More

    ಚೀನಾದಿಂದ ಪಾಕಿಸ್ತಾನಕ್ಕೆ ಹೋಗಲಿವೆ 4 ಅಟ್ಯಾಕ್​ ಡ್ರೋನ್​ಗಳು

    ನವದೆಹಲಿ: ಪಾಕಿಸ್ತಾನದಲ್ಲಿ ತಾನು ನಿರ್ಮಿಸುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ ಮತ್ತು ಗ್ವದಾರ್​ ಬಂದರಿನಲ್ಲಿ ಹೊಸದಾಗಿ ನಿರ್ಮಿಸಿರುವ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ನೆಲೆಯ ರಕ್ಷಣೆಯ ನೆಪದಲ್ಲಿ ಪಾಕಿಸ್ತಾನಕ್ಕೆ 4 ಅಟ್ಯಾಕ್​ ಡ್ರೋನ್​ಗಳನ್ನು ಮಾರಾಟ ಮಾಡಲು ಚೀನಾ ಮುಂದಾಗಿದೆ.

    ಗ್ವಾದಾರ್​ ಬಂದರು ಬಲೂಚಿನಾಸ್ತಾನದ ನೈಋತ್ಯ ಭಾಗಕ್ಕೆ ಅಂಟಿಕೊಂಡಂತೆ ಇದೆ. ಈ ಪ್ರದೇಶದ ಚೀನಾದ ಮಹತ್ವಾಕಾಂಕ್ಷಿ ಒನ್​ ಬೆಲ್ಟ್​ ಒನ್​ ರೋಡ್​ ಯೋಜನೆಯ ತುಂಬಾ ಮಹತ್ವದ ಭಾಗವಾಗಿದೆ. ಈ ಪ್ರದೇಶದಲ್ಲಿ ಸದಾ ಒಂದಿಲ್ಲೊಂದು ದಾಳಿಗಳು ಸಂಭವಿಸುತ್ತಲೇ ಇರುವುದರಿಂದ, ಅಲ್ಲಿನ ರಕ್ಷಣೆಯ ನೆಪದಲ್ಲಿ ಚೀನಾ ಈ ಡ್ರೋನ್​ಗಳನ್ನು ಪಾಕ್​ಗೆ ಕೊಡುತ್ತಿದೆ.

    ಇದನ್ನೂ ಓದಿ: ಭಾರತವನ್ನು ಮಣಿಸುವ ಗುರಿ, ಭೂತಾನ್​ನೊಂದಿಗೆ ಚೀನಾ ಕಿತಾಪತಿ

    ವಿಂಗ್​ ಲೂಂಗ್​ 2 ಎಂಬ 48 ಜಿಜೆ-2 ಡ್ರೋನ್​ಗಳನ್ನು ಚೀನಾ ವಿನ್ಯಾಸಗೊಳಿಸಿದೆ. ಪಾಕಿಸ್ತಾನದ ವಾಯುಪಡೆಯ ಬಳಕೆಗೂ ಲಭ್ಯವಾಗುವ ರೀತಿಯಲ್ಲಿ ಈ ಡ್ರೋನ್​ಗಳನ್ನು ಜಂಟಿಯಾಗಿ ತಯಾರಿಸಲು ಚೀನಾ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ.

    ಈ ಅಟ್ಯಾಕ್​ ಡ್ರೋನ್​ಗಳಲ್ಲಿ 12 ಗಗನದಿಂದ ಗಗನಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಜೋಡಣೆ ಮಾಡಲಾಗಿರುತ್ತದೆ. ಟರ್ಕಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಯುಎಇ ಬೆಂಬಲಿತ ಬಂಡುಕೋರರು ಚೀನಾದ ಈ ಡ್ರೋನ್​ಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ, ಭಾರತದ ವಿರುದ್ಧ ಉಗ್ರರು ಕೂಡ ಈ ಡ್ರೋನ್​ಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಡಿಫೆನ್ಸ್​ ಸ್ಟ್ಯಾಂಡಿಂಗ್ ಕಮಿಟಿಯ 11 ಸಭೆಗಳಿಗೆ ಹಾಜರಾಗಿಲ್ಲ ರಾಹುಲ್ ಗಾಂಧಿ: ಆದರೂ ಸೇನೆಯನ್ನು ಟೀಕಿಸ್ತಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts