More

    ಮಕ್ಕಳ ಮನಸು ಅರಿತು ಪಾಠಮಾಡಿ

    ಹನುಮಸಾಗರ: ಪ್ರಾಥಮಿಕ ಹಂತದ ಶಿಕ್ಷಣ ಮಗುವಿನ ಮುಂದಿನ ಕಲಿಕೆಗೆ ಭದ್ರ ಬುನಾದಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಆರ್.ಕಾಂಬಳೆ ಹೇಳಿದರು.

    ಇದನ್ನೂ ಓದಿ: ನರೇಗಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ವರದಾನ

    ಸಮೀಪದ ಹನುಮನಾಳದ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ 1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಎಫ್. ಎಲ್.ಎನ್. ಕಲಿಕಾ ಮೇಳದಲ್ಲಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಶುಕ್ರವಾರ ಮಾತನಾಡಿದರು.

    ಶಿಕ್ಷಕರು ತಯಾರಿಸಿದ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕುರಿತಾದ ಪಾತ್ಯಕ್ಷಿಕೆಗಳು ಕಲಿಕೆಯಲ್ಲಿ ಹಿಂದುಳಿದ ಮಗುವಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ. ಎಲ್ಲ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಶಿಕ್ಷಕರು ಮೊದಲು ಮಕ್ಕಳ ಮನಸ್ಸನ್ನು ಅರಿತು ಕ್ರೀಯಾತ್ಮಕವಾಗಿ ಬೋಧನೆ ಮಾಡಬೇಕು. ಕಲಿಕಾ ಮೇಳವನ್ನು ಅದ್ಭುತವಾಗಿ ನಿರ್ವಹಿಸಿದ ಶಿಕ್ಷಕರ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.

    ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಪ್ರಧಾನ ಕಾರ್ಯದರ್ಶಿ ಹೈದರಾಲಿ ಜಾಲಿಹಾಳ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಅಹ್ಮದ್ ಹುಸೇನ್ ಆದೋನಿ,

    ನಿರ್ದೇಶಕ ಯಮನಪ್ಪ ಲಮಾಣಿ, ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣವರ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ ಬೆಟಗೇರಿ, ಶರಣಗೌಡ ಗೌಡರ, ವಿಟ್ಟಲ್ ಪತ್ತಾರ್, ವಸಂತ ರಾಜೂರು, ಹನುಮಂತ ಗೋಡೆಕಾರ, ಮುಖ್ಯಶಿಕ್ಷಕ ಹನುಮಂತ ಮಾಲಗಿತ್ತಿ, ಅಜೀಮ್ ಪ್ರೇಮ್ ಜಿ ಫೌಂಡೇಷನ್ ತಾಲೂಕಿನ ಸಂಯೋಜಕರಾದ ಹಾಲೇಶ್, ಜಯಶ್ರೀ ಪಾಟೀಲ್, ಸುಮಂಗಲಾ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts