More

    ಓಡಿಹೋದ ಬಾಲಮಂದಿರ ಮಕ್ಕಳ ಪತ್ತೆಯಿಲ್ಲ

    ಗಿರೀಶ್ ಗರಗ
    ಬೆಂಗಳೂರು: ರಾಜ್ಯದ ಬಾಲಮಂದಿರಗಳಲ್ಲಿ ಪೋಷಿಸಲಾಗುತ್ತಿರುವ ಮಕ್ಕಳ ಪೈಕಿ ಕಳೆದ 4 ವರ್ಷಗಳಲ್ಲಿ 275 ಮಕ್ಕಳು ಓಡಿ ಹೋಗಿದ್ದು, ಅವರಲ್ಲಿ 125 ಮಂದಿ ಇನ್ನೂ ಪತ್ತೆಯಾಗಿಲ್ಲ. ಬಾಲಕಾರ್ವಿುಕರಾಗಿದ್ದ ಮಕ್ಕಳನ್ನು ‘ಮಕ್ಕಳ ನ್ಯಾಯ’ (ಪೋಷಣೆ- ರಕ್ಷಣೆ) ತಿದ್ದುಪಡಿ ಕಾಯ್ದೆ 2015ರ ಅಡಿ ಬಾಲಮಂದಿರಗಳಲ್ಲಿರಿಸಿ ಪೋಷಿಸಲಾಗುತ್ತದೆ. ಅದರಂತೆ ರಾಜ್ಯದ 30 ಜಿಲ್ಲೆಗಳಲ್ಲಿನ ಬಾಲಕ, ಬಾಲಕಿಯರ ಮತ್ತು ಮನೋವಿಕಲ ಬಾಲಕರ ಬಾಲಮಂದಿರಗಳಲ್ಲಿ ಸಾವಿರಾರು ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ಮಾಡಲಾಗುತ್ತಿದೆ. ಹೀಗೆ ಬಾಲಮಂದಿರಗಳಲ್ಲಿನ ಮಕ್ಕಳ ಪೈಕಿ ಕಳೆದ 4 ವರ್ಷಗಳಲ್ಲಿ 275 ಮಕ್ಕಳು ವಿವಿಧ ಕಾರಣಗಳಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಆದರೆ, ಅವರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 150 ಮಕ್ಕಳನ್ನಷ್ಟೇ ಪತ್ತೆ ಮಾಡಿದೆ.

    ಇದನ್ನೂ ಓದಿ: ರೌಡಿ ಮೂಲಕ ಹಣ ವಸೂಲಿ: ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ಖತರ್​ನಾಕ್ ಐಡಿಯಾ!

    ಓಡಿಹೋದ ಬಾಲಮಂದಿರ ಮಕ್ಕಳ ಪತ್ತೆಯಿಲ್ಲಕಾಣೆಯಾದ ಪ್ರಮಾಣ ಇಳಿಕೆ: ಇಲಾಖೆ ದಾಖಲೆ ಪ್ರಕಾರ, 2016-17ರಿಂದ 2019-20ರ ಜನವರಿ ಅಂತ್ಯ ದವರೆಗೆ 275 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ 2016-17ರಲ್ಲಿಯೇ 106 ಮಕ್ಕಳು ಬಾಲಮಂದಿರ ಗಳಿಂದ ಓಡಿ ಹೋಗಿದ್ದಾರೆ. ಅವರಲ್ಲಿ 67 ಮಕ್ಕಳು ಮಾತ್ರ ಪತ್ತೆಯಾಗಿದ್ದು, ಉಳಿದವರು ಎಲ್ಲಿದ್ದಾರೆಂಬುದೇ ಅಧಿಕಾರಿಗಳಿಗೆ ತಿಳಿದಿಲ್ಲ. ದಾಖಲೆ ಪ್ರಕಾರ, 2017- 18ರಲ್ಲಿ 69, 2018-19ರಲ್ಲಿ 57 ಮತ್ತು 2019-20ರ ಜನವರಿಗೆ 43 ಮಕ್ಕಳು ಕಾಣೆಯಾಗಿದ್ದಾರೆ.

    ಕಾರಣವೇನು?: ಮಕ್ಕಳು ಬಾಲಮಂದಿರದಿಂದ ಓಡಿಹೋಗಲು ಪ್ರಮುಖ ಕಾರಣ, ಅಲ್ಲಿನ ಅತಿಯಾದ ಶಿಸ್ತಿನ ವಾತಾವರಣ. ಬಾಲಮಂದಿರಗಳಿಂದ ಓಡಿ ಹೋದ ಮಕ್ಕಳಲ್ಲಿ ಹೊರ ರಾಜ್ಯದವರೇ ಹೆಚ್ಚು.

    ಹಲವು ವ್ಯವಸ್ಥೆ: ಬಾಲಮಂದಿರಕ್ಕೆ ಬರುವ ಮಕ್ಕಳಿಗಾಗಿ ಹಲವು ವ್ಯವಸ್ಥೆ ಮಾಡಲಾಗಿದೆ. ಆಹಾರ, ಬಟ್ಟೆ,ಆಟವಾಡಲು ಅಗತ್ಯ ವಸ್ತುಗಳನ್ನು ಸರ್ಕಾರದಿಂದ ಒದಗಿಸ ಲಾಗುತ್ತದೆ. ಜತೆಗೆ ಶಿಕ್ಷಣವನ್ನೂ ನೀಡಲಾಗುತ್ತಿದೆ.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    2,386 ಮಕ್ಕಳು: ರಾಜ್ಯದ 60ಕ್ಕೂ ಹೆಚ್ಚಿನ ಬಾಲ ಮಂದಿರಗಳಲ್ಲಿ ಪ್ರಸ್ತುತ 2,386 ಮಕ್ಕಳಿದ್ದಾರೆ. ಅವರಲ್ಲಿ 1,165 ಬಾಲಕರು ಮತ್ತು 1,221 ಬಾಲಕಿಯರು.

    ಇದನ್ನೂ ಓದಿ: ಮದ್ಯಪ್ರಿಯರಿಗಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ದೀದಿ ನಾಡಲ್ಲಿ ಭಾರಿ ಸಂಕಷ್ಟ!

    ಬೆಂಗಳೂರಿನಲ್ಲೇ 55 ಮಕ್ಕಳು ಕಾಣೆ: ಬೆಂಗಳೂರು ನಗರ ವ್ಯಾಪ್ತಿಯ ಮಕ್ಕಳಿಗಾಗಿ ನಿಗದಿ ಮಾಡಿರುವ ಬಾಲಮಂದಿರಗಳಿಂದ ಕಳೆದ 4 ವರ್ಷಗಳಲ್ಲಿ 55 ಮಕ್ಕಳು ಕಾಣೆಯಾಗಿದ್ದಾರೆ. ಅವರಲ್ಲಿ ಒಂದು ಮಗು ಈವರೆಗೆ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ತಪ್ಪಿಸಿಕೊಂಡ 23 ಮಕ್ಕಳಲ್ಲಿ 21 ಮಂದಿಯನ್ನು ಮರಳಿ ಕರೆತರಲಾಗಿದೆ. ಹಾಸನ, ಕೊಡಗು, ಉಡುಪಿ, ಶಿವಮೊಗ್ಗ ಸೇರಿ ಇನ್ನಿತರ ಜಿಲ್ಲೆಗಳ ಬಾಲಮಂದಿರಗಳಿಂದ ಯಾವ ಮಕ್ಕಳು ಓಡಿ ಹೋಗಿಲ್ಲ.

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts