More

    ಫೆಬ್ರವರಿಯಲ್ಲಿ ಇಸ್ರೇಲ್​ಗೆ ಬಂದಿದ್ದ ಚೀನಾ ರಾಯಭಾರಿಯ ನಿಗೂಢ ಸಾವು

    ಟೆಲ್​ ಅವೀವ್​: ಇಸ್ರೇಲ್​ನಲ್ಲಿನ ಚೀನಾದ ರಾಯಭಾರಿ ಡ್ಯು ವೀ ನಿಗೂಢವಾಗಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅವರ ಶವ ಟೆಲ್​ ಅವೀವ್​ನ ಹೆರ್ಜಿಲ್ಯಾ ಉಪನಗರದಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದ್ದಾಗಿ ಇಸ್ರೇಲಿ ಪೊಲೀಸ್​ ವಕ್ತಾರರು ತಿಳಿಸಿದ್ದಾರೆ.

    ಈ ವರ್ಷದ ಫೆಬ್ರವರಿಯಲ್ಲಿ ಡ್ಯು ವೀ ಇಸ್ರೇಲ್​ನಲ್ಲಿನ ಚೀನಾದ ರಾಯಭಾರಿಯಾಗಿ ನೇಮಕಗೊಂಡು, ಅಧಿಕಾರ ಸ್ವೀಕರಿಸಿದ್ದರು.
    ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ಇತ್ತೀಚೆಗೆ ಇಸ್ರೇಲ್​ಗೆ ಭೇಟಿ ನೀಡಿದ್ದರು. ಕರೊನಾ ಪಿಡುಗು ನಿಯಂತ್ರಣ ವಿಷಯದಲ್ಲಿ ಚೀನಾ ಇಡೀ ವಿಶ್ವವನ್ನೇ ವಂಚಿಸಿದೆ. ಆದ್ದರಿಂದ, ಆ ರಾಷ್ಟ್ರದೊಂದಿಗೆ ಮಾಡಿಕೊಳ್ಳಲು ಉದ್ದೇಶಿಸಲಾಗಿರುವ ಮೂಲಸೌಕರ್ಯ ಮತ್ತು ಸಂವಹನ ಕ್ಷೇತ್ರದ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಇಸ್ರೇಲ್​ ಅನ್ನು ಆಗ್ರಹಿಸಿದ್ದರು. ಇದಾಗಿ ಒಂದು ವಾರಕ್ಕೆ ಚೀನಾದ ರಾಯಭಾರಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಇದನ್ನೂ ಓದಿ: ಈ ಕಾರಣಕ್ಕೆ ಇನ್ಸ್ಟಾಗ್ರಾಂ ಡಿ-ಆ್ಯಕ್ಟಿವೇಟ್​ ಮಾಡಿದ್ರಾ ಕಣ್ಸನ್ನೆ ಹುಡುಗಿ ಪ್ರಿಯಾ!

    ಸ್ಥಳಕ್ಕೆ ಧಾವಿಸಿರುವ ವೈದ್ಯಾಧಿಕಾರಿಗಳ ಪ್ರಕಾರ ಡ್ಯು ವೀ ನಿದ್ದೆಯಲ್ಲಿ ಸಹಜವಾಗಿ ಮೃತಪಟ್ಟಿರಬಹುದು ಎಂದು ಹೇಳಿದ್ದಾರೆ. ಆದರೂ, ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.

    ಡ್ಯು ವೀ ಸಾವಿಗೆ ನಿಖರವಾದ ಕಾರಣ ಗೊತ್ತಿಲ್ಲ. ಹಾಗಾಗಿ, ಅಸಹಜ ಸಾವಿನ ಪ್ರಕರಣ ಎಂದು ಭಾವಿಸಿ ತನಿಖೆ ಆರಂಭಿಸಿರುವುದಾಗಿ ಇಸ್ರೇಲ್​ ಪೊಲೀಸ್​ನ ವಕ್ತಾರರು ಹೇಳಿದ್ದಾರೆ.

    ಕರೊನಾ ಲಸಿಕೆ ಫಲಪ್ರದವಾಗದೇ ಇರಬಹುದು…! ಮುಂಚೂಣಿ ದೇಶದ ನಾಯಕನ ಕಳವಳಕಾರಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts