More

    ಭಾರತದ ಪ್ರಭಾವ ತಗ್ಗಿಸಲು ಚೀನಾ ಯತ್ನ

    ಭಾರತದ ಪ್ರಭಾವ ತಗ್ಗಿಸಲು ಚೀನಾ ಯತ್ನಎನ್.ಪಾರ್ಥಸಾರಥಿ 
    ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ
    ಕಣಿವೆ, ಪ್ರಪಾತಗಳಿಂದ ಕೂಡಿದ ಪೂರ್ವ ಲಡಾಖ್​ನ ಗಾಲ್ವಾನ್ ನದಿ ಭಾಗದಲ್ಲಿ ನಮ್ಮ ಕಡೆಯಿಂದ ಈಗಾಗಲೇ ರಸ್ತೆ ನಿರ್ವಣವಾಗಿದ್ದು, ನದಿಗೆ ಸೇತುವೆ ನಿರ್ವಿುಸಲಾಗುತ್ತಿದೆ. ಅದು ನಮ್ಮ ಭಾಗವೇ. ಇದನ್ನು ನೋಡಿ ಚೀನಾ ಕೂಡ ರಸ್ತೆ ಇತ್ಯಾದಿ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿದೆ. ಆದರೆ ಮೊನ್ನಿನ ಘಟನೆಯ ಹಿಂದೆ ಬೇರೆ ಬೇರೆ ಕಾರಣಗಳಿವೆ. ಕರೊನಾ ವಿಚಾರವಾಗಿ ಚೀನಾ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂದು ವಿಶ್ವದ ಬಹುತೇಕ ದೇಶಗಳು ಅಸಮಾಧಾನ ಹೊಂದಿವೆ.

    ಹಾಗೇ, ಚೀನಾದಿಂದ ಕೈಗಾರಿಕೆಗಳನ್ನು ಸ್ಥಳಾಂತರಿಸುವ ಕುರಿತು ಹಲವು ದೇಶಗಳು ಆಲೋಚಿಸುತ್ತಿವೆ. ಈ ಪೈಕಿ ಕೆಲ ಉದ್ಯಮಗಳು ಭಾರತಕ್ಕೆ ಬರುವ ಕುರಿತೂ ಸುದ್ದಿ್ದಳಿವೆ. ಇದಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದಾಗಲೇ ಚೀನಾ ಜತೆಗೆ ಟ್ರೇಡ್ ವಾರ್ ಶುರುಮಾಡಿದ್ದಾರೆ. ಇದು ಸಾಲದೆಂಬಂತೆ, ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಒಕ್ಕೂಟವು ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಆಗ್ರಹ ಮುಂದಿಟ್ಟಿದೆ. ಈ ಎಲ್ಲ ಕಾರಣಗಳಿಂದ ಅಂತಾರಾಷ್ಟ್ರೀಯವಾಗಿ ಚೀನಾ ಮುಜುಗರಕ್ಕೆ ಒಳಗಾಗಿದೆ. ಇತ್ತ, ಭಾರತದ ಪ್ರಭಾವ ಬೆಳೆಯುತ್ತಿದೆ.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ಹೀಗಾಗಿ ತನ್ನ ಮೇಲುಗೈಯನ್ನು ತೋರ್ಪಡಿಸಲೋಸುಗ ಚೀನಾ ಹೀಗೆ ವರ್ತಿಸಿದೆ ಎನ್ನಬಹುದು. ಲಡಾಖ್ ವಲಯದಲ್ಲಿ ಭಾರತ ಮೂಲಸೌಕರ್ಯ ವರ್ಧಿಸುವುದನ್ನು ನಿಲ್ಲಿಸುವುದು, ಭಾರತವನ್ನು ದಕ್ಷಿಣ ಏಷ್ಯಾಕ್ಕೆ ಸೀಮಿತಗೊಳಿಸುವುದು ಮತ್ತು ಜಾಗತಿಕವಾಗಿ ಭಾರತದ ಪ್ರಭಾವವನ್ನು ತಗ್ಗಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ನೇಪಾಳವನ್ನೂ ಎತ್ತಿಕಟ್ಟುತ್ತಿದೆ. ಆದರೆ ಯುದ್ಧವೇನಾದರೂ ನಡೆದರೆ ಎರಡೂ ದೇಶಗಳು ಕನಿಷ್ಠ 20 ವರ್ಷ ಹಿಂದಕ್ಕೆ ಹೋಗುತ್ತವೆ. ಚೀನಾ ಸೇನಾಬಲ ಭಾರತಕ್ಕಿಂತ ಹೆಚ್ಚಿಗೆ ಇದ್ದರೂ, ಅದಕ್ಕೆ ಯುದ್ಧಾನುಭವ ಕಡಿಮೆ. ನಮ್ಮವರಿಗೆ ಯುದ್ಧದ ಅನುಭವ ಹೇರಳವಾಗಿದೆ.

    ಹೀಗಾಗಿ ಕೇವಲ ಸಂಖ್ಯಾಬಲವೊಂದೇ ಗಣನೆಗೆ ಬಾರದು. ಜತೆಗೆ, ಅಂತಾರಾಷ್ಟ್ರೀಯವಾಗಿ ಭಾರತಕ್ಕೆ ಜಾಸ್ತಿ ಬೆಂಬಲ ಇದೆ. ಹೀಗಾಗಿ ಯುದ್ಧದ ಸಂಭವನೀಯತೆ ಕಡಿಮೆಯೆನ್ನಬಹುದು. ಈ ಸಂದರ್ಭದಲ್ಲಿ ರಾಜತಾಂತ್ರಿಕತೆ ಮತ್ತು ರಾಜಕೀಯ ನಾಯಕತ್ವ ಮುಖ್ಯವಾಗುತ್ತದೆ. ಮೋದಿಯವರು ಚೀನಾ ತಂತ್ರಗಳಿಗೆ ಮಣಿಯುವುದಿಲ್ಲ ಎಂಬುದನ್ನು ಈ ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳಬಹುದು.

    ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts