More

    ಸಮಸ್ಯೆಗಳ ಅನಾವರಣಗೊಳಿಸಿದ ಮಕ್ಕಳ ಗ್ರಾಮ ಸಭೆ

    ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಗೋನೂರು ಗ್ರಾಪಂನಿಂದ ಬಚ್ಚಬೋರನಹಟ್ಟಿ ಶ್ರೀ ಹೋ.ಚಿ.ಬೋರಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ,ಗ್ರಾಪಂ ವ್ಯಾಪ್ತಿ ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಅಹವಾಲು ಸಲ್ಲಿಸಿ ದರು.

    ಶಾಲೆಗೆ ಶೌಚಗೃಹ,ಕಟ್ಟಡ ದುರಸ್ತಿ,ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ವಿದ್ಯಾರ್ಥಿಗಳು ಜನಪ್ರತಿನಧಿಗಳು,ಅಧಿಕಾರಿಗಳನ್ನು ಒತ್ತಾಯಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಯರ‌್ರಿಸ್ವಾಮಿ,ಗೋನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ,3.50 ಲಕ್ಷ ರೂ.,ವೆಚ್ಚದಲ್ಲಿ ಅಡುಗೆ ಕೋಣೆ ನಿರ್ಮಾಣ ಹಾಗೂ 2.50 ಲಕ್ಷ ರೂ.ವೆಚ್ಚದಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದೆಂದರು.

    ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಗೋನೂರು ಹಾಗೂ ಕಲ್ಲೇನಹಳ್ಳಿಗಳ ಮೂಲ ಸೌಕಯಾಭಿವೃದ್ಧಿಗೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 20.38 ಲಕ್ಷ ರೂ.ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿ ಮಗುವಿಗೂ ಗುರುತಿನ ಚೀಟಿ ವಿತರಿಸಬೇಕು. ಶಿಕ್ಷಕರು ಗುರುತಿನ ಚೀಟಿ ಧರಿಸಿರ ಬೇಕು. ಶಾಲೆಗೆ 15 ನಿಮಿಷ ಮೊದಲು ಶಿಕ್ಷಕರು,ಸಿಬ್ಬಂದಿ ಹಾಜರಿರಬೇಕೆಂದರು.

    ಚಿತ್ರಡಾನ್ ಬಾಸ್ಕೊ ಸಂಸ್ಥೆ ಮಂಜುನಾಥ್,ಆರೋಗ್ಯ ನಿರೀಕ್ಷಕ ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವಿನೋ ದಮ್ಮ,ಆರೋಗ್ಯ ಇಲಾಖೆ ಅಧಿಕಾರಿ ಹನುಮಂತಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗೀತಾ,ಸದಸ್ಯರಾದ ರಾಘವೇಂದ್ರ,ಗಂಗಮ್ಮ ಪಾಪಣ್ಣ, ಅನಿತಾ ಬಸವರಾಜ್,ಕೃಷ್ಣಮೂರ್ತಿ,ಸಾವಿತ್ರಮ್ಮ,ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ,ಉಪಾಧ್ಯಕ್ಷೆ ಗಾಯತ್ರಿ, ಸಿಆರ್‌ಪಿ ಕಿಶೋರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts