More

    ಲಡಾಖ್ ಪ್ರದೇಶದಲ್ಲಿ ಹಿಡಿತ ಬಲಪಡಿಸುತ್ತಿದೆ ಚೀನಾ ಸೇನೆ ?!

    ಲಢಾಕ್​ : ಭಾರತ ಕರೊನಾದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಚೀನಾದ ಸೇನೆಯು ಪೂರ್ವ ಲಡಾಖ್​​ ಪ್ರದೇಶದಲ್ಲಿ ತನ್ನ ಹಿಡಿತವನ್ನು ಬಲಪಡಿಸುತ್ತಿದೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ. ಚಳಿಗಾಲದ ನಿಯೋಜನೆಗಳನ್ನು ಕಡಿಮೆಗೊಳಿಸುವುದರ ಬದಲಿಗೆ ಚೀನಾ ಸೈನ್ಯವು ಪೂರ್ವ ಲಡಾಕ್​​ನ ಆಳ ಪ್ರದೇಶಗಳಲ್ಲಿ ಶಾಶ್ವತ ವಸತಿಗಳನ್ನು ಮತ್ತು ಡಿಪೋಗಳನ್ನು ನಿರ್ಮಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ ಎನ್ನಲಾಗಿದೆ.

    ಭಾರತ ಚೀನಾ ನಡುವೆ ನಡೆಯುತ್ತಿರುವ ನಿರಂತರ ಮಾತುಕತೆಗಳ ಮಧ್ಯೆ ಆಕ್ರಮಣಕಾರಿ ನಿಲುವನ್ನು ಚೀನಾ ಪ್ರದರ್ಶಿಸುತ್ತಿದೆ. ಫೆಬ್ರವರಿಯಲ್ಲಿ ಉಭಯರಾಷ್ಟ್ರಗಳ ಸೇನೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರದೊಂದಿಗೆ ಗಡಿ ಪ್ರದೇಶದ ಪರಿಸರ ತಿಳಿಯಾಗಿತ್ತು. ಇದೀಗ ಹೊಸದಾಗಿ ಅಕ್ಸಾಯಿ ಚಿನ್​​ನ ಉತ್ತರಕ್ಕೆ ಬರುವ ಕಾಂಗ್ಸಿವರ್​ ಮತ್ತು ಟಿಬೆಟ್​ನ ಲಢಾಕ್ ಫ್ರಾಂಟಿಯರ್​ನ ರುಡೋಕ್​ ನಡುವೆ ಚೀನಾ ನಿರ್ಮಿಸಿರುವ ಶಾಶ್ವತ ನೆಲೆಗಳು ಆತಂಕಕ್ಕೆ ಎಡೆಮಾಡಿವೆ ಎನ್ನಲಾಗಿದೆ.

    ಇದನ್ನೂ ಓದಿ: ಭಾರತದ ಅಗತ್ಯ ಪೂರೈಸಲು ಓವರ್​ಟೈಮ್ : ಚೀನಾ ಅಂಬಾಸಿಡರ್ ಭರವಸೆ

    ಚೀನಾ ಸೇನೆ ನಿರ್ಮಾಣ ಮಾಡಿದೆ ಎನ್ನಲಾದ ಶಾಶ್ವತ ಕಟ್ಟಡಗಳು ಮತ್ತು ಮಿಲಿಟರಿ ಸ್ಥಾಪನೆಗಳಲ್ಲಿ ಕ್ಸಿನ್‌ಜಿಯಾಂಗ್ ಸ್ವಾಯತ್ತ ಪ್ರದೇಶದ ನೈರುತ್ಯ ಭಾಗದಲ್ಲಿರುವ ಕ್ಸಾಯ್​ಡುಲ್ಲಾ, ಲಡಾಕ್​ನ ಚಿಪ್ ಚಪ್ ಕಣಿವೆಯಿಂದ ಸ್ವಲ್ಪ ದೂರದಲ್ಲಿರುವ ಪಿಯುನಲ್ಲಿ ಹೆಚ್ಚು ಶಕ್ತಿ ಪಡೆದ ಚೀನಾದ ರೇಡಾರ್ ತಾಣ ಮತ್ತು ಹಾಟ್ ಸ್ಪ್ರಿಂಗ್ಸ್ ಮತ್ತು ಗೊಗ್ರಾ ಪೋಸ್ಟ್‌ನ ಎಲ್‌ಎಸಿ ಕಡೆಗಿರುವ ಕಿರ್ಮ್‌ಗೊ ಟ್ರಾಗ್ಗರ್‌ನಲ್ಲಿನ ಮಿಲಿಟರಿ ಔಟ್‌ಪೋಸ್ಟ್ ಸೇರಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

    ಮತ್ತೊಂದೆಡೆ ಇಂದೇ ಚೀನಾ ಅಧ್ಯಕ್ಷರಾದ ಕ್ಸಿ ಜಿನ್​ಪಿಂಗ್ ಅವರು, ಭಾರತದ ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರಕ್ಕೆ ಸಹಕಾರ ಮತ್ತು ಬೆಂಬಲ ಕೊಡಲು ಚೀನಾ ಸಿದ್ಧವಾಗಿರುವುದಾಗಿ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾಗೆ ಬಲಿಯಾದರು ‘ಶೂಟರ್ ದಾದಿ’

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts