಿಗಳಿಗೆ ವಿಷಯ ತಿಳಿಸಿದೆವು. ಈಗ ಅವನನ್ನು ವಿಚಾರಣೆ ಮಾಡಲಾಗುತ್ತಿದೆ” ಎಂದು ಬಿಎಸ್​ಎಫ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

    ಇದನ್ನೂ ಓದಿ: ಹಾಡುಹಗಲೇ ಬ್ಯಾಂಕ್ ದರೋಡೆ : 1.19 ಕೋಟಿ ರೂ. ಹಣ ಲೂಟಿ

    ದೇಶದ ಒಳನುಸುಳಿರುವ ಈ ಚೀನಾ ಪ್ರಜೆಗೆ ಇಂಗ್ಲಿಷ್ ತಿಳಿದಿಲ್ಲವೆಂದು ತೋರಿಬಂದಿದ್ದು, ಆರಂಭದಲ್ಲಿ ಅವನೊಂದಿಗೆ ಸಂಭಾಷಣೆ ನಡೆಸಲು ಅಧಿಕಾರಿಗಳು ಕಷ್ಟಪಟ್ಟರು. ನಂತರ ಮ್ಯಾಂಡರಿನ್ ಭಾಷೆಯನ್ನು ತಿಳಿದಿರುವ ಭದ್ರತಾ ಅಧಿಕಾರಿಯೊಬ್ಬರನ್ನು ಕರೆಸಲಾಯಿತು. ಈತನನ್ನು ಈಗ ಗುಪ್ತಚರ ಸಂಸ್ಥೆಗಳು ಪ್ರಶ್ನಿಸುತ್ತಿವೆ ಎನ್ನಲಾಗಿದೆ.

    ಬಂಗಾಳದ ಮಾಲ್ಡಾ, ಬಾಂಗ್ಲಾದೇಶದೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದ್ದು, ಸೂಕ್ಷ್ಮ ಪ್ರದೇಶವಾಗಿದೆ. ಈ ಪ್ರದೇಶವನ್ನು ಹೆಚ್ಚಾಗಿ ಮಾದಕ ದ್ರವ್ಯ, ಶಸ್ತ್ರಾಸ್ತ್ರ, ದನ ಮತ್ತು ಅಕ್ರಮ ವಲಸಿಗರ ಕಳ್ಳಸಾಗಣೆಗೆ ಬಳಸಲಾಗುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)

    ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

    ದೊಡ್ಡವರ ಜಗಳದಲ್ಲಿ ಕೂಸು ಬಲಿಯಾಯ್ತು… ಸುಳ್ಳು ಕೇಸ್ ಹಾಕಲು ಮೊಮ್ಮಗಳನ್ನು ಕೊಂದ ಕಿರಾತಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts