More

    ಗಲ್ವಾನ್​ ಘರ್ಷಣೆಗೆ ಜೂಡೋ, ಕರಾಟೆ ಪಟುಗಳನ್ನು ಕಳುಹಿಸಿದ್ದ ಚೀನಾ

    ಬೀಜಿಂಗ್​: ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ನಡೆದ ರಕ್ತಸಿಕ್ತ ಘರ್ಷಣೆಗಾಗಿಯೇ ಚೀನಾ ಜೂಡೋ ಮತ್ತು ಕರಾಟೆಯಂಥ ಕದನಕಲೆಗಳನ್ನು ಬಲ್ಲ ಪಟುಗಳು ಹಾಗೂ ಪರ್ವತಾರೋಹಿಗಳನ್ನು ರವಾನಿಸಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

    ಪರ್ವತಶ್ರೇಣಿಗಳಿಂದ ಕೂಡಿದ ಪ್ರದೇಶದಲ್ಲಿ ಅಣ್ವಸ್ತ್ರಗಳ ಪ್ರಾಬಲ್ಯ ಹೊಂದಿರುವ ಉಭಯ ರಾಷ್ಟ್ರಗಳ ನಡುವೆ ಸದಾ ಉದ್ವಿಗ್ನ ಪರಿಸ್ಥಿತಿ ನೆಲೆಸಿರುತ್ತದೆ. ಆದರೆ, ಜೂ.15ರಂದು ನಡೆದ ರಕ್ತಸಿಕ್ತ ಘರ್ಷಣೆ 5 ದಶಕಗಳಲ್ಲೇ ಮೊದಲನೆಯದ್ದಾಗಿತ್ತು.

    ಇಂಥ ಘರ್ಷಣೆಯಲ್ಲಿ ಭಾಗಿಯಾಗಲೆಂದೇ ಚೀನಾ ಐದು ಹೊಸ ಸಹಾಯಕ ಸೇನಾಪಡೆಗಳ ಡಿವಿಜನ್​ ಅನ್ನು ಗಲ್ವಾನ್​ ಕಣಿವೆಗೆ ಕಳುಹಿಸಿತ್ತು. ಮೌಂಟ್​ ಎವರೆಸ್ಟ್​ ಒಲಿಂಪಿಕ್​ ಜ್ಯೋತಿ ರಿಲೇಯಲ್ಲಿ ಪಾಲ್ಗೊಂಡಿದ್ದ ತಂಡ ಮತ್ತು ಮಿಶ್ರ ಕದನಕಲೆಗಳ ಕ್ಲಬ್​ನ ಹಲವು ಕದನಕಲಿಗಳು ಗಲ್ವಾನ್​ ಕಣಿವೆ ಘರ್ಷಣೆಗೆಂದೇ ಜೂ.15ರಂದು ಲ್ಹಾಸಾಕ್ಕೆ ಬಂದಿದ್ದರು ಎಂದು ಚೀನಾದ ಅಧಿಕೃತ ಮಿಲಿಟರಿ ದೈನಿಕ ಚೈನಾ ನ್ಯಾಷನಲ್​ ಡಿಫೆನ್ಸ್​ ನ್ಯೂಸ್​ ವರದಿ ಮಾಡಿದೆ.

    ಇದನ್ನೂ ಓದಿ: ಅಪರೂಪದ ಚೇಳುಜೇಡ ಪತ್ತೆ ; ದೇಶದಲ್ಲೇ ಅತ್ಯಂತ ವಿರಳ ಕೀಟ

    ಲಡಾಖ್​ನ ಪೂರ್ವಭಾಗದಲ್ಲಿನ ಎಲ್ಲ ವಿವಾದಿತ ಪ್ರದೇಶಗಳಿಗೆ ರವಾನಿಸಲು ಟಿಬೆಟ್​ನ ರಾಜಧಾನಿಯಲ್ಲಿ ಬೃಹತ್​ ಸೇನಾಪಡೆಯನ್ನು ಸಜ್ಜುಗೊಳಿಸಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಚೀನಾದ ರಾಷ್ಟ್ರೀಯ ಟಿವಿ ಪ್ರಸಾರ ಮಾಡಿದೆ.

    ಫೈಟ್​ ಕ್ಲಬ್​ನ ಕದನಕಲಿಗಳನ್ನು ಸೇನೆಗೆ ನೇಮಿಸಿಕೊಳ್ಳುವುದರಿಂದ ಸೇನಾಪಡೆಯ ಹೆಚ್ಚುವರಿ ಶಕ್ತಿ ಲಭಿಸುತ್ತದೆ. ಇವರು ಯಾವುದೇ ಪರಿಸ್ಥಿತಿಗೆ ಬೇಕಾದರೂ ತ್ವರಿತವಾಗಿ ಸ್ಪಂದಿಸಬಲ್ಲವರಾಗಿರುತ್ತಾರೆ ಎಂದು ಟಿಬೆಟ್​ ಕಮಾಂಡರ್​ ವ್ಯಾಂಕ್​ ಹೈಜಿಯಾಂಗ್​ ಹೇಳಿರುವುದಾಗಿ ಚೈನಾ ನ್ಯಾಷನಲ್​ ಡಿಫೆನ್ಸ್​ ನ್ಯೂಸ್​ ಹೇಳಿದೆ.

    ಮಾತೃಭೂಮಿ ವೈಭವ ಹಾಳು ಮಾಡಲು ಬಿಡುವುದಿಲ್ಲ ಎಂದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts