More

    ಮಕ್ಕಳನ್ನೂ ಸಾಧಕರನ್ನಾಗಿ ರೂಪಿಸಿ

    ಅಳವಂಡಿ: ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅದಕ್ಕೆ ತಕ್ಕ ಶಿಕ್ಷಣವನ್ನು ನೀಡುವ ಮೂಲಕ ಪ್ರತಿಭಾವಂತರನ್ನಾಗಿಸಿ ಎಂದು ಶ್ರೀಸಿದ್ದೇಶ್ವರ ಸಂಸ್ಥಾನಮಠದ ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.

    ಇದನ್ನೂ ಓದಿ: ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ಸಾವು

    ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಆಯೋಜಿಸಿದ್ದ ಉತ್ಸವ 2023-24ನೇ ಸಾಲಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಮಕ್ಕಳನ್ನೂ ನಾಡು ಗುರುತಿಸುವ ಸಾಧಕರನ್ನಾಗಿ ಶಿಕ್ಷಕರು ರೂಪಿಸಬೇಕು. ಎಲ್ಲ ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಅಡಕವಾಗಿರುತ್ತೆ. ಅದನ್ನು ಅನಾವರಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಹಾಗೂ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಜವಾಬ್ದಾರಿ ಕೂಡ ಅತಿ ಅವಶ್ಯ ಎಂದರು.

    ಓದಿಗೆ ಗಮನ ನೀಡಲು ಸಲಹೆ ನೀಡಿ

    ನಿವೃತ್ತ ಪ್ರಾಚಾರ್ಯ ಸೋಮನಗೌಡ ಪಾಟೀಲ ಮಾತನಾಡಿ, ಮಕ್ಕಳನ್ನು ತಿದ್ದಿತೀಡಿ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸುವುದು ಶಿಕ್ಷಕರ ಜವಾಬ್ದಾರಿ ಹಾಗೂ ಪಾಲಕರು ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ.

    ಕಲಿಯುವ ಮಕ್ಕಳನ್ನು ವಸತಿ ಶಾಲೆಯಿಂದ ಪದೇ ಪದೇ ಮನೆಗೆ ಕರೆದುಕೊಂಡು ಹೋಗುವ ಪ್ರವೃತ್ತಿ ಬಿಡಬೇಕು, ಈ ವರ್ತನೆ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಿದಂತೆ. ಮಕ್ಕಳನ್ನು ಮನೆಯಲ್ಲಿ ಪ್ರೀತಿಸಿ, ಶಾಲೆಗೆ ಬಿಟ್ಟಾಗ ಓದಿಗೆ ಗಮನ ನೀಡಲು ಸಲಹೆ ನೀಡಿ ಎಂದರು.

    ಪ್ರಾಚಾರ್ಯ ಅಶೋಕ ಕೊಣ್ಣೂರ, ಹನಕುಂಟಿ ಎಂಡಿಆರ್‌ಎಸ್ ಪ್ರಾಚಾರ್ಯ ನಾಗರಾಜ ಜಾಧವ, ಗ್ರಾಪಂ ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಪ್ರಮುಖರಾದ ಅನ್ವರ ಗಡಾದ, ಮಂಜುನಾಥ ಬೆದವಟ್ಟಿ, ವಿಶ್ವನಾಥ, ಎಚ್.ಮಂಜುನಾಥ, ರೇಣುಕಪ್ಪ, ಅಶೋಕ, ನಜೀರ, ಲಕ್ಷ್ಮವ್ವ, ಮಂಜಪ್ಪ, ಭೀಮೇಶಪ್ಪ, ಯಲ್ಲಪ್ಪ, ಇಂದಿರಾ, ಸಿದ್ದಯ್ಯ, ಅರ್ಜುನ, ಶಂಕರ, ಜಂಬುನಾಥ, ನೀಲಪ್ಪ, ಮಂಜುನಾಥ, ಸಿಆರ್‌ಪಿ ವಿಜಯಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts