More

    ಮಕ್ಕಳ ಕಲಿಕೆಗೆ ಸಿದ್ಧ ಕ್ಯಾದಿಗ್ಗೇರಾ ಅಂಗನವಾಡಿ

    ಅರಕೇರಾ: ತಾಲೂಕಿನ ಕ್ಯಾದಿಗ್ಗೇರಾ ಗ್ರಾಮದ ಅಂಗನವಾಡಿ ಕೇಂದ್ರ-2ರ ಕಟ್ಟಡ ದುರಸ್ತಿಗೊಳಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಕಲಿಕೆಯ ವಾತಾವರಣ ನಿರ್ಮಾಣ ಮಾಡಲಾಗಿದೆ.

    ಇದನ್ನೂ ಓದಿ: ಅರ್ಥಶಾಸ್ತ್ರ ಕಲಿಕೆಗೆ ಯುವಜನರು ನಿರಾಶಕ್ತಿ

    35 ಮಕ್ಕಳು ದಾಖಲಿರುವ ಕೇಂದ್ರದಲ್ಲಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮಳೆಯಿಂದ ಕಟ್ಟಡ ಕುಸಿಯುವ ಭೀತಿ ಎದುರಾಗಿತ್ತು. ‘ಸೋರುವ ಕಟ್ಟಡದಲ್ಲೇ ಅಂಗನವಾಡಿ ಚಟುವಟಿಕೆ’ ಎಂಬ ಶೀರ್ಷಿಕೆಯಡಿ ಜುಲೈ 31ರಂದು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

    ಇದರ ಬೆನ್ನಲ್ಲೆ ಮಕ್ಕಳನ್ನು ಬೆರೆಡೆ ಸ್ಥಾಳಾಂತರಿಸಿ, ಕೇಂದ್ರದ ಚಟುವಟಿಕೆ ನಡೆಸಲಾಗಿತ್ತು. 2018-19ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿಯಲ್ಲಿ ದುರಸ್ತಿಗೊಳಿಸಿ ಸುಸಜ್ಜಿತ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ.

    20ವರ್ಷದ ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಮೇಲ್ಚಾವಣಿಗೆ ಕಬ್ಬಿಣದ ಸರಳು, ಮೂರು ಇಂಚು ಸಿಮೆಂಟ್ ಹಾಕಲಾಗಿದೆ. ಹೊಸ ಬಾಗಿಲು, ಎರಡು ಫ್ಯಾನ್ ಅಳವಡಿಸಲಾಗಿದೆ. ಗೋಡೆಗಳಿಗೆ ಮಕ್ಕಳ ಕಲಿಕೆಗೆ ಪೂರಕವಾಗುವ ಆಕರ್ಷಕ ಬಣ್ಣಗಳಿಂದ ಚಿತ್ರಗಳನ್ನು ಬರೆಯಲಾಗಿದೆ. ನೂತನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಮರು ಕಲಿಕೆ ಮುಂದುವರಿಸಿದ್ದಾರೆ.

    ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಗ್ರಾಪಂ ಹೆಚ್ಚಿನ ಕಾಳಜಿ ತೋರಿಸಿ, ಮಕ್ಕಳಿಗೆ ಹೆಚ್ಚುವರಿ ಕಲಿಕಾ ಸಮಗ್ರಿ, ಸಮವಸ್ತ್ರ ವಿತರಣೆ ಮಾಡಬೇಕು. ಶೌಚಗೃಹ ನಿರ್ಮಿಸಿ ಸಿಬ್ಬಂದಿ ಹಾಗೂ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ.
    ಎನ್.ರಾಮಣ್ಣ ಗಣೇಕಲ್, ಶೃತಿ ಸಂಸ್ಕೃತಿ ಸಂಸ್ಥೆ ದೇವದುರ್ಗ ತಾಲೂಕು ಸಂಯೋಜಕ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts