More

    ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ: ತೇಜಸ್ವಿನಿ ರಾಘವೇಂದ್ರ

    ಶಿಕಾರಿಪುರ:ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗಿ ಬೇಲಿ ಹೂಗಳ ರೀತಿ ಅಲ್ಲಿಯೇ ಅರಳಿ ಅಲ್ಲಿಯೇ ಬಾಡಿ ಹೋಗಬಾರದು. ಅವರನ್ನು ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತಿç ಸ್ಮಾರಕ ಟ್ರಸ್ಟ್ ಖಜಾಂಚಿ ತೇಜಸ್ವಿನಿ ರಾಘವೇಂದ್ರ ಹೇಳಿದರು.
    ಸೋಮವಾರ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸಿö ಸ್ಮಾರಕ ಟ್ರ¸್ಟï‌ನಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸಿ ಮಾತನಾಡಿ, ಉತ್ತಮ ಶಿಕ್ಷಣ ನಮ್ಮ ಮೊದಲ ಆದ್ಯತೆ. ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಅಕ್ಷರ e್ಞÁನದಿಂದ ಸಾಕ್ಷರ ಸಮಾಜ ನಿರ್ಮಾಣ ಸಾಧ್ಯ. ವಿದ್ಯೆ ಯಾರೂ ಎಂದಿಗೂ ಕದಿಯಲಾರದ ಸಂಪತ್ತು ಎಂದರು.
    ಗ್ರಾಮೀಣ ಮಕ್ಕಳು ಇಂದು ರಾಜ್ಯ ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಮನೆ, ಶಾಲೆ, ಪರಿಸರದಲ್ಲೂ ಅಂತಹ ಪ್ರತಿಭೆಗಳು ಕಾಣಸಿಗುತ್ತಾರೆ. ಟ್ರಸ್ಟ್ನಿಂದ ಹಲವು ವರ್ಷಗಳಿಂದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿವರ್ಷ ರಕ್ತದಾನ, ಶ್ರಮಾದಾನ ಶಿಬಿರಗಳು ಸೇರಿ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗರುತಿಸಿ ಅವರ ಶಿಕ್ಷಣಕ್ಕೆ ಪೂರಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ದತ್ತಿ ಉಪನ್ಯಾಸಗಳನ್ನು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಇಂದು ಮೈತ್ರಿ ಪ್ರೌಢಶಾಲೆ ಮತ್ತು ಕುಮದ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಂತಸವಾಗುತ್ತದೆ ಎಂದು ಹೇಳಿದರು.
    ಮೈತ್ರಿ ಶಾಲೆಯ ಪ್ರಚಾರ್ಯ ವಿಶ್ವನಾಥ್, ಮುಖ್ಯಶಿಕ್ಷಕ ಪ್ರಶಾಂತ್ ಕುಬುಸದ್ ಇತರರಿದ್ದರು.

    ನಮ್ಮ ಮಕ್ಕಳ ಪ್ರತಿಭೆ ಬಗ್ಗೆ ನಮಗೇ ಅರಿವು ಇರುವುದಿಲ್ಲ. ಕೇವಲ ಅಂಕಗಳಿಕೆ ಅಷ್ಟೇ ನಮ್ಮ ಮಾನದಂಡವಾಗಿರುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು. ಉಪೇಕ್ಷೆ ಮಾಡಬಾರದು. ಯಾವ ಕಾರಣಕ್ಕೂ ಮಕ್ಕಳ ಪ್ರತಿಭೆ ಮುದುಡಿಹೋಗಬಾರದು. ಅವರ ಪ್ರತಿಭೆ ಅನಾವರಣಗೊಳ್ಳಬೇಕು.
    | ತೇಜಸ್ವಿನಿ ರಾಘವೇಂದ್ರ
    ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತಿç ಸ್ಮಾರಕ ಟ್ರಸ್ಟ್ ಖಜಾಂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts