More

    COVID19 ಕೇಸ್​ಗಳ ಸುಳ್ಳು ಲೆಕ್ಕ ಕೊಡ್ತಿದೆಯಾ ಚೀನಾ?: ಹೌದು ಎನ್ನುತ್ತಿದೆ ಹಾಂಕಾಂಗ್​ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ ಸಂಶೋಧನಾ ವರದಿ

    ಬೀಜಿಂಗ್​: ಚೀನಾದ ಮೇನ್​ಲ್ಯಾಂಡ್​ನಲ್ಲಿ ಫೆಬ್ರವರಿ20ರ ವೇಳೆಗಾಗಲೇ 2.32 ಲಕ್ಷಕ್ಕಿಂತಲೂ ಅಧಿಕ ಜನರಿಗೆ COVID19 ಸೋಂಕು ತಗುಲಿದ್ದಿರಬಹುದು. ಇದು ಚೀನಾ ಅಧಿಕೃತವಾಗಿ ಪ್ರಕಟಿಸಿದ ಅಂಕಿ ಅಂಶಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ಹೊಸ ಸಂಶೋಧನಾ ವರದಿಯಲ್ಲಿ ಹಾಂಕಾಂಗ್​​ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನ ಪರಿಣತರು ಅಂದಾಜಿಸಿದ್ದಾರೆ.

    ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್(ಎನ್​ಎಚ್​ಸಿ)​ ಅಂದು 55, 508 ಕೇಸ್​ಗಳು ಪತ್ತೆಯಾಗಿವೆ ಎಂದು ಪ್ರಕಟಿಸಿತ್ತು. ಆದರೆ ರೋಗದ ವ್ಯಾಖ್ಯಾನವನ್ನು ಅನ್ವಯಿಸಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತಿತ್ತು. ಜನವರಿ 15 ಮತ್ತು ಮಾರ್ಚ್​ 3ರ ಅವಧಿಯಲ್ಲಿ ಎನ್​ಎಚ್​ಸಿ COVID 19 ಸೋಂಕಿಗೆ ಏಳು ಬೇರೆ ಬೇರೆ ವ್ಯಾಖ್ಯಾನಗಳನ್ನು ನೀಡಿತ್ತು. ದ ಲ್ಯಾನ್ಸೆಟ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿರುವ ಪ್ರಕಾರ, “ಒಂದೊಮ್ಮೆ ಐದನೇ… ವ್ಯಾಖ್ಯಾನವನ್ನು ಸರಿಯಾದ ಟೆಸ್ಟಿಂಗ್ ಕೆಪಾಸಿಟಿ ಮೂಲಕ ಸರ್ವತ್ರ ಅನ್ವಯಿಸಿದ್ದರೆ ಚೀನಾದಲ್ಲಿ ವರದಿಯಾಗಿದ್ದ 55,508 ಕೇಸ್​ಗಳ ಬದಲಾಗಿ ಆ ಸಂಖ್ಯೆ 2020ರ ಫೆ.20ರಂದು 2,32,000 ಆಗಿರುತ್ತಿತ್ತು” ಎಂಬ ಅಂಶವಿದೆ.

    ಸೋಂಕು ಆರಂಭವಾದಾಗ ಅದಕ್ಕೆ ಸಂಬಂಧಿಸಿದ ವ್ಯಾಖ್ಯಾನ ತುಂಬ ಸಂಕ್ಷಿಪ್ತವಾಗಿತ್ತು. ನಂತರದ ದಿನಗಳಲ್ಲಿ ಹೆಚ್ಚು ಹೆಚ್ಚು ಸೋಂಕು ಹರಡತೊಡಗಿದಂತೆ ವ್ಯಾಖ್ಯಾನವೂ ವಿಸ್ತೃತವಾಗುತ್ತ ಹೋಯಿತು. ವುಹಾನ್​, ಚೀನಾ ಅಥವಾ ಇತರೆ ಕೇಸ್​ಗಳ ಲಿಂಕ್​ಗಳಿಲ್ಲದ ಕೆಲವು ಮೈಲ್ಡರ್ ಕೇಸ್​ಗಳ ವಿಚಾರವೂ ಈ ಅಧ್ಯಯನ ವರದಿಯಲ್ಲಿ ಪ್ರಸ್ತಾಪವಾಗಿದೆ.

    ಫೆಬ್ರವರಿ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಸೋಂಕು ಚೀನಾದಲ್ಲಿ ತಲುಪಿದ್ದು, ನಂತರ ಇಳಿಮುಖವಾಗಿದೆ. ಎನ್​ಎಚ್​​ಸಿ ವರದಿ ಪ್ರಕಾರ ಸತತ ಎಂಟನೇ ದಿನ ಯಾವುದೇ ಮರಣ ಸಂಭವಿಸಿಲ್ಲ. (ಏಜೆನ್ಸೀಸ್)

    ಡಬ್ಲ್ಯುಎಚ್​ಒ ಲೀಡ್​ ರೋಲ್​ ಮುಂದಿನ ತಿಂಗಳು ಭಾರತಕ್ಕೆ: COVID19 ಸೋಂಕಿನ ಅವಧಿಯಲ್ಲಿ ಮಹತ್ವದ ಹೊಣೆಗಾರಿಕೆ

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts