More

    ಚೀನಾ ಕೋವಿಡ್​ 19ರ ತೀವ್ರತೆಯನ್ನು ಬೇಕೆಂದೇ ಬಚ್ಚಿಟ್ಟಿತ್ತು: ಅಮೆರಿಕದ ವರದಿ

    ವಾಷಿಂಗ್ಟನ್​: ವಿಶ್ವಮಾರಿಯಾಗಿ ಪರಿಣಮಿಸಿರುವ ಕೋವಿಡ್​ 19ರ ಉಗಮ ಸ್ಥಾನ ಚೀನಾ ಎಂಬುದು ಸ್ಪಷ್ಟವಾಗಿದೆ. ಆದರೆ, ಕರೊನಾ ಸೋಂಕಿನ ಹರಡುವಿಕೆ ಹಾಗೂ ಅದರ ಸಾಂಕ್ರಮಿಕ ಗುಣದ ಬಗೆಗಿನ ಮಾಹಿತಿಯನ್ನು ಚೀನಾ ಬೇಕೆಂದೇ ಮುಚ್ಚಿಟ್ಟಿತ್ತು ಎಂದು ಅಮೆರಿಕ ಆರೋಪಿಸಿದೆ.

    ಕೋವಿಡ್​ 19 ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ವಸ್ತುಗಳ ದಾಸ್ತಾನನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಅದು ಹೀಗೆ ನಡೆದುಕೊಂಡಿರಬಹುದು ಎಂದು ಅಮೆರಿಕದ ಆಂತರಿಕ ಭದ್ರತಾ ವರದಿಯಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ.

    ಇದನ್ನೂ ಓದಿ:ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    ಮೇ 1ರಂದು ಅಮೆರಿಕ ಸರ್ಕಾರಕ್ಕೆ ಸಲ್ಲಿಸಲಾಗಿರುವ ಆಂತರಿಕ ಭದ್ರತಾ ವರದಿಯಲ್ಲಿ ಈ ಆರೋಪವನ್ನು ಮಾಡಲಾಗಿದ್ದು, ಇದೀಗ ಬಹಿರಂಗವಾಗಿದೆ. ಕೋವಿಡ್​ 19 ವಿಶ್ವವ್ಯಾಪಿಯಾಗಿ ಹರಡಲು ಚೀನಾ ಕಾರಣ. ಇದರ ಹರಡುವಿಕೆ ಮತ್ತು ಸಾಂಕ್ರಾಮಿಕತೆ ಬಗ್ಗೆ ಜನವರಿಯಲ್ಲೇ ಅದಕ್ಕೆ ಗೊತ್ತಿತ್ತು. ಆದರೆ, ಅದನ್ನು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸದೆ ಮಾಹಿತಿಯನ್ನು ಬಚ್ಚಿಟ್ಟಿತ್ತು. ಆದ್ದರಿಂದ, ಇದಕ್ಕೆ ಅದನ್ನೇ ಉತ್ತರದಾಯಿಯನ್ನಾಗಿ ಮಾಡಬೇಕು ಎಂದು ಅಮೆರಿಕದ ಗೃಹ ಖಾತೆ ಕಾರ್ಯದರ್ಶಿ ಮೈಕ್​ ಪಾಂಪಿಯೋ ಭಾನುವಾರ ಹೇಳಿದ ಬೆನ್ನಲ್ಲೇ ಸೋಮವಾರ ಈ ವರದಿ ಬಹಿರಂಗವಾಗಿದೆ.

    ಕೋವಿಡ್​ 19 ವಿಶ್ವವ್ಯಾಪಿಯಾಗಿ ಹರಡುತ್ತಿರುವಂತೆ ಚೀನಾ ಸರ್ಕಾರ ಆಮದು ಪ್ರಮಾಣ ಹೆಚ್ಚಿಸಿ ವೈದ್ಯಕೀಯ ವಸ್ತುಗಳ ರಫ್ತು ಪ್ರಮಾಣವನ್ನು ಕಡಿಮೆ ಮಾಡಿತು. ರಫ್ತಿನ ಮೇಲೆ ನಿರ್ಬಂಧ ಹೇರಲಾಗಿತ್ತು ಎಂದು ಹೇಳುವ ಮೂಲಕ ಟ್ರೇಡ್​ ಡೇಟಾವನ್ನು ಬೇಕೆಂದೇ ವಿಳಂಬಿಸಿದ್ದಲ್ಲದೆ, ಗೋಜಲು ಗೋಜಲಾದ ಮಾಹಿತಿ ನೀಡಿತು ಎಂದು ವರದಿಯಲ್ಲಿ ದೂರಲಾಗಿದೆ.

    ಇದನ್ನೂ ಓದಿ: ವರ್ಷಾಂತ್ಯಕ್ಕೆ ಕರೊನಾ ಲಸಿಕೆ ತಯಾರಾಗುವುದು ಖಚಿತ

    ಜನವರಿಯಲ್ಲೇ ಗೊತ್ತಾಗಿದ್ದರೂ ಕೋವಿಡ್​ 19 ಸಾಂಕ್ರಾಮಿಕತೆ ಮಾಹಿತಿಯನ್ನು ಜಗತ್ತಿನಿಂದ ಮುಚ್ಚಿಟ್ಟು, ಈ ಅವಧಿಯಲ್ಲಿ ಸರ್ಜಿಕಲ್​ ಮಾಸ್ಕ್​ ಮತ್ತು ಗ್ಲೌಸ್​, ಗೌನ್​ಗಳ ಆಮದನ್ನು ಹೆಚ್ಚಿಸಿಕೊಂಡಿತು. ಈ ಅವಧಿಯಲ್ಲಿ ಆದರ ಆಮದು ಪ್ರಮಾಣ ಶೇ.95 ಹೆಚ್ಚಳವಾಗಿತ್ತು. ಆಮದು ಮತ್ತು ರಫ್ತಿನ ವಿಷಯವಾಗಿ ಬದಲಾದ ಅದರ ವರ್ತನೆಯಲ್ಲಿ ಭಾರಿ ಬದಲಾವಣೆಯಾಗಿದ್ದು ತುಂಬಾ ಅಸಹಜವಾಗಿತ್ತು ಎಂದು ಹೇಳಲಾಗಿದೆ.

    ಅಮೆರಿಕದಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಡೊನಾಲ್ಡ್​ ಟ್ರಂಪ್​ ಸರ್ಕಾರ ನಿಧಾನವಾಗಿ ಪ್ರತಿಕ್ರಿಯಿಸಿತು ಎಂದು ಪ್ರತಿಪಕ್ಷಗಳು ದೂರಲಾರಂಭಿಸಿವೆ. ಈ ಆರೋಪದಿಂದ ನುಣುಚಿಕೊಳ್ಳಲು ಟ್ರಂಪ್​ ಆಡಳಿತ ಚೀನಾವನ್ನು ಹೊಣೆಯನ್ನಾಗಿಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

    ಇರ್ಫಾನ್​ ಖಾನ್​ ಹಾಗೂ ಶ್ರೀದೇವಿಗೆ ಪಾಕ್​ ನಟ ಸಿದ್ದಿಕಿ ಕ್ಷಮೆ ಕೋರಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts