More

    ನರೇಗಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ವರದಾನ

    ಬಣಕಲ್: ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಮಕ್ಕಳ ಪಾಲನೆಗಾಗಿ ಸರ್ಕಾರದಿಂದ ಕೂಸಿನ ಮನೆ ಯೋಜನೆ ಆರಂಭಿಸಲಾಗಿದೆ ಎಂದು ಬಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎಂ.ಆಶ್ರೀತ್ ಹೇಳಿದರು.
    ಹೊಸಹಳ್ಳಿ ಗ್ರಾಪಂನಲ್ಲಿ ಕೂಸಿನಮನೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಶಿಶುಗಳ ಪಾಲನೆ, ಪೋಷಣೆ ಸರ್ಕಾರ ಮುಂದಾಗಿದ್ದು, ಗ್ರಾಪಂ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ ಎಂದರು.
    ಜಾಬ್‌ಕಾರ್ಡ್ ಪಡೆದಿರುವ ಮಹಿಳೆಯರ ಮಕ್ಕಳಿಗೆ ಈ ಕೂಸಿನ ಮನೆ ವರದಾನವಾಗಿದ್ದು , ಪೌಷ್ಟಿಕ ಆಹಾರ, ಔಷಧ ಮತ್ತಿತರ ಸೌಲಭ್ಯಗಳು ಲಭಿಸಲಿದೆ. ಈ ಮಕ್ಕಳನ್ನು ನಿಗಾವಹಿಸಲು ಗ್ರಾಪಂ ವ್ಯಾಪ್ತಿಯ ಕಾರ್ಮಿಕ ಮಹಿಳೆಗೆ ತರಬೇತಿ ನೀಡಿ ಕೇರ್ ಟೇಕರ್ ನೇಮಿಸಲಾಗಿದೆ ಎಂದು ತಿಳಿಸಿದರು.
    ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು ಪ್ರತಿನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ 6 ತಿಂಗಳ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದು ಹೋಗುವುದು ಅಸಾಧ್ಯ. ಮನೆಯಲ್ಲಿ ಬಿಟ್ಟು ಹೋದ ಮಕ್ಕಳಿಗೆ ತಾಯಿ ಕೆಲಸದಿಂದ ಬರುವವರೆಗೂ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ. ಜತೆಗೆ ಪೌಷ್ಟಿಕ ಆಹಾರ ಕೂಡ ವಂಚಿತವಾಗುತ್ತದೆ. ಇದರಿಂದ ಮಕ್ಕಳು ಅಪೌಷ್ಟಿಕತೆಗೆ ಒಳಗಾಗದಂತೆ ತಡೆಯಲು ಸರ್ಕಾರ ಈ ಕೂಸಿನ ಮನೆ ಯೋಜನೆ ಜಾರಿಗೊಳಿಸಿದೆ ಎಂದರು.
    ಗ್ರಾಪಂ ಪಿಡಿಒ ಸಿಂಚನ, ಉಪಾಧ್ಯಕ್ಷೆ ನಾಟ್ಯ ರಂಜಿತ್, ಸದಸ್ಯೆ ಸುನೀತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts