More

    ಚೀನಾದಲ್ಲಿ ಮನುಷ್ಯರಿಗೂ ಹಬ್ಬಲಾರಂಭಿಸಿತು ಹಕ್ಕಿಜ್ವರ! ಇದು ವಿಶ್ವದಲ್ಲೇ ಮೊದಲು…

    ಬೀಜಿಂಗ್​: ಕರೊನಾ ಸೋಂಕಿನ ಮೂಲಸ್ಥಾನವೆನಿಸಿಕೊಂಡಿರುವ ಚೀನಾ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಕೋಳಿಗಳಲ್ಲಿ ಕಾಣಿಸಿಕೊಳ್ಳುವ ಹಕ್ಕಿ ಜ್ವರ ಚೀನಾದ ನಾಗರಿಕನೊಬ್ಬನಲ್ಲಿಯೂ ಕಾಣಿಸಿಕೊಂಡಿದೆ. ವಿಶ್ವದಲ್ಲೇ ಇದೇ ಮೊದಲನೇ ಬಾರಿಗೆ ಹಕ್ಕಿ ಜ್ವರ ಹಕ್ಕಿಯಿಂದ ಮನುಷ್ಯನಿಗೆ ಹಬ್ಬಿದಂತಾಗಿದೆ.

    ಚೀನಾದ ಜೆನ್ಜಿಯಾಂಗ್ ನಗರದ 41 ವರ್ಷದ ವ್ಯಕ್ತಿಯಲ್ಲಿ ಎಚ್​10ಎನ್​3 ದೃಢವಾಗಿದೆ. ಮೇ 28ರಂದು ಆತನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದೀಗ ಆತನ ಆರೋಗ್ಯ ಸ್ಥಿರವಾಗಿರುವುದಾಗಿ ಚೀನಾದ ಆರೋಗ್ಯ ಇಲಾಖೆ ತಿಳಿಸಿದೆ. ಅದಾಗಿಯೂ ಹಕ್ಕಿಗಳಿಂದ ಈ ಜ್ವರ ಮನುಷ್ಯರಿಗೆ ಹಬ್ಬುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ತಿಳಿಸಲಾಗಿದೆ.

    ಎಚ್​10ಎನ್​3 ಸ್ಟ್ರೇನ್​ ಬೇರೆಲ್ಲ ಸ್ಟ್ರೇನ್​ಗಳಿಗಿಂತ ಅತ್ಯಂತ ಕಡಿಮೆ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೇನ್​ನಿಂದ ಕೋಳಿಗಳಿಗೂ ಹೆಚ್ಚಿನ ಅಪಾಯವಿಲ್ಲ ಎನ್ನಲಾಗಿದೆ. ಚೀನಾದಲ್ಲಿ ಈ ಸ್ಟ್ರೇನ್​ ಮನುಷ್ಯನ ಮೇಲೆ ಹೇಗೆ ಹಬ್ಬಿತು ಎನ್ನುವುದಕ್ಕೆ ಯಾವುದೇ ಮಾಹಿತಿಯನ್ನು ಚೀನಾ ಕೊಟ್ಟಿಲ್ಲ. (ಏಜೆನ್ಸೀಸ್)

    ಬ್ಲ್ಯಾಕ್​ ಫಂಗಸ್​ ಬಗ್ಗೆ ಮೋದಿಗೆ ಮೂರು ಪ್ರಶ್ನೆ ಕೇಳಿದ ರಾಹುಲ್​ ಗಾಂಧಿ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts