More

    ಡಿಜಿಟಲ್ ಕರೆನ್ಸಿ ವಹಿವಾಟು ಶುರು ಮಾಡಲಿದೆ ಚೀನಾ

    ಬೀಜಿಂಗ್: ಪ್ರಮುಖ ನಗರಗಳಲ್ಲಿ ಶೀಘ್ರವೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು ಮಾಡುವುದಾಗಿ ಚೀನಾ ಶುಕ್ರವಾರ ಘೋಷಿಸಿದೆ. ಈ ಸಂಬಂಧ ಆನ್​ಲೈನ್ ಹೇಳಿಕೆ ಬಿಡುಗಡೆ ಮಾಡಿರುವ ಚೀನಾದ ವಾಣಿಜ್ಯ ಸಚಿವಾಲಯ, ಬೀಜಿಂಗ್​-ತಿಯಾಂಜಿನ್​-ಹೆಬೈ ಪ್ರದೇಶ, ಯಾಂಗ್ಟ್​ಝೆ ರಿವರ್ ಡೆಲ್ಟಾದ ಪೂರ್ವ ಪ್ರದೇಶ, ಪರ್ಲ್​ ರಿವರ್ ಡೆಲ್ಟಾದ ಗ್ರೇಟರ್ ಬೇ ಏರಿಯಾ ಮತ್ತು ಕೆಲವು ಮಧ್ಯ ಪಶ್ಚಿಮ ಚೀನಾದ ಕೆಲವು ನಗರಗಳಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಶೀಘ್ರವೇ ಶುರುವಾಗಲಿದೆ ಎಂದು ಘೋಷಿಸಿದೆ.

    ಇದನ್ನೂ ಓದಿ: ರಾಜಸ್ಥಾನದಲ್ಲಿ ಕರ್ನಾಟಕದ ಟೆಕ್ನಿಕ್ ನಡೆಯಲಿಲ್ಲ: ಸಂಭ್ರಮಿಸಿದ ಗೆಹ್ಲೋಟ್​

    ಇದಕ್ಕೂ ಮುನ್ನ, ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು ಆಂತರಿಕವಾಗಿ ಬೃಹತ್ ಪ್ರಮಾಣದಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಆರಂಭಿಸಿವೆ. ಡಿಜಿಟಲ್ ವ್ಯಾಲೆಟ್ ಅನ್ನು ಪರೀಕ್ಷಿಸಲಾಗುತ್ತಿದೆ. ಬ್ಯಾಂಕ್ ಆಫ್​ ಚೀನಾ, ಚೀನಾ ಕನ್​ಸ್ಟ್ರಕ್ಷನ್ ಬ್ಯಾಂಕ್​, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಅಗ್ರಿಕಲ್ಚರ್​ ಬ್ಯಾಂಕ್ ಆಫ್ ಚೀನಾ ಎಂಬ ನಾಲ್ಕು ಬ್ಯಾಂಕುಗಳು ಈ ಪರೀಕ್ಷಾ ಪ್ರಯೋಗ ನಡೆಸಿದ್ದು, ಫಲಿತಾಂಶದಲ್ಲೂ ಯಶಸ್ಸು ಗಳಿಸಿವೆ. ಡಿಜಿಟಲ್ ಕರೆನ್ಸಿ ವಹಿವಾಟು ಆರಂಭಿಸುವುದರೊಂದಿಗೆ ಚೀನಾ ಜಗತ್ತಿನ ಮೊದಲ ಡಿಜಿಟಲ್ ಕರೆನ್ಸಿ ಹೊಂದಿದ ದೇಶವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಈ ತಿಂಗಳ ಆರಂಭದಲ್ಲೇ ವರದಿಯೊಂದನ್ನು ಪ್ರಕಟಿಸಿತ್ತು.

    ಇದನ್ನೂ ಓದಿ: ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಯೋಗಾಭ್ಯಾಸ

    ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ಚೀನಾದ ಈ ನಡೆ ಬಲ ತುಂಬಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಚೀನಾ ಈ ವಿಷಯದಲ್ಲಿ ಮುಂದಿದೆ ಎಂದು ದ ಬ್ರೂಕಿಂಗ್ಸ್ ಇನ್​ಸ್ಟಿಟ್ಯೂಟ್ ವರದಿ ತಿಳಿಸಿದೆ. ಇದೇ ವೇಳೆ, 2019ರಲ್ಲಿ ಸ್ವಿಜರ್ಲೆಂಡ್​ನ ಬ್ಯಾಂಕ್ ಆಫ್ ಇಂಟರ್​ನ್ಯಾಷನಲ್ ಸೆಟಲ್​ಮೆಂಟ್ಸ್​ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ ಶೇಕಡ 80 ಕೇಂದ್ರೀಯ ಬ್ಯಾಂಕುಗಳು ಸ್ವತಃ ಡಿಜಿಟಲ್ ಕರೆನ್ಸಿ ಹೊಂದುವ ಬಗ್ಗೆ ಆಸಕ್ತಿ ವಹಿಸಿರುವುದು ಕಂಡುಬಂದಿದೆ. ಜಿ7 ರಾಷ್ಟ್ರಗಳು ಕೂಡ ಸೆಂಟ್ರಲ್ ಬ್ಯಾಂಕ್ ಪ್ರಾಯೋಜಿತ ಡಿಜಿಟಲ್ ಕರೆನ್ಸಿ ಹೊಂದುವ ವಿಚಾರಕ್ಕೆ ಇಂಬು ಕೊಟ್ಟಿವೆ. (ಏಜೆನ್ಸೀಸ್)

    ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts