ಮೈಸೂರು: ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ಗಮನ ಇರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿವೆ. ಇಂದು ಮಕ್ಕಳಿಬ್ಬರು ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ.
ಭಾಗ್ಯ (12) ಮತ್ತು ಕಾವ್ಯಾ (7) ಸಾವಿಗೀಡಾದ ಮಕ್ಕಳು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಗರಾಜು ಮತ್ತು ಚಿಕ್ಕದೇವಮ್ಮ ದಂಪತಿಯ ಪುತ್ರಿ ಭಾಗ್ಯ, ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯಾ ಇಂದು ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಈ ಸಂದರ್ಭದಲ್ಲಿ ಈ ಬಾಲಕಿಯರು ಐಸ್ಕ್ರೀಮ್ ಬಾಕ್ಸ್ನಲ್ಲಿ ಹೋಗಿ ಅವಿತುಕೊಂಡಿದ್ದರು. ಆದರೆ ಅದನ್ನು ತೆರೆದು ವಾಪಸ್ ಹೊರಬರಲಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದರು.
ಸುಮಾರು ಎರಡು ಗಂಟೆ ಕಳೆದರೂ ಮಕ್ಕಳು ಕಾಣಿಸಿರಲಿಲ್ಲ. ಕೆಲವೆಡೆ ಹುಡುಕಿ ಬಳಿಕ ಐಸ್ಕ್ರೀಮ್ ಬಾಕ್ಸ್ ತೆರೆದು ನೋಡಿದಾಗ ಶವಗಳು ಪತ್ತೆಯಾಗಿವೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಸಗೆ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಆದರೆ ಸದ್ಯ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಆಟ ಆಡ್ತ ಆಡ್ತ ಕರೆಂಟ್ ಶಾಕ್ ಹೊಡೆದು ಸಾವಿಗೀಡಾದ ಬಾಲಕ; ಟ್ರಾನ್ಸ್ಫಾರ್ಮರ್ ಕೆಳಗೆ ಬಿದ್ದಿತ್ತು ಪವರ್ಫುಲ್ ತಂತಿ..