More

    ಕಡಿಮೆ ಅವಧಿ, ಹೆಚ್ಚು ಆದಾಯ

    ಚಳ್ಳಕೆರೆ: ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ತಂದುಕೊಡುವ ರೇಷ್ಮೆ ಬೆಳೆ ಉತ್ಪಾದನೆಗೆ ರೈತರು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರೇಷ್ಮೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಸಿ.ಡಿ.ಉಷಾ ಹೇಳಿದರು.

    ರೇಷ್ಮೆ ಇಲಾಖೆ ವತಿಯಿಂದ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ಕ್ಷೇತ್ರೋತ್ಸವ ಮತ್ತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ರೇಷ್ಮೆ ಬೆಳೆಯಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದ್ದೇವೆ. ಹುಳುಗಳು ಚಾಕಿ ಹಂತಕ್ಕೆ ಬಂದಾಗ 30 ದಿನಗಳು ಕಾಯುವ ಅಗತ್ಯವಿಲ್ಲ. ಕೇವಲ 16 ದಿನಗಳಲ್ಲಿ ಗೂಡು ರೈತನ ಕೈ ಸೇರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿಗೆ 600 ರೂ. ಬೆಲೆ ಇದೆ. ಲಭ್ಯವಿರುವ ನೀರಿನಲ್ಲಿ ಉತ್ತಮ ರೇಷ್ಮೆ ಸೊಪ್ಪಿನ ತೋಟ ಬೆಳೆಸಿಕೊಳ್ಳುವ ಕೆಲಸ ಆಗಬೇಕು ಎಂದರು.

    ತಾಲೂಕು ಸಹಾಯಕ ನಿರ್ದೇಶಕ ಕೆ.ಕೆಂಚೋಜಿರಾವ್ ಮಾತನಾಡಿ, ತಾಲೂಕಿನಲ್ಲಿ ರೇಷ್ಮೆ ಬೆಳೆಯುವ 2 ಸಾವಿರ ರೈತರಿದ್ದಾರೆ. ಇಲಾಖೆಯಿಂದ ಬೆಳೆಯುವ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಜಿಪಂ ಸದಸ್ಯೆ ಗೌರಮ್ಮ, ತಾಪಂ ಸದಸ್ಯೆ ಸಾಕಮ್ಮ, ಗ್ರಾಪಂ ಅಧ್ಯಕ್ಷ ಎ.ರಂಗನಾಥ, ಉಪಾಧ್ಯಕ್ಷ ಜಿ.ತಿಪ್ಪೇಸ್ವಾಮಿ, ಸದಸ್ಯ ಚಲುಮೇಶ್, ಕೆ.ಬಸವರಾಜ್, ಜಿ.ಕೆ.ತಿಪ್ಪೇಸ್ವಾಮಿ, ಕರುಣಾಪ್ರಸಾದ್, ಇಲಾಖೆಯ ಜಿ.ರಾಜಗೋಪಾಲ, ಎಚ್.ಕೆ.ಹರಿಕೃಷ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts