More

    ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ

    ಕೊಡೇಕಲ್: ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜೇಂದ್ರಕುಮಾರ ಹೇಳಿದರು.

    ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಸಮೀಪದ ಬೊಮ್ಮನಗುಡ್ಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳು ಸಮಾಜದ ಅವಿಭಾಜ್ಯ ಅಂಗ. ಅವರ ರಕ್ಷಣೆ ಹಾಗೂ ಅಭಿವೃದ್ಧಿಗೆ ಸಮುದಾಯಗಳ ಪಾತ್ರ ಬಹಳ ಅಗತ್ಯವಾಗಿದೆ. ಮಕ್ಕಳಗಾಗಿಯೇ ೧೦೯೮ ಹಾಗೂ ೧೧೨ ಉಚಿತ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದರೆ ತುರ್ತಾಗಿ ಸ್ಪಂದಿಸಲಾಗುವುದು ಎಂದರು.

    ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ತಡವರಿಸುವಂತೆ ಮಾಡಿದರು. ಶಾಲೆಯಲ್ಲಿ ಶೌಚಗೃಹ ಇದ್ದು ಇಲ್ಲದಂತಾಗಿದೆ. ಈ ಕುರಿತು ಹಲವು ಬಾರಿ ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನೆವಾಗಿಲ್ಲ. ಕೂಡಲೇ ಶೌಚಗೃಹ ದುರಸ್ತಿ ಮಾಡಿ. ಅಲ್ಲದೆ ಈ ವರ್ಷವೇ ನಮ್ಮೂರಿಗೆ ಪ್ರೌಢಶಾಲೆ ಮಂಜೂರಾಗಿದ್ದು, ಆದಷ್ಟು ಬೇಗ ಪ್ರೌಢಶಾಲಾ ಕಟ್ಟಡ ನಿರ್ಮಿಸುವ ಕರ‍್ಯವನ್ನು ಮಾಡಿಕೊಡಿ ಎಂದು ವಿದ್ಯಾರ್ಥಿನಿ ಸಭೆಯ ಗಮನಕ್ಕೆ ತಂದರು.

    ಬೈಲಕುಂಟಿ ಗ್ರಾಪಂ ಪಿಡಿಒ ಸೋಮಶೇಖರಯ್ಯ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಪೋ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಕದ್ರಾಪುರ, ಮುಖ್ಯಗುರುಗಳಾದ ಜುಲೇಖಾಬೇಗಂ, ಶರಣಗೌಡ ಪಾಟೀಲ್, ಶಾಲಾ ಸಂಸತ್ತಿನ ಪ್ರಧಾನಿ ಸಂತೋಷ ಬೂದಿಹಾಳ, ಉಪಪ್ರಧಾನಿ ಶಂಕ್ರಮ್ಮ ಗುಳಬಾಳ ಇದ್ದರು. ಶಶಿಕುಮಾರ ಪತ್ತಾರ ವಂದಿಸಿದರು. ಅಯ್ಯನಗೌಡ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts