More

    ಚೀನಾದಲ್ಲಿ 2ನೇ ಸುತ್ತಿನ ಕರೊನಾ ಸೋಂಕು, 6 ವಾರಗಳ ಗರಿಷ್ಠಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

    ಬೀಜಿಂಗ್​: ಇಡೀ ಜಗತ್ತಿಗೆ ಕೋವಿಡ್​ 19 ಸೋಂಕು ಹಬ್ಬಿಸಿದ ಚೀನಾದಲ್ಲಿ ಇದೀಗ ಮತ್ತೊಂದು ಸುತ್ತಿನ ಸೋಂಕಿನ ಸಮಸ್ಯೆ ಆರಂಭವಾಗಿದೆ. ವಿದೇಶದಲ್ಲಿ ನೆಲೆಸಿದ್ದು ಇದೀಗ ಸ್ವದೇಶಕ್ಕೆ ಮರಳಿರುವ ಚೀನಿಯರಿಂದಾಗಿ ಸೋಂಕು ಮತ್ತೆ ಹಬ್ಬಲಾರಂಭಿಸಿದೆ. ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 6 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

    ಶನಿವಾರ 99 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಭಾನುವಾರದಂದು ಹೊಸದಾಗಿ 108 ಜನರಲ್ಲಿ ಸೋಂಕು ಖಚಿತಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಮಾರ್ಚ್​ 5ರಂದು ಒಂದೇ ದಿನ 143 ಜನರಲ್ಲಿ ಸೋಂಕು ದೃಢಪಟ್ಟಿದ್ದು ಇದುವರೆಗಿನ ಗರಿಷ್ಠವಾಗಿದೆ.

    ಭಾನುವಾರದ ಸೋಂಕಿತರ ಹೆಚ್ಚಳದೊಂದಿಗೆ ಚೀನಾದಲ್ಲಿ ಸೋಂಕುಪೀಡಿತರ ಸಂಖ್ಯೆ ಒಟ್ಟು 82,160ಕ್ಕೆ ಏರಿಕೆಯಾಗಿದ್ದು, 3,341 ಜನರು ಅಸುನೀಗಿದ್ದಾರೆ.

    ಮನೆಯಲ್ಲಿ ಚಹಾ ಹೀರುತ್ತಾ, ಸಾಕುನಾಯಿ ಜತೆ ಸಮಯ ಕಳೆದ ಜಪಾನ್​ ಪ್ರಧಾನಿ, ಟ್ವಿಟರ್​ನಲ್ಲಿ ಪರ-ವಿರೋಧ ಜಟಾಪಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts