More

    ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ

    ಒಂದಾನೊಂದು ಕಾಲದಲ್ಲಿ ಒಬ್ಬ ವೃದ್ಧ ತಂದೆ ತನ್ನ ಮೂವರು ಮಕ್ಕಳೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದನು. ಆ ಪುತ್ರರು ಶ್ರಮಜೀವಿಗಳಾಗಿದ್ದರೂ ಯಾವಾಗಲೂ ಜಗಳವಾಡುತ್ತಿದ್ದರು. ತಂದೆ ಅವರನ್ನು ಒಂದುಗೂಡಿಸಲು ಪ್ರಯತ್ನಿಸಿ, ವಿಫಲನಾಗಿದ್ದನು. ತಿಂಗಳುಗಳು ಕಳೆದವು. ತಂದೆ ಅನಾರೋಗ್ಯಕ್ಕೆ ಒಳಗಾದನು. ಆಗಲೂ ಅವನು ತನ್ನ ಮಕ್ಕಳನ್ನು ಒಗ್ಗಟ್ಟಾಗಿರಲು ಕೇಳಿದನು. ಆದರೆ ಮಕ್ಕಳು ಅವನ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ತಂದೆ ಮಕ್ಕಳಿಗೆ ಪಾಠ ಕಲಿಸಲು ನಿರ್ಧರಿಸಿದನು. ಅವರು ಭಿನ್ನಾಭಿಪ್ರಾಯ ಮರೆಯಲು ಮತ್ತು ಒಟ್ಟಿಗೆ ಇರಲು ಆತ ಒಂದು ಉಪಾಯ ಮಾಡಿದನು.

    ಮಕ್ಕಳನ್ನು ಕರೆದು ‘‘ನಾನು ನಿಮಗೆ ಒಂದು ಕಟ್ಟು ಕೋಲುಗಳನ್ನು ಕೊಡುತ್ತೇನೆ. ಪ್ರತಿ ಕೋಲನ್ನು ಪ್ರತ್ಯೇಕಿಸಿ, ತದನಂತರ ಪ್ರತಿಯೊಂದನ್ನು ಎರಡು ಭಾಗಗಳಾಗಿ ಒಡೆಯಿರಿ. ಮೊದಲು ಮುಗಿಸಿದವರಿಗೆ ಬಹುಮಾನ ನೀಡಲಾಗುವುದು’’ ಎಂದನು. ಮಕ್ಕಳು ಒಪ್ಪಿಕೊಂಡರು. ತಂದೆ ಅವರಿಗೆ ತಲಾ ಹತ್ತು ಕೋಲುಗಳ ಕಟ್ಟುಗಳನ್ನು ಕೊಟ್ಟನು. ನಂತರ ಪುತ್ರರಿಗೆ ಪ್ರತಿ ಕೋಲುಗಳನ್ನು ತುಂಡುಗಳಾಗಿ ಒಡೆಯಲು ಕೇಳಿದನು. ಮಕ್ಕಳು ಕೆಲವೇ ನಿಮಿಷಗಳಲ್ಲಿ ಕೋಲುಗಳನ್ನು ಮುರಿದರು. ಮತ್ತೆ ಅವರ ನಡುವೆ ಬಹುಮಾನಕ್ಕಾಗಿ ಜಗಳ ಪ್ರಾರಂಭವಾಯಿತು. ತಂದೆ ಹೇಳಿದ ‘‘ನನ್ನ ಪ್ರೀತಿಯ ಮಕ್ಕಳೇ, ಆಟ ಇನ್ನೂ ಮುಗಿದಿಲ್ಲ. ನಾನು ಈಗ ನಿಮಗೆ ಇನ್ನೊಂದು ಜೊತೆ ಕೋಲುಗಳನ್ನು ಕೊಡುತ್ತೇನೆ. ಈ ಬಾರಿ ಮಾತ್ರ, ನೀವು ಅವುಗಳನ್ನು ಪ್ರತ್ಯೇಕವಾಗಿ ಅಲ್ಲ, ಒಂದು ಬಂಡಲ್ ಆಗಿ ಒಡೆಯಬೇಕು’’ ಎಂದನು.

    ಪುತ್ರರು ತಕ್ಷಣ ಒಪ್ಪಿ, ಇಡೀ ಕಟ್ಟು ಒಡೆಯಲು ಪ್ರಯತ್ನಿಸಿದರು. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕಟ್ಟು ಮುರಿಯಲು ಸಾಧ್ಯವಾಗಲಿಲ್ಲ. ಆಗ ತಂದೆ ಹೇಳಿದ, ‘‘ಮಕ್ಕಳೇ, ನೋಡಿ…ಪ್ರತಿಯೊಂದು ಕೋಲನ್ನು ಪ್ರತ್ಯೇಕವಾಗಿ ಒಡೆಯುವುದು ನಿಮಗೆ ಸುಲಭವಾಗಿತ್ತು, ಆದರೆ ಕೋಲುಗಳ ಕಟ್ಟು (ಬಂಡಲ್) ಒಡೆಯುವುದು ಸಾಧ್ಯವಾಗಲಿಲ್ಲ. ಅಂದರೆ ಒಗ್ಗಟ್ಟಾಗಿ ಇರುವುದರಿಂದ ಯಾರೂ ನಿಮಗೆ ಹಾನಿ ಮಾಡಲಾರರು. ನೀವು ಜಗಳವಾಡುವುದನ್ನು ಮುಂದುವರಿಸಿದರೆ ಅವರು ನಿಮ್ಮನ್ನು ಸುಲಭವಾಗಿ ಸೋಲಿಸಬಹುದು. ನೀವು ಒಗ್ಗಟ್ಟಿನಿಂದ ಇರಬೇಕೆಂದು ನಾನು ಕೇಳಿಕೊಳ್ಳುತ್ತೇನೆ’’ ಎಂದನು. ನಂತರ, ಮೂವರು ಪುತ್ರರು ಏಕತೆಯಲ್ಲಿ ಶಕ್ತಿ ಇದೆ ಎಂದು ಅರ್ಥಮಾಡಿಕೊಂಡರು. ತಂದೆಗೆ ಒಟ್ಟಿಗೆ ಇರುವುದಾಗಿ ಭರವಸೆ ನೀಡಿದರು.

    ನೀತಿ: ಏಕತೆ ಯಾವಾಗಲೂ ಗೆಲ್ಲುತ್ತದೆ

    | ಸಿಂಚನಾ ನಾಯ್ಕ್, 8ನೇ ತರಗತಿ, ಡಾ. ಜಿವಿ ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಹುಬ್ಬಳ್ಳಿ

    ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ ಒಗ್ಗಟ್ಟಿನ ಶಕ್ತಿ: ಮಕ್ಕಳ ಕಥೆ

    ‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

    ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts