More

    ಕೊಳೆಗೇರಿಯಲ್ಲಿ ಸಲ್ಯೂಷನ್ ಕಿಕ್! ; ಮತ್ತಿನಲ್ಲಿ ಮಕ್ಕಳು

    ಚಿಕ್ಕಬಳ್ಳಾಪುರ :  ನಗರದ ಎಪಿಎಂಸಿ ಯಾರ್ಡಿನ ಹಿಂಭಾಗದಲ್ಲಿ ಕೊಳಗೇರಿಯ ಮಕ್ಕಳು ನಶೆಗಾಗಿ ಸಲ್ಯೂಷನ್ ವಾಸನೆ ಗ್ರಹಿಸುವಿಕೆ ಮಾಹಿತಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಸಿಬ್ಬಂದಿ ನಿಯೋಜನೆ ಮತ್ತು ಪಾಲಕರಿಗೆ ಮಾರ್ಗದರ್ಶನ ನೀಡುವ ಮೂಲಕ ದುಶ್ಚಟ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

    ಇಲ್ಲಿನ 5ನೇ ವಾರ್ಡ್​ನ ಈದ್ಗಾ ಮೈದಾನದ ಸಮೀಪದ ಉದ್ಯಾನ, ಎಪಿಎಂಸಿ ಯಾರ್ಡಿನ ಹಿಂಭಾಗದ ಪ್ರದೇಶದ ಗಿಡಗಳ ನಡುವೆ ಕುಳಿತು ಸಲ್ಯೂಷನ್ ಕೈಗೆ ಹಾಕಿಕೊಂಡು ವಾಸನೆ ಗ್ರಹಿಸುವುದು, ಇದರಿಂದ ಉಂಟಾಗುವ ಗಮ್ಮತ್ತಿನ ನಶೆಯಲ್ಲಿ ಖುಷಿ ಅನುಭವಿಸುವುದು ನಡೆಯುತ್ತಿದ್ದು, ಸ್ಥಳೀಯರು ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದಾರೆ.

    ಮಾಹಿತಿ ಆಧರಿಸಿ ಗುರುವಾರ ಸ್ಥಳಕ್ಕೆ ವೃತ್ತ ನಿರೀಕ್ಷಕ ಪ್ರಶಾಂತ್ ನೇತೃತ್ವದ ತಂಡವು ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ, ಅಷ್ಟೇ ಅಲ್ಲದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್, ಮೆಡಿಕಲ್ ಸ್ಟೋರ್, ಪಂಕ್ಚರ್ ಸೇರಿ ವಿವಿಧ ಅಂಗಡಿ ಮಾಲೀಕರ ಸಭೆಯನ್ನು ನಡೆಸಿ, ಮಕ್ಕಳಿಗೆ ಸಲ್ಯೂಷನ್ ಸೇರಿ ನಶೆ ಏರಿಸುವ ವಸ್ತುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲು ಮುಂದಾಗಿದೆ. ಸಲ್ಯೂಷನ್ ಸೇವನೆಯಲ್ಲಿ ತೊಡಗುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ, ಪ್ರಕರಣಗಳಿಗೆ ಕಡಿವಾಣ ಹಾಕುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts