More

    ಮಕ್ಕಳ ಏಳಿಗೆಗೆ ಪಠ್ಯೇತರ ಮುಖ್ಯ: ಬಿಇಒ ಡಾ.ಎಸ್.ಶಂಕರಪ್ಪ ಹೇಳಿಕೆ

    ಚನ್ನಗಿರಿ: ಮಕ್ಕಳಿಗೆ ಪಠ್ಯ ದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಸ್.ಶಂಕರಪ್ಪ ತಿಳಿಸಿದರು.

    ಪಟ್ಟಣದ ಬಾಲಿಕಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶನಿವಾರ ಬ್ಯಾಗ್‌ರಹಿತ ಶಾಲಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮಕ್ಕಳು ಹೆಚ್ಚಿನ ಅಂಕ ಪಡೆಯಲು ಮಕ್ಕಳ ಮೇಲೆ ಪಾಲಕರು ಒತ್ತಡ ಹಾಕುವುದು ಸರಿಯಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕದಷ್ಟೇ ಪಠ್ಯೇತರ ಚಟುವಟಿಕೆ ಪಾಲ್ಗೊಳ್ಳುವಿಕೆ ಮತ್ತು ಆರೋಗ್ಯಕ್ಕೆ ಗಮನ ನೀಡುವುದು ಬಹುಮುಖ್ಯ.

    ಮಕ್ಕಳನ್ನು ಕ್ರಿಯಾಶೀಲರಾಗಿ ತಯಾರಿ ಮಾಡಲು ವಾರದಲ್ಲಿ ಒಂದು ದಿನ ಪುಸ್ತಕರಹಿತ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

    ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸಕಲ ಮೂಲಸೌಕರ್ಯ ಕಲ್ಪಿಸುವ ಜತೆ ಉತ್ತಮ ಶಿಕ್ಷಕರನ್ನು ನೇಮಿಸಿದೆ.

    ಪ್ರತಿ ಮಗುವಿನ ಆಸಕ್ತಿ ಅರಿತು ಅದಕ್ಕೆ ಪ್ರೋತ್ಸಾಹ ನೀಡಿ, ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು ಎಂದರು.

    ಮುಖ್ಯಶಿಕ್ಷಕ ಬಸವರಾಜಪ್ಪ, ಶಿಕ್ಷಕರಾದ ಸ್ವಾಮಿ, ನಿಜಗುಣ, ಮುರುಡಪ್ಪ, ಹೇಮಾವತಿ, ಎಸ್.ಗೀತಾ, ಮಲ್ಲಿಕಾರ್ಜುನ, ರವಿ, ನಾಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts